Anushka Shetty: ಇಂದು ಅನುಷ್ಕಾ ಶೆಟ್ಟಿ ಹುಟ್ಟುಹಬ್ಬ. ನವೆಂಬರ್ 7, 1981 ರಂದು ಜನಿಸಿದ ಅನುಷ್ಕಾ ಶೆಟ್ಟಿ ಸದ್ಯ 42 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.. ನಿರ್ದೇಶಕ ಪೂರಿ ಜಗನ್ನಾಥ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದರು. ವೃತ್ತಿಯಲ್ಲಿ ಯೋಗ ಶಿಕ್ಷಕಿಯಾಗಿರುವ ಅನುಷ್ಕಾ ಸೂಪರ್ ಮೂವಿ ಆಡಿಷನ್‌ಗೆ ಹಾಜರಾಗಿದ್ದರು. ಅಲ್ಲಿಂದ ಅವರು ಹಿಂದೆ ತಿರುಗಿ ನೋಡಲೇ ಇಲ್ಲ.. 


COMMERCIAL BREAK
SCROLL TO CONTINUE READING

ವಿಕ್ರಮಾರ್ಕೂಡು ಸಿನಿಮಾ ಅನುಷ್ಕಾಗೆ ಬ್ರೇಕ್ ಕೊಟ್ಟಿತ್ತು... ಅರುಂಧತಿ, ಬಿಲ್ಲ, ಮಿರ್ಚಿ ಸಿನಿಮಾಗಳ ಮೂಲಕ ಸ್ಟಾರ್ ಹೀರೋಯಿನ್ ರೇಂಜ್ ಗೆ ಬೆಳೆದರು. ಅವರು ಬಾಹುಬಲಿ ಸರಣಿ ಚಿತ್ರಗಳೊಂದಿಗೆ ಸ್ಟಾರ್‌ ಹಿರೋಯಿನ್‌ ಆದರು. ಯಾವುದೇ ವಿವಾದಗಳಿಲ್ಲದ ವ್ಯಕ್ತಿ ಎಂದೇ ಗುರುತಿಸಿಕೊಂಡಿರುವ ಅನುಷ್ಕಾ ತಕ್ಕಮಟ್ಟಿಗೆ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. 


ಇದನ್ನೂ ಓದಿ-ತಾವು ಓದಿದ ಯೂನಿವರ್ಸಿಟಿಯಲ್ಲೇ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಖುಷಿಯಲ್ಲಿ ನಟಿ


ಸದ್ಯ ರೂ. 6 ಕೋಟಿಯವರೆಗೂ ಸಂಭಾವನೆ ಪಡೆದುಕೊಳ್ಳುವ ಅನುಷ್ಕಾ ಅವರ ಸ್ಥಿರ ಆಸ್ತಿಯನ್ನು ನೋಡಿದರೆ ರೂ. 12 ಕೋಟಿ ಮೌಲ್ಯದ ಮನೆಯನ್ನು ಆಕೆ ಹೊಂದಿದ್ದಾಳೆ.. ನಗರದ ಹೊರವಲಯದಲ್ಲಿ ಫಾರ್ಮ್ ಹೌಸ್ ಕೂಡ ಇದೆ ಎಂದು ವರದಿಯಾಗಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಅನುಷ್ಕಾ ಮನೆಗಳಿವೆ ಎಂಬ ಮಾತು ಕೇಳಿಬರುತ್ತಿದೆ. 


ಅನುಷ್ಕಾ ಶೆಟ್ಟಿ ಬಳಿ ಐಷಾರಾಮಿ ಕಾರುಗಳು ಇವೆ.. ಟೊಯೊಟಾ ಕೊರೊಲ್ಲಾ ಆಲ್ಟಿಸ್ ಕಾರು ಇದೆ. ಇದರ ಮೌಲ್ಯ ರೂ. 20 ಲಕ್ಷ. ಅಲ್ಲದೆ ರೂ. 59.88 ಲಕ್ಷ ಮೌಲ್ಯದ ಆಡಿ Q5 ಮತ್ತು ರೂ. 59 ಲಕ್ಷ ಬೆಲೆಯ Audi A6 ಇದೆ. BMW 6 ನ್ನು ಸಹ ನಟಿ ಖರೀದಿದ್ದು, ಇದರ ಬೆಲೆ 70 ಲಕ್ಷ ಎಂದು ವರದಿಯಾಗಿದೆ.. ಇನ್ನು 2022 ರಲ್ಲಿ ಅನುಷ್ಕಾ ಆಸ್ತಿ ರೂ. 124 ಕೋಟಿ ಎಂದು ಅಂದಾಜಿಸಲಾಗಿದೆ. 2023 ರ ವೇಳೆಗೆ ರೂ. 134 ಕೋಟಿ. ಇದು ಅವರ ಒಟ್ಟು ಆಸ್ತಿ. 


ಇದನ್ನೂ ಓದಿ-ರಾಮ್ ಚರಣ್ ಸಿನಿಮಾ 'ಗೇಮ್ ಚೇಂಜರ್' ಸಾಂಗ್ ಲೀಕ್..! ಇಬ್ಬರ ಬಂಧನ ‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.