ಬಿಗ್‌ ಬಾಸ್‌ ಮನೆಯಲ್ಲಿ ಶುರುವಾಗೇ ಬಿಡ್ತು ಪ್ರೇಮ ಕಹಾನಿ.. ನಾವಿಬ್ರೂ ಇನ್ಮುಂದೆ ಅಧಿಕೃತವಾಗಿ ಪ್ರೇಮಿಗಳು ಎಂದ ಸ್ಪರ್ಧಿಗಳು!

Michael Ajay and Eshani Love : ಬಿಗ್​ ಬಾಸ್ ಕನ್ನಡ ಮನೆಯಲ್ಲಿ ಪ್ರೀತಿಯ ಆರಂಭವಾಗಿದೆ. ಎರಡು ಹೃದಯಗಳ ನಡುವೆ ಪ್ರೇಮ ಬೆಸೆಯುತ್ತಿದೆ. ಇಬ್ಬರೂ ಸಹ ಇದನ್ನು ಒಪ್ಪಿಕೊಂಡಿದ್ದಾರೆ. 

Written by - Chetana Devarmani | Last Updated : Oct 24, 2023, 07:37 AM IST
  • ಬಿಗ್​ ಬಾಸ್ ಕನ್ನಡ ಸೀಸನ್‌ 10
  • ಬಿಗ್‌ ಬಾಸ್‌ ನಲ್ಲಿ ಶುರುವಾಯ್ತು ಪ್ರೇಮ ಕಹಾನಿ
  • ಇದು ವೀಕ್ಷಕರ ಕುತೂಹಲ ಹೆಚ್ಚಿಸಿದೆ
ಬಿಗ್‌ ಬಾಸ್‌ ಮನೆಯಲ್ಲಿ ಶುರುವಾಗೇ ಬಿಡ್ತು ಪ್ರೇಮ ಕಹಾನಿ.. ನಾವಿಬ್ರೂ ಇನ್ಮುಂದೆ ಅಧಿಕೃತವಾಗಿ ಪ್ರೇಮಿಗಳು ಎಂದ ಸ್ಪರ್ಧಿಗಳು! title=

Bigg Boss Kannada Season 10 : ಬಿಗ್​ ಬಾಸ್ ಕನ್ನಡ ಮನೆಯಲ್ಲಿ ಪ್ರೀತಿಯ ಆರಂಭವಾಗಿದೆ. ಎರಡು ಹೃದಯಗಳ ನಡುವೆ ಪ್ರೇಮ ಬೆಸೆಯುತ್ತಿದೆ. ಇಬ್ಬರೂ ಸಹ ಇದನ್ನು ಒಪ್ಪಿಕೊಂಡಿದ್ದಾರೆ. ನಾವಿಬ್ರೂ ಇನ್ಮುಂದೆ ಅಧಕೃತವಾಗಿ ಬಾಯ್‌ಫ್ರೆಂಡ್‌ - ಗರ್ಲ್‌ಫ್ರೆಂಡ್‌ ಎಂದು ಈ ಸ್ಪರ್ಧಿಗಳು ಅನೌನ್ಸ್‌ ಮಾಡಿದ್ದಾರೆ. ಇದು ವೀಕ್ಷಕರ ಕುತೂಹಲ ಹೆಚ್ಚಿಸಿದೆ. 

ಈ ಬಾರಿ ಮೈಕೆಲ್​ ಅಜಯ್ ಮತ್ತು ಈಶಾನಿ ನಡುವೆ ಪ್ರೇಮದ ಹೂವು ಅರಳಿದೆ. ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇದನ್ನು ಅವರು ಅಧಿಕೃತವಾಗಿಯೇ ಸ್ವತಃ ತಾವೇ ಹೇಳಿಕೊಂಡಿದ್ದಾರೆ. 

ಮೈಕೆಲ್​ ಅಜಯ್​ ಅವರು ಈಶಾನಿ ಇನ್ಮುಂದೆ ಅಧಿಕೃತವಾಗಿ ನನ್ನ ಗರ್ಲ್‌ಫ್ರೆಂಡ್‌​ ಎಂದು ಹೇಳಿದ್ದಾರೆ. ಇಂದಿನಿಂದ ನನ್ನ ತಂಗಿ ಅಧಿಕೃತವಾಗಿ ಮೈಕೆಲ್‌ ಗರ್ಲ್‌ಫ್ರೆಂಡ್‌ ಎಂದು ಎಲ್ಲರಿಗೂ ಕೇಳುವಂತೆ ವಿನಯ್​ ಗೌಡ ಜೋರಾಗಿ ಕೂಗಿ ಹೇಳಿದ್ದಾರೆ. ಇದನ್ನು ಕೇಳಿ ಮನೆಯವರು ಸಹ ಸಂಭ್ರಮಿಸಿದ್ದಾರೆ. 

ಇದನ್ನೂ ಓದಿ: ಪರಪ್ಪನ ಅಗ್ರಹಾರಕ್ಕೆ ಬಿಗ್‌ಬಾಸ್‌ ಸ್ಪರ್ಧಿ ಶಿಫ್ಟ್‌.! ಸಂತೋಷ್‌ಗೆ 14 ದಿನ ನ್ಯಾಯಾಂಗ ಬಂಧನ 

ಬಿಗ್‌ ಬಾಸ್‌ ಮನೆಯಲ್ಲಿ ಪ್ರೀತಿ ಚಿಗುರೊಡೆದು ಅದು ಮದುವೆಯ ಬಂಧವಾಗಿರುವ ಉದಾಹರಣೆಗಳೂ ಇವೆ. ಇದೀಗ ಮೈಕೆಲ್‌ ಮತ್ತು ಈಶಾನಿ ಮಧ್ಯೆ ಪ್ರೇಮಾಂಕುರವಾಗಿದೆ. ಆದರೆ ಬಿಗ್‌ ಬಾಸ್‌ ಮನೆಯಲ್ಲಿ ಯಾವುದೇ ಸಂಬಂಧವನ್ನೂ ನಿಭಾಯಿಸುವುದು ಸುಲಭದ ಮಾತಲ್ಲ. 

ಟಾಸ್ಕ್‌ ಬಂದಾಗ ಎದುರಾಳಿ ಯಾರೆಂದು ಯೋಚಿಸದೇ ಫೈಟ್‌ ಮಾಡಬೇಕು. ಅಲ್ಲದೇ ನಾಮಿನೇಟ್​ ಮಾಡುವಾಗ, ಕಳಪೆ ಕೊಡುವಾಗ ಹೀಗೆ ಪ್ರತಿ ಹೆಜ್ಜೆಯಲ್ಲೂ ಇದೊಂದು ಚಾಲೆಂಜ್‌ ಆಗಿರುತ್ತದೆ. ಇನ್ಮುಂದೆ ಈಶಾನಿ ಮತ್ತು ಮೈಕೆಲ್​ ಈ ಎಲ್ಲ ಚಾಲೆಂಜ್‌ಗಳನ್ನ ಫೇಸ್‌ ಮಾಡಿ ಸಂಬಂಧವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 

ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ವೀಕ್ಷಿಸಿ.

ಇದನ್ನೂ ಓದಿ: ಬಿಗ್‌ ಬಾಸ್ 10 ರಲ್ಲಿ ಕಿಚ್ಚನ ಚಪ್ಪಾಳೆ ಮಿಸ್ಸಿಂಗ್‌.. ಕಾರಣ ತಿಳಿಸಿದ್ರು ಸುದೀಪ್ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News