Anchor Anushree: ಶುಭಾ ಪೂಂಜಾ ಮನೆಯ ನಾಯಿಗೆ ಹಾಕೋ ಚಿಕನ್ ತಿಂದ ಆಂಕರ್ ಅನುಶ್ರೀ..! ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?
Anchor Anushree-Shubha Poonja Interview: ಅನುಶ್ರೀ ಅವರು ಕೇವಲ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳದೆ, ಇದೀಗ ‘ಅನುಶ್ರೀ ಆಂಕರ್ ಯೂಟ್ಯೂಬ್ ಚಾನೆಲ್’ ಕೂಡ ಪ್ರಾರಂಭಿಸಿ ಸಖತ್ ಸದ್ದು ಮಾಡುತ್ತಿದ್ದಾರೆ. ಇದೆಲ್ಲಾ ನಿಮಗೆ ತಿಳಿದಿರುವ ಸಂಗತಿ. ಇನ್ನು ಈ ಕಾರ್ಯಕ್ರಮಕ್ಕೆ ಫೆಬ್ರವರಿ 14 ರಂದು ಪ್ರೇಮಿಗಳ ದಿನದ ಅಂಗವಾಗಿ ಸ್ಪೆಷಲ್ ಗೆಸ್ಟ್ ಆಗಿ ನಟಿ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಆಗಮಿಸಿದ್ದರು. ಈ ಸಂದರ್ಶನದ ವೇಳೆ ಫನ್ನಿ ಘಟನೆಗಳನ್ನು ಮೆಲುಕು ಹಾಕಿದ್ದಾರೆ.
Anchor Anushree-Shubha Poonja Interview: ಕರ್ನಾಟಕದ ಖ್ಯಾತ ನಿರೂಪಕಿ ಯಾರೆಂದು ಕೇಳಿದ್ರೆ ಮೊದಲು ಹೇಳೋದು ಅನುಶ್ರೀ. ಈಕೆಯ ವಾಕ್ ಚತುರತೆಗೆ ಎಂಥವರೂ ಸಹ ಫಿದಾ ಆಗೋದು ಪಕ್ಕಾ. ಕರುನಾಡಲ್ಲಿ ಎಂತಹದ್ದೇ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿದ್ದರೆ ಅಲ್ಲಿ ಅನುಶ್ರೀ ನಿರೂಪಣೆ ಇರುತ್ತೆ ಎಂದು ಮೊದಲೇ ಊಹೆ ಮಾಡಬಹುದು. ಇನ್ನು ಈಕೆಯ ಮಾತಿನ ಶೈಲಿಗೆ ಅದೆಷ್ಟೋ ಅಭಿಮಾನಿಗಳಿದ್ದಾರೆ. ಆದರೆ ಅನುಶ್ರೀ ಅವರ ಜೀವನದಲ್ಲಿ ನಡೆದಿರುವ ತಮಾಷೆಯ ಸನ್ನಿವೇಶವೊಂದನ್ನು ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಹಿಂದಿ ಭಾಷೆಗೆ ಕನ್ನಡದ ಭಾಗ್ಯಲಕ್ಷ್ಮೀ ಧಾರವಾಹಿ ಡಬ್ ! ಹಿಂದಿಯಲ್ಲಿಯೂ ಮೇಳೈಸಲಿದೆ ಅಕ್ಕ - ತಂಗಿ ಪ್ರೀತಿ
ಅನುಶ್ರೀ ಅವರು ಕೇವಲ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳದೆ, ಇದೀಗ ‘ಅನುಶ್ರೀ ಆಂಕರ್ ಯೂಟ್ಯೂಬ್ ಚಾನೆಲ್’ ಕೂಡ ಪ್ರಾರಂಭಿಸಿ ಸಖತ್ ಸದ್ದು ಮಾಡುತ್ತಿದ್ದಾರೆ. ಇದೆಲ್ಲಾ ನಿಮಗೆ ತಿಳಿದಿರುವ ಸಂಗತಿ. ಇನ್ನು ಈ ಕಾರ್ಯಕ್ರಮಕ್ಕೆ ಫೆಬ್ರವರಿ 14 ರಂದು ಪ್ರೇಮಿಗಳ ದಿನದ ಅಂಗವಾಗಿ ಸ್ಪೆಷಲ್ ಗೆಸ್ಟ್ ಆಗಿ ನಟಿ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಆಗಮಿಸಿದ್ದರು. ಈ ಸಂದರ್ಶನದ ವೇಳೆ ಫನ್ನಿ ಘಟನೆಗಳನ್ನು ಮೆಲುಕು ಹಾಕಿದ್ದಾರೆ.
ಅನುಶ್ರೀ ಹಾಗೂ ಶುಭಾ ಪೂಂಜಾ ಬಹುಕಾಲದ ಗೆಳೆಯರು. ಇಬ್ಬರೂ ಸಹ ಮೂಲತಃ ಮಂಗಳೂರಿನವರಾಗಿದ್ದರಿಂದ ಮೊದಲಿನಿಂದಲೇ ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಬರುತ್ತಿದ್ದರು. ಇವರಿಬ್ಬರ ಸ್ನೇಹ ತುಂಬಾ ಹಳೆಯದ್ದು ಎಂದು ಇಲ್ಲಿ ಹೇಳಲೇಬೇಕು. ಒಂದು ದಿನ ಶುಭಾ ಮನೆಗೆ ಅನುಶ್ರೀ ಹೋಗಿದ್ದಾಗ, ತೀರಾ ಹಸಿದಿದ್ದ ಅನುಶ್ರೀ ತಿನ್ನಲು ಏನಿದೆ ಎಂದು ಕೇಳಿದ್ದಾರೆ. ಅಷ್ಟರಲ್ಲಿ ಶುಭಾ ಚಿಕನ್ ಮಾಡಿದ್ದೇನೆ. ಡೈನಿಂಗ್ ಟೇಬಲ್ ಮೇಲೆ ಇದೆ ತಿನ್ನು ಎಂದು ಹೇಳುತ್ತಾ ಬೇರೆ ಕೆಲಸ ಮಾಡಲೆಂದು ತೆರಳಿದ್ದಾರೆ.
ಶುಭಾ ಹೇಳುತ್ತಿದ್ದಂತೆ ಡೈನಿಂಗ್ ಮೇಲಿದ್ದ ಚಿಕನ್ ಸಾಂಬಾರ್ ನ್ನು ಅನುಶ್ರೀ ಅನ್ನದ ಜೊತೆ ಸೇವಿಸಿದ್ದಾರೆ. ಉಪ್ಪು-ಖಾರ ಸ್ವಲ್ಪನೂ ಇಲ್ಲ ಎನ್ನುತ್ತಾ ಅಸಮಾಧಾನ ಮಾಡಿಕೊಂಡು ತಿಂದಿದ್ದಾರೆ. ಸ್ವಲ್ಪ ಸಮಯದ ಬಳಿಕ ಬಂದ ಶುಭಾ ಬಳಿ, ‘ಏನಿದು ನಿಮ್ಮ ಮನೆಯ ಚಿಕನ್ ಸಾರಿನಲ್ಲಿ ಉಪ್ಪು-ಖಾರ ಸ್ವಲ್ಪನೂ ಇಲ್ಲ’ ಎಂದು ಅನುಶ್ರೀ ಹೇಳಿದ್ದಾರೆ. ಶುಭಾ ತಕ್ಷಣ ಡೈನಿಂಗ್ ಮೇಲಿರುವ ಪಾತ್ರೆಯ ಮುಚ್ಚಳ ತೆಗೆದು ನೋಡಿ, ಇದು ನಾಯಿಗೆ ಹಾಕಲು ಮಾಡಿಟ್ಟ ಚಿಕನ್ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಿಚ್ಚ ಸುದೀಪ್ ನಿತ್ಯ ಮಿಸ್ ಇಲ್ಲದೆ ಮಾಡೋ ಕೆಲಸ ಏನು ಗೊತ್ತಾ....?
ಇದೊಂದು ನೋವಿನ ಘಟನೆ ಎಂದು ಅನುಶ್ರೀ ಈ ಸಂದರ್ಶನದಲ್ಲಿ ತಮಾಷೆಯಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ನಾಯಿಗೆ ಹಾಕೋ ಆಹಾರವನ್ನು ಡೈನಿಂಗ್ ಮೇಲೆ ಯಾರಾದರೂ ಇಡ್ತಾರಾ ಎಂದು ನಗುತ್ತಲೇ ಪ್ರಶ್ನಿಸಿದ್ದಾರೆ. ಒಟ್ಟಾರೆ ಈ ಸಂದರ್ಶನದಲ್ಲಿ ಸಖತ್ ತಮಾಷೆಯ ವಿಚಾರಗಳು ಹೊರಬಂದಿದ್ದು, ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಲಭ್ಯವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ