ಆಸ್ತಿಯಲ್ಲಿ ವರುಣ್‌ತೇಜ್‌ ಅವರನ್ನೇ ಮೀರಿಸ್ತಾರೆ ಲಾವಣ್ಯ! ಮೆಗಾ ಸೊಸೆ ಎಷ್ಟು ಕೋಟಿಯ ಒಡತಿ ಗೊತ್ತಾ?

Lavanya Tripathi Property: ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆ ಮತ್ತು ಆರತಕ್ಷತೆಯೊಂದಿಗೆ ಮೆಗಾ ಹೌಸ್ ವಿವಾಹ ಸಂಭ್ರಮಗಳು ಮುಕ್ತಾಯಗೊಂಡವು. ಆದರೆ ಇವರ ಮದುವೆ ನಡೆಯಲಿದೆ ಎಂದು ಗೊತ್ತಾದಾಗಿನಿಂದ.. ಅವರ ಬಗ್ಗೆ ನಾನಾ ಸುದ್ದಿಗಳು ವೈರಲ್ ಆಗುತ್ತಿವೆ. ಇದೀಗ ಮೆಗಾ ಸೊಸೆ ಆಸ್ತಿಯ ಕುರಿತು ಚರ್ಚೆ ಶುರುವಾಗಿದೆ.   

Written by - Savita M B | Last Updated : Nov 7, 2023, 10:17 AM IST
  • ಮೆಗಾ ಫ್ಯಾಮಿಲಿಯ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆ ಇಟಲಿಯಲ್ಲಿ ಅದ್ಧೂರಿಯಾಗಿ ನೆರವೇರಿತು.
  • ಈ ಸಮಾರಂಭದಲ್ಲಿ ಟಾಲಿವುಡ್ ಸಿನಿಮಾ ತಾರೆಯರು ಸಾಲುಗಟ್ಟಿ ನಿಂತಿದ್ದರು
  • ಇತ್ತೀಚೆಗೆ ಲಾವಣ್ಯ ತ್ರಿಪಾಠಿ ಅವರ ಸುದ್ದಿಯೊಂದು ಹರಿದಾಡುತ್ತಿದೆ.
ಆಸ್ತಿಯಲ್ಲಿ ವರುಣ್‌ತೇಜ್‌ ಅವರನ್ನೇ ಮೀರಿಸ್ತಾರೆ ಲಾವಣ್ಯ! ಮೆಗಾ ಸೊಸೆ ಎಷ್ಟು ಕೋಟಿಯ ಒಡತಿ ಗೊತ್ತಾ? title=

Lavanya Tripathi: ಮೆಗಾ ಫ್ಯಾಮಿಲಿಯ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆ ಇಟಲಿಯಲ್ಲಿ ಅದ್ಧೂರಿಯಾಗಿ ನೆರವೇರಿತು. ಹಾಗೆಯೇ ನಿನ್ನೆ (ನವೆಂಬರ್ 6) ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆದಿದೆ. ಈ ಸಮಾರಂಭದಲ್ಲಿ ಟಾಲಿವುಡ್ ಸಿನಿಮಾ ತಾರೆಯರು ಸಾಲುಗಟ್ಟಿ ನಿಂತಿದ್ದರು. ಆದರೆ ಇವರಿಬ್ಬರ ಮದುವೆಯ ಸುದ್ದಿ ಪ್ರಾರಂಭವಾದಾಗಿನಿಂದ ವರುಣ್ ಮತ್ತು ಲಾವಣ್ಯ ಬಗ್ಗೆ ಕೆಲವು ಸುದ್ದಿಗಳು ಹೈಲೈಟ್ ಆಗುತ್ತಿವೆ. ಇತ್ತೀಚೆಗೆ ಲಾವಣ್ಯ ತ್ರಿಪಾಠಿ ಅವರ ಸುದ್ದಿಯೊಂದು ಹರಿದಾಡುತ್ತಿದೆ.  

ಹೌದು ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ಲಾವಣ್ಯ ತ್ರಿಪಾಠಿ ಅವರ ಆಸ್ತಿಯ ಬಗ್ಗೆ ಒಂದು ಸುದ್ದಿ ವೈರಲ್ ಆಗಿದೆ. ಲಾವಣ್ಯ ತ್ರಿಪಾಠಿ ಒಬ್ಬ ನಟಿಯಾಗಿ ಎಷ್ಟು ಸಂಪತ್ತು ಗಳಿಸಿದ್ದಾರೆ ಮತ್ತು ಕುಟುಂಬದ ಆಸ್ತಿ ಎಷ್ಟು ಇದೆ ಎಂಬುದು ಇದೀಗ ಬಿಸಿಬಿಸಿ ಚರ್ಚೆಯಾಗಿದೆ. 

ಇದನ್ನೂ ಓದಿ-ಆನಂದ್ ನಾ ಕೋಳಿಕೆ ರಂಗ ಇದೇ ನವೆಂಬರ್ 10ಕ್ಕೆ ಬಿಡುಗಡೆ..

ಇನ್ನು ಲಾವಣ್ಯ ತೆಲುಗಿನ ಹುಡುಗಿಯಂತೆ ಕಂಡರೂ ಆಕೆ ಉತ್ತರ ಭಾರತೀಯಳು ಎಂಬುದು ಕೆಲವೇ ಜನರಿಗೆ ಗೊತ್ತು. ಸಾಂಪ್ರದಾಯಿಕ ಕುಟುಂಬದಿಂದ ಬಂದ ಲಾವಣ್ಯ 2012 ರಲ್ಲಿ ಅಂದಳ ರಾಕ್ಷಸಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ತೆಲುಗಿನಲ್ಲಿ ಆಕೆಗೆ ಸಾಲು ಸಾಲು ಅವಕಾಶಗಳು ಬಂದವು. ಆದರೆ ಕೆಲವು ಸಿನಿಮಾಗಳಲ್ಲಿ ಲಾವಣ್ಯ ತೆಗೆದುಕೊಂಡ ನಿರ್ಧಾರಗಳು, ಹೆಚ್ಚು ಎಕ್ಸ್ ಪೋಸ್ ಮಾಡದಿರುವುದು, ಸ್ಕಿನ್ ಶೋ, ಬೆಡ್ ಸೀನ್ , ಲಿಪ್ ಲಾಕ್ ನಿಂದ ದೂರ ಉಳಿದಿದ್ದರಿಂದ ಲಾವಣ್ಯ ಸ್ಟಾರ್ ಹೀರೋಯಿನ್ ಆಗಿ ಬೆಳೆಯಲು ಸಾಧ್ಯವಾಗಲಿಲ್ಲ. 

ಇದನ್ನೂ ಓದಿ-ಈ ಪುಟ್ಟ ಬಾಲಕ ಇಂದು ದಿಗ್ಗಜ ನಟ.. 1 ಕೋಟಿ ಸಂಭಾವನೆ ಪಡೆದ ಮೊದಲ ಹೀರೋ, 5 ಭಾಷೆಗಳ ಸೂಪರ್‌ ಸ್ಟಾರ್!

ಬಹುಶ.. ಅಷ್ಟು ಕಟ್ಟುನಿಟ್ಟಾಗಿರೋದ್ರಿಂದ.. ವರುಣ್ ತೇಜ್‌ ಮನಸ್ಸನ್ನು ಸೆಳೆದಿದ್ದಳು.. ಮತ್ತು ಮೆಗಾ ಸೊಸೆಯಾಗಲು ಸಾಧ್ಯವಾಯಿತು.. ಆದರೆ ಇತ್ತೀಚಿಗೆ ಆಕೆಯ ಆಸ್ತಿಗೆ ಸಂಬಂಧಿಸಿದ ಸುದ್ದಿ ವೈರಲ್ ಆಗುತ್ತಿದೆ. ಕೆರಿಯರ್‌ನಲ್ಲಿ ಬ್ಯುಸಿಯಾಗಿರುವ ಲಾವಣ್ಯ ಒಂದು ಚಿತ್ರಕ್ಕಾಗಿ 50 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ. ಇಂಡಸ್ಟ್ರಿಯಲ್ಲಿ ಮುಂದುವರೆಯುತ್ತಲೇ ಲಾವಣ್ಯ ತ್ರಿಪಾಠಿ ಕೂಡ ಸುಮಾರು 20 ಕೋಟಿ ಆಸ್ತಿ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಆದರೆ ಇದು ಸಾಮಾಜಿಕ ಜಾಲತಾಣಗಳ ಮಾಹಿತಿ ಪ್ರಕಾರ ಮಾತ್ರ ಗೊತ್ತಾಗಿದೆ. ಸಿನಿಮಾ ಮೂಲಕ ಇಷ್ಟು ಆಸ್ತಿ ಸಂಪಾದಿಸಿದ್ದಾರೆ ಎಂದು ವರದಿಯಾಗಿದೆ.. ಕುಟುಂಬ ಹಾಗೂ ಪೂರ್ವಜರಿಂದ ಸಾಕಷ್ಟು ಆಸ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ. ಈ ಲೆಕ್ಕಾಚಾರದ ಪ್ರಕಾರ ವರುಣ್ ತೇಜ್ ಹಾಗೂ ಮೆಗಾ ಫ್ಯಾಮಿಲಿ ಆಸ್ತಿಗಿಂತ ಆಕೆಯ ಆಸ್ತಿ ಕಡಿಮೆ ಇಲ್ಲದಂತಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News