ಅನುಷ್ಕಾ-ವಿರಾಟ್ ಮದುವೆ ಉಡುಗೆ ನೋಡಿದರೆ ನೀವೂ ಬ್ಲಶ್ ಆಗ್ತೀರಾ!
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಅವರ ವಿವಾಹ, ಮಿಲಾನ್‌ನ ಸಾಂಪ್ರದಾಯಿಕ ನಗರಿ ಟಸ್ಕಾನ್ ಬಳಿಯಿರುವ ಬೊರ್ಗೊ ಫಿನೊಕಿಯೊಟೊ ಎಂಬ ರೆಸಾರ್ಟ್‌ನಲ್ಲಿ ಸೋಮವಾರ ನಡೆಯಿತು.
ಈ ಇಬ್ಬರು ಸೆಲೆಬ್ರಿಟಿಗಳು ಜಂಟಿಯಾಗಿ ತಾವು ಮದುವೆಯಾಗುತ್ತಿರುವ ಕುರಿತು ಹೇಳಿಕೆ ನೀಡಿದ ಒಂದು ವಾರದ ವಾರದ ನಂತರ ಮದುವೆ ನೆರವೇರಿದೆ. ಇವರಿಬ್ಬರ ಮದುವೆ ಫೋಟೋಗಳು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಮದುವೆಗಾಗಿ ಅನುಷ್ಕಾ ಶರ್ಮ ಬಾಲಿವುಡ್ ನ ನೆಚ್ಚಿನ ನಸ್ತ್ರ ವಿನ್ಯಾಸಕಾರ ಸಬ್ಯಸಾಚಿ ಅವರನ್ನು ಆಯ್ಕೆ ಮಾಡಿಕೊಂಡಿದ್ದು, ವಿರಾಟ್ ಕೊಹ್ಲಿ ಅವರ ವಸ್ತ್ರವನ್ನೂ ಅವರೇ ವಿನ್ಯಾಸ ಮಾಡಿದ್ದರು.
ತಿಳಿ ಗುಲಾಬಿ ಬಣ್ಣದ, ಸಿಲ್ವರ್ ಮತ್ತು ಗೋಲ್ಡ್ ಕಂಬಿನೇಷನ್ ನಲ್ಲಿ ಪರ್ಲ್ ಮತ್ತು ಬೀಡ್ಸ್ ಗಳೊಂದಿಗೆ ತಯಾರಿಸಿದ ಸಬ್ಯಾಸಾಚಿ ಲೆಹಂಗಾದಲ್ಲಿ ಅನುಷ್ಕಾ ಕಂಗೊಳಿಸುತ್ತಿದ್ದರು.
ಟುಸ್ಕಾನಿಯ ರೆಸಾರ್ಟ್ ಅವರ ಆ ಲೆಹಂಗಾ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಕಸೂತಿ ಕಲೆಯಿಂದ ತಯಾರಿಸಲಾದ ಅವರ ಲೆಹಂಗಾ ಪಕ್ಷಿಗಳು ಮತ್ತು ಚಿಟ್ಟೆಗಳ ಚಿತ್ರಗಳಿಂದ ಅಲಂಕೃತಗೊಂಡಿತ್ತು. ಈ ಅಧ್ಬುತವಾದ ಲೆಹಂಗಾ ತಯಾರಿಸಲು ತೆಗೆದುಕೊಂಡ ದಿನಗಳೆಷ್ಟು ಗೊತ್ತೇ? ಬರೋಬ್ಬರಿ 32 ದಿನಗಳು!
ಅನುಷ್ಕಾ ಅವರ ಮದುವೆಯ ಆಭರಣಗಳೂ ಸಬ್ಯಸಾಚಿ ಹೆರಿಟೇಜ್ ಜ್ಯುವೆಲರಿ ಸಂಗ್ರಹದಿಂದ ರಚಿಸಲಾಗಿದ್ದು, ಕತ್ತರಿಸದ ವಜ್ರಗಳು, ಮಸುಕಾದ ಗುಲಾಬಿ ಸ್ಪೈನಲ್ಗಳು ಮತ್ತು ಬರೊಕ್ ಜಪಾನಿಯರ ಸಂಸ್ಕೃತಿಯ ಮುತ್ತುಗಳಿಂದ ಮಾಡಲ್ಪಟ್ಟ ಚೋಕರ್ ಶೈಲಿಯ ನೆಕ್ಲೇಸ್ ಅನ್ನು ಅನುಷ್ಕಾ ಧರಿಸಿದ್ದರು. ಇದರೊಂದಿಗೆ ತಿಳಿ ಗುಲಾಬಿ ಮತ್ತು ಕೆಂಪು ಮಾಣಿಕ್ಯಗಳಿಂದ ಮಾಡಿದ ದೊಡ್ಡ ನೆಕ್ಲೇಸ್, ಮಾತಾ-ಪಟ್ಟಿ, ನಾಥ್ ಮತ್ತು ಕಿವಿಯೋಲೆಗಳು ಅವರನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಿದ್ದವು. ತಿಳಿ ಗುಲಾಬಿ ಬಣ್ಣದ ಲೆಹಂಗ ಮತ್ತು ತಿಳಿ ಮೆಕಪ್ನೊಂದಿಗೆ ಅನುಷ್ಕಾ ಬಹಳ ಸುಂದರವಾಗಿ ಕಾಣುತ್ತಿದ್ದರು.
ಇನ್ನು ವಿರಾಟ್ ಕೊಹ್ಲಿ ಬನಾರಸಿ ಮಾದರಿಯ ಐವರೀ ಕಚ್ಚಾ ರೇಷ್ಮೆ ಶೆರ್ವಾನಿ, ಸಬ್ಯಸಾಚಿ ಆಭರಣಗಳು ಮತ್ತು ತುಷಾರ್ ಸಿಲ್ಫ್ ಸ್ಟಾಲ್, ತಿಳಿ ಗುಲಾಬಿ ಬಣ್ಣದ ಕೋಟ ಸೋಫಾ ಧರಿಸಿ ಕ್ಲಾಸಿಕ್ ಆಗಿ ಕಾಣುತ್ತಿದ್ದರು.