Anushka Shetty Birthday: ಬಾಹುಬಲಿ 1 ಮತ್ತು ಬಾಹುಬಲಿ 2 ರ ದೇವಸೇನಾ ಪಾತ್ರದ ಮೂಲಕ ಅನುಷ್ಕಾ ಶೆಟ್ಟಿ ದೇಶಾದ್ಯಂತ ಖ್ಯಾತಿ ಪಡೆದರು. ಇಂದು ನವೆಂಬರ್ 7 ರಂದು ಅನುಷ್ಕಾ ಶೆಟ್ಟಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅನುಷ್ಕಾ ಅವರ ನಿಜವಾದ ಹೆಸರು ಸ್ವೀಟಿ ಶೆಟ್ಟಿ. ದಕ್ಷಿಣದ ಜನಪ್ರಿಯ ನಟಿ ಅನುಷ್ಕಾ ರುದ್ರಮಾದೇವಿ, ಮಿರ್ಚಿ ಮತ್ತು ಅರುಂಧತಿಯಂತಹ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ 'ಬಾಹುಬಲಿ'ಯ 'ದೇವಸೇನಾ' ಪಾತ್ರ ಅವರಿಗೆ ವಿಶ್ವಾದ್ಯಂತ ಖ್ಯಾತಿ ನೀಡಿದೆ.


COMMERCIAL BREAK
SCROLL TO CONTINUE READING

ಅನುಷ್ಕಾ ಶೆಟ್ಟಿ 07 ನವೆಂಬರ್ 1981 ರಂದು ಮಂಗಳೂರಿನಲ್ಲಿ ಜನಿಸಿದರು. ತಮಿಳು ಮತ್ತು ತೆಲುಗು ಚಲನಚಿತ್ರಗಳ ರಾಣಿ ಎಂದು ಅನುಷ್ಕಾ ಶೆಟ್ಟಿಯನ್ನು ಕರೆಯಲಾಗುತ್ತದೆ. ಅನುಷ್ಕಾ ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ವೃತ್ತಿಜೀವನದ ಜೊತೆಗೆ, ಅನುಷ್ಕಾ ಅವರ ಪ್ರೇಮ ಜೀವನ ಕೂಡ ಮುಖ್ಯಾಂಶಗಳಲ್ಲಿದೆ. 


ಇದನ್ನೂ ಓದಿ: ಆಸ್ತಿಯಲ್ಲಿ ವರುಣ್‌ತೇಜ್‌ ಅವರನ್ನೇ ಮೀರಿಸ್ತಾರೆ ಲಾವಣ್ಯ! ಮೆಗಾ ಸೊಸೆ ಎಷ್ಟು ಕೋಟಿಯ ಒಡತಿ ಗೊತ್ತಾ? 


ಖ್ಯಾತ ನಟ ಪ್ರಭಾಸ್ ಹೊರತುಪಡಿಸಿ ಬೇರೆ ಯಾರೊಂದಿಗೂ ಅನುಷ್ಕಾ ಶೆಟ್ಟಿ ಹೆಸರು ಕೇಳಿಬಂದಿಲ್ಲ. ಪ್ರಭಾಸ್‌ಗಾಗಿ ಅನುಷ್ಕಾ ಶೆಟ್ಟಿ ಮದುವೆ ಮುರಿದು ಬಿತ್ತು ಎನ್ನಲಾಗುತ್ತಿದೆ.


ಅನುಷ್ಕಾ ನಟಿಯಾಗಬೇಕೆಂದು ಯೋಚಿಸಿರಲಿಲ್ಲ. ಮೊದಲು ತನ್ನ ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿ ನಂತರ, ಯೋಗ ತರಬೇತುದಾರರಾದರು. ಮುಂಬೈನಲ್ಲಿ ಯೋಗ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ವೈದ್ಯರು ಮತ್ತು ಇಂಜಿನಿಯರ್‌ಗಳ ಕುಟುಂಬದಿಂದ ಬಂದ ಅನುಷ್ಕಾ ಯೋಗ ತರಬೇತುದಾರರಾಗುವ ನಿರ್ಧಾರವು ವಿಭಿನ್ನವಾಗಿತ್ತು. ಇದಲ್ಲದೇ ಪದವಿ ಮುಗಿಸಿದ ಅನುಷ್ಕಾ ಮೂರನೇ ತರಗತಿ ಮಕ್ಕಳಿಗೂ ಪಾಠ ಮಾಡುತ್ತಿದ್ದರು.


ಅನುಷ್ಕಾ ತನ್ನ ಯೋಗ ತರಗತಿಗಳಲ್ಲಿ ನಿರತರಾಗಿದ್ದಾಗ, ನಿರ್ದೇಶಕ ಮೆಹರ್ ರಮೇಶ್ ಅವರನ್ನು ನೋಡಿದರು. ಅವರ ಬಗ್ಗೆ ಪುರಿ ಜಗನ್ನಾಥ್ ಗೆ ತಿಳಿಸಿದರು. ನಂತರ ಅವರು 2005 ರಲ್ಲಿ ನಟನೆಗೆ ಪದಾರ್ಪಣೆ ಮಾಡಿದರು. ಇದಾದ ನಂತರ ಅವರು ಮಹಾನಂದಿ ಚಿತ್ರದಲ್ಲಿ ಕೆಲಸ ಮಾಡಿದರು. ಈ ಎರಡು ಚಿತ್ರಗಳ ನಂತರ ಅನುಷ್ಕಾ ತನ್ನ ತವರಿಗೆ ಮರಳಲು ನಿರ್ಧರಿಸಿದರು. ಆದರೆ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ಫೋನ್ ಕರೆ ಅವರ ಜೀವನವನ್ನೇ ಬದಲಾಯಿಸಿತು. ರಾಜಮೌಳಿ ಅವರು ರವಿತೇಜಾ ಅವರೊಂದಿಗೆ ವಿಕ್ರಮಾರ್ಕುಡು ಚಿತ್ರ ಮಾಡಲು ನಿರ್ಧರಿಸಿದ್ದರು. ಇದರಲ್ಲಿ ಅನುಷ್ಕಾ ಶೆಟ್ಟಿ ಅಭಿನಯಿಸಿದರು. ಈ ಚಿತ್ರವು ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಇದು ಅನುಷ್ಕಾ ಜೀವನವನ್ನೇ ಬದಲಾಯಿಸಿತು.


ಇದನ್ನೂ ಓದಿ: ಮಹೇಶ್ ಬಾಬು ಪತ್ನಿ ನಟಿಸಿರುವ ಏಕೈಕ ಕನ್ನಡ ಸಿನಿಮಾ ಯಾವುದು ಗೊತ್ತೆ? 


'ಬಾಹುಬಲಿ' ಮತ್ತು 'ಬಾಹುಬಲಿ 2' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಜೋಡಿಯು ಭಾರಿ ಸುದ್ದಿ ಮಾಡಿದೆ. ಪ್ರಭಾಸ್ ಮತ್ತು ಅನುಷ್ಕಾ ಅವರ ತೆರೆಯ ಮೇಲಿನ ಕೆಮಿಸ್ಟ್ರಿ ನೋಡಿದ ನಂತರ, ಅವರ ಡೇಟಿಂಗ್ ಸುದ್ದಿ ಎಲ್ಲೆಡೆ ಹರಡಲು ಪ್ರಾರಂಭಿಸಿತು. ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಪರಸ್ಪರ ಸಂಬಂಧದಲ್ಲಿದ್ದಾರೆ ಎಂದು ವದಂತಿ ಶುರುವಾಯಿತು. 


ಅನುಷ್ಕಾ ಅವರ ಮದುವೆ ಫಿಕ್ಸ್ ಆಗಿತ್ತು. ಆದರೆ ಪ್ರಭಾಸ್ ಈ ಮದುವೆಯನ್ನು ನಿಲ್ಲಿಸಿದ್ದರು ಎಂದು ಹೇಳಲಾಗುತ್ತದೆ. ಅನುಷ್ಕಾ ಶೆಟ್ಟಿಯ ವಿವಾಹ ಮುರಿದುಬಿದ್ದಿದ್ದು ಪ್ರೇಮದಿಂದಲ್ಲ. ವೃತ್ತಿಪರ ಕಾರಣಗಳಿಂದಾಗಿ ಮದುವೆ ಮುರಿದುಬಿದ್ದಿದೆ ಎನ್ನಲಾಗುತ್ತದೆ. ವಾಸ್ತವವಾಗಿ, ಪ್ರಭಾಸ್ ಈ ಚಿತ್ರಕ್ಕಾಗಿ ಮೂರು ವರ್ಷಗಳ ಕಾಲ ಬೇರೆ ಯಾವುದೇ ಚಿತ್ರಕ್ಕೆ ಸಹಿ ಮಾಡಲಿಲ್ಲ ಮತ್ತು ಅವರು ಸ್ವತಃ ತುಂಬಾ ಶ್ರಮಿಸಿದರು. ಅನುಷ್ಕಾ ಈ ಯೋಜನೆಯಲ್ಲಿ ಗಂಭೀರವಾಗಿ ಕೆಲಸ ಮಾಡಬೇಕೆಂದು ಅವರು ಬಯಸಿದ್ದರು. ಇನ್ನು ಅನುಷ್ಕಾ ಮದುವೆ ವಿಚಾರಕ್ಕೆ ಬಂದರೆ ಅನುಷ್ಕಾಗೆ ‘ಬಾಹುಬಲಿ’ ಸಿನಿಮಾದ ಮೇಲೆ ಗಮನ ಹರಿಸಲು ಆಗುವುದಿಲ್ಲ ಎಂಬ ಅಭಿಪ್ರಾಯವಿತ್ತು. ಇದೇ ಕಾರಣದಿಂದ ಅನುಷ್ಕಾ ಶೆಟ್ಟಿ ಮದುವೆ ಮುರಿದು ಬಿತ್ತು ಎನ್ನಲಾಗುತ್ತದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.