Anushka Shetty Prabhas Marriage : ಡಾರ್ಲಿಂಗ್ ಪ್ರಭಾಸ್ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. 44 ನೇ ವರ್ಷಕ್ಕೆ ಕಾಲಿಟ್ಟರೂ ಇನ್ನೂ ಸಿಂಗಲ್ ಆಗಿದ್ದಾರೆ. ಪ್ರಭಾಸ್‌ ಮದುವೆ ಒಂದೇ ಅಭಿಮಾನಿಗಳನ್ನು ಟೆನ್ಷನ್ ಮಾಡ್ತಿದೆ. ಇದೀಗ ಜನಪ್ರಿಯ ಆಂಗ್ಲ ವೆಬ್‌ಸೈಟ್ ಪ್ರಭಾಸ್ ಮದುವೆಯ ಬಗ್ಗೆ ಆಸಕ್ತಿದಾಯಕ ಲೇಖನವೊಂದನ್ನು ಬರೆದಿದೆ. ಮದುವೆಗೆ ಅಡ್ಡಿಯಾಗುತ್ತಿರುವ ಸಮಸ್ಯೆ ಏನೆಂದು ಬಹಿರಂಗಪಡಿಸಿದೆ. 


COMMERCIAL BREAK
SCROLL TO CONTINUE READING

ಪ್ರಭಾಸ್-ಅನುಷ್ಕಾ.. ಹಿಟ್ ಅಂಡ್ ಕ್ಯೂಟ್ ಜೋಡಿ. ಬಿಲ್ಲಾ, ಮಿರ್ಚಿ ಮತ್ತು ಬಾಹುಬಲಿ ಎರಡು ಭಾಗಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಇವರಿಬ್ಬರ ಬಾಂಧವ್ಯ ನೋಡಿದ ಅಭಿಮಾನಿಗಳು ಇಬ್ಬರೂ ಪ್ರೀತಿಯಲ್ಲಿ ಮುಳುಗಿದ್ದಾರೆ ಎಂದಿದ್ದಾರೆ. ಆದರೆ ತಮ್ಮ ನಡುವೆ ಸ್ನೇಹ ಬಿಟ್ಟರೆ ಬೇರೇನೂ ಇಲ್ಲ ಎಂದು ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. ಕೆಲವೊಮ್ಮೆ ನಕ್ಕು ಸುಮ್ಮನಾಗಿದ್ದಾರೆ. ಆದರೆ, ಅವರಿಬ್ಬರೂ 10 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ.


ಇದನ್ನೂ ಓದಿ: ಅಂದು ಸುಹಾಸಿನಿಗೂ ಎದುರಾಗಿತ್ತು ಈ ಸಮಸ್ಯೆ.. ನಾಯಕನ ತೊಡೆ ಮೇಲೆ ಕೂರಲು ಹೇಳಿದ್ರಂತೆ ಡೈರೆಕ್ಟರ್‌! 


ಇಂಗ್ಲಿಷ್ ವೆಬ್‌ಸೈಟ್‌ನ ಪ್ರಕಾರ, ಪ್ರಭಾಸ್ ಮತ್ತು ಅನುಷ್ಕಾ ಮದುವೆಯಾಗಲು ಬಯಸಿದ್ದಾರೆ ಎನ್ನಲಾಗಿದೆ. ಅದು ಸಾಧ್ಯವಾಗದಿದ್ದರೆ, ಅವರು ತಮ್ಮ ಜೀವನದುದ್ದಕ್ಕೂ ಏಕಾಂಗಿಯಾಗಿರಲು ಬಯಸುತ್ತಾರೆ ಎನ್ನಲಾಗಿದೆ. ಅಲ್ಲದೆ, ಜಾತಕ ಹೊಂದಾಣಿಕೆಯಾಗದ ಕಾರಣ ಪ್ರಭಾಸ್ ಕುಟುಂಬಸ್ಥರು ಮದುವೆಗೆ ನೋ ಹೇಳಿದ್ದಾರೆ ಎನ್ನಲಾಗಿದೆ. ಪ್ರಭಾಸ್ ಅವರ ತಾಯಿ ಹೆಚ್ಚಾಗಿ ಜಾತಕ ಮತ್ತು ದೇವರನ್ನು ನಂಬುತ್ತಾರಂತೆ. ಅವರಿಂದಲೇ ಪ್ರಭಾಸ್ ಮದುವೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.  


ಇತ್ತೀಚೆಗಷ್ಟೇ ದಸರಾ ವೇಳೆ ವಿಜಯವಾಡಕ್ಕೆ ಆಗಮಿಸಿ, ದುರ್ಗಮ್ಮನ ದರ್ಶನ ಪಡೆದ ಪ್ರಭಾಸ್ ಅಜ್ಜಿ ಕೃಷ್ಣಂರಾಜ್ ಪತ್ನಿ ಶ್ಯಾಮಲಾದೇವಿ ಅವರು ಪ್ರಭಾಸ್ ಮದುವೆ ಬಗ್ಗೆ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಮುಂದಿನ ದಸರಾ ಮುನ್ನವೇ ಈ ಶುಭ ಕಾರ್ಯ ನಡೆಯಲಿದೆ ಎಂದಿದ್ದಾರೆ. ಅವರು ಹೇಳಿದ್ದು ನಿಜವೇ? ಅಥವಾ ಇತ್ತೀಚಿನ ಇಂಗ್ಲಿಷ್ ವೆಬ್‌ಸೈಟ್‌ನಲ್ಲಿ ಬಂದ ವರದಿ ನಿಜವೇ? ಪ್ರಭಾಸ್ ಮತ್ತು ಅನುಷ್ಕಾ ಪ್ರತಿಕ್ರಿಯಿಸದ ಹೊರತು ಯಾವುದೇ ಸ್ಪಷ್ಟತೆ ಇಲ್ಲ.


ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಲ್ಲಿ ಶುರುವಾಗೇ ಬಿಡ್ತು ಪ್ರೇಮ ಕಹಾನಿ.. ನಾವಿಬ್ರೂ ಇನ್ಮುಂದೆ ಅಧಿಕೃತವಾಗಿ ಪ್ರೇಮಿಗಳು ಎಂದ ಸ್ಪರ್ಧಿಗಳು! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.