Viral Post : ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ಸಂಗತಿಯನ್ನು ಇನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಆದರೆ ಅದು ಸತ್ಯ. ನಂಬಿದರು ನಂಬದಿದ್ದರು ಅವರು ನಮ್ಮನ್ನು ಅಗಲಿ ವರ್ಷಗಳೇ ಕಳೆದವು. ಇಂದಿಗೂ ಅವರ ಅಭಿಮಾನಿಗಳು ಅವರನ್ನು ಆರಾಧಿಸುತ್ತಾರೆ.


COMMERCIAL BREAK
SCROLL TO CONTINUE READING

ಸದ್ಯ ಅಪ್ಪು ಅಭಿಮಾನಿಯೊಬ್ಬರು ಅಪ್ಪು ಹಾಗೂ ಅರ್ಜುನ್‌ ಸರ್ಜಾ ಇರುವ ಅಪರೂಪದ ಪೋಟೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಪೋಟೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಅಪ್ಪು ಅಭಿಮಾನಿಗಳ ಮನಸ್ಸಲ್ಲಿ ಶಾಶ್ವತ ಎಂದೆಲ್ಲಾ ಭಾವನಾತ್ಮಕ ನುಡಿಗಳಿಂದ ಕಾಮೆಂಟ್‌ ಮಾಡಿದ್ದಾರೆ.


ಇದನ್ನೂ ಓದಿ-ಕೆಲಸಕ್ಕೆ ರಾಜೀನಾಮೆ ನೀಡಿದ ಬಸ್‌ ಚಾಲಕಿಗೆ ಕಾರ್‌ ಉಡುಗೊರೆ ಕೊಟ್ಟ ಕಮಲ್‌ ಹಾಸನ್‌ ..!


ಇನ್ನು ಅರ್ಜುನ್‌ ಸರ್ಜಾ ಅಪ್ಪು ಅವರ ಜೊತೆ ಉತ್ತಮ ಭಾಂದವ್ಯವನ್ನು ಹೊಂದಿದ್ದರು. ಅಪ್ಪು ಅಂತ್ಯಸಂಸ್ಕಾರದ ವೇಳೆ ಸರ್ಜಾ ಭಾವುಕರಾಗಿರುವುದು ಇಂದಿಗೂ ನೆನಪಿನಲ್ಲಿದೆ. ಕೆಲವು ದಿನಗಳ ಹಿಂದೆ ಆಕ್ಷನ್‌ ಕಿಂಗ್‌ ಅಪ್ಪು ಚಿಕ್ಕವರಿದ್ದಾಗ ಅವರನ್ನು ಎತ್ತಿಕೊಂಡಿರುವ ಪೋಟೋವೊಂದನ್ನು ಶೇರ್‌ ಮಾಡಿಕೊಂಡು "ನನ್ನ ಪ್ರೀತಿಯ ಅಪ್ಪು ಎಂದೆಂದಿಗೂ ಶಾಶ್ವತ" ಎಂದು ಬರೆದುಕೊಂಡಿದ್ದರು. 


ಇನ್ನು ಅಪ್ಪು ಅವರ ಸಾಕ್ಷ್ಯಚಿತ್ರವಾದ ಗಂಧದಗುಡಿಯ ಟೀಸರ್‌ನ್ನು ಪಾರ್ವತಮ್ಮ ಅವರ ಜನ್ಮ ದಿನದಂದು ರಿಳಿಸ್‌ ಮಾಡಲಾಗಿತ್ತು. ಈ ಟೀಸರ್‌ಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗೆ ಅಪ್ಪು ಅವರು ನಮ್ಮಿಂದ ಸಾವಿನ ನೆಪದಲ್ಲಿ ಮಾತ್ರ ದೂರ ಉಳಿದಿದ್ದಾರೆ ಆದರೆ ನಮ್ಮೆಲ್ಲರ ಸಾವಿರ ನೆನಪುಗಳಲ್ಲಿ ಅಪ್ಪು ಜೀವಂತವಾಗಿದ್ದಾರೆ. 


ಇದನ್ನೂ ಓದಿ-Tamannaah Bhatia : ಮಹಿಳಾ ಅಭಿಮಾನಿ ಅಭಿಮಾನಕ್ಕೆ ಮನಸೋತ ನಟಿ ತಮನ್ನಾ ಭಾಟಿಯಾ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l