Anushka Shetty new Film : ಅನುಷ್ಕಾ ಶೆಟ್ಟಿ ಈ ಹಿಂದೆ ಚಿತ್ರರಂಗದಿಂದ ದೂರ ಉಳಿದಿದ್ದರು. ಇನ್ನು ಟಾಲಿವುಡ್ ಪತ್ರಕರ್ತ ಚೇಯ್ಯರು ಬಾಲು ಅವರು ಅನುಷ್ಕಾ ಚಿತ್ರರಂಗದಿಂದ ದೂರ ಇರಲು ಕಾರಣ ಏನು ಎನ್ನುವುದನ್ನು ತಿಳಿಸಿದ್ದರು.


COMMERCIAL BREAK
SCROLL TO CONTINUE READING

ಸೈಜ್ ಜೀರೋ ಸಿನಿಮಾ ಪಾತ್ರಕ್ಕೆ ಜೀವ ತುಂಬುವ ಸಲುವಾಗಿ ಅನುಷ್ಕ ತೂಕ ಹೆಚ್ಚಿಸಿಕೊಂಡಿದ್ದರು. ಸಿನಿಮಾ ಶೂಟಿಂಗ್‌ ಮುಗಿದ ಮೇಲೆ ನಿಜವಾದ ಸಮಸ್ಯೆ ಶುರುವಾಯಿತು. ಆ ತೂಕ ಇಳಿಸಿಕೊಳ್ಳಲು ನಟಿ ಸಾಕಷ್ಟು ಕಷ್ಟ ಪಟ್ಟರು. ಜೊತೆಗೆ ಮನೆಯಿಂದಲೂ ಹೊರಬರದೇ ಸಿನಿಮಾ ಹಾಗು ಸಾರ್ವಜನಿಕ ಬದುಕಿನಿಂದ ಹೊರಗೆ ಉಳಿದಿದ್ದರು.   


ಇದನ್ನೂ ಓದಿ-SIIMA 2023 Nominations: ಕಾಂತಾರಾ V/S KGF-2; ಪ್ರಶಸ್ತಿ ರೇಸ್‌ನಲ್ಲಿ ಭಾರೀ ಪೈಪೋಟಿ..!‌


ಇನ್ನು ನಟಿ ಅನುಷ್ಕಾ ಅವರ ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ  ಸಿನಿಮಾದ ಟೀಸರ್‌ ರಿಲೀಸ್‌ ಆಗಿದ್ದು, ಅನುಷ್ಕಾ ಅಭಿಮಾನಿಗಳು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಇದೇ ವೇಳೆ ನಟಿ ಅನುಷ್ಕಾ ಚಿತ್ರರಂಕಕ್ಕೆ ಗುಡ್‌ಬೈ ಹೇಳಲಿದ್ದಾರೆ ಎನ್ನುವ ಗುಸುಗುಸು ಸುದ್ದಿಗಳು ಹರಿದಾಡುತ್ತಿವೆ. 


ಸದ್ಯ ವೈರಲ್‌ ಆಗುತ್ತಿರರುವ ಸುದ್ದಿಯಂತೆ ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಚಿತ್ರವೇ ಅನುಷ್ಕಾ ಅವರ ಕೊನೆಯ ಸಿನಿಮಾ. ಇವರು ಚಿತ್ರರಂಗಕ್ಕೆ ವಿದಾಯ ಹೇಳಲು ಸೈಜ್ ಜೀರೋ ಚಿತ್ರವೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ಈ ಬಗ್ಗೆ ನಟಿ ಅನುಷ್ಕಾ ಶೆಟ್ಟಿ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಸಿನಿ ಕರಿಯರ್ ಗೆ ಬ್ರೇಕ್ ನೀಡುವುದರ ಬಗ್ಗೆ ನಟಿ ಏನು ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು  ಕಾದುನೋಡಬೇಕಿದೆ. 


ಇದನ್ನೂ ಓದಿ-Nitin Desai : ಮುಂದಿನ ವಾರ ಜನ್ಮದಿನ ಆಚರಿಸಿಕೊಳ್ಳಬೇಕಿದ್ದ ಕಲಾ ನಿರ್ದೇಶಕ ನೇಣಿಗೆ ಶರಣು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.