Tamannaah Bhatia : ಮಹಿಳಾ ಅಭಿಮಾನಿ ಅಭಿಮಾನಕ್ಕೆ ಮನಸೋತ ನಟಿ ತಮನ್ನಾ ಭಾಟಿಯಾ..!

Actress Tamannaah Bhatia: ಸಿನಿಮಾ ನಟ,ನಟಿಯರೆಂದರೆ ಅನೇಕರು ಅವರ ಮೇಲೆ ಅಪಾರ ಅಭಿಮಾನ ಹೊಂದಿರುತ್ತಾರೆ. ಹಾಗೆಯೇ ನಟಿ ತಮನ್ನಾ ಮೇಲೆ ಮಹಿಳಾ ಅಭಿಮಾನಿಯೊಬ್ಬರು ಅಪಾರ ಅಭಿಮಾನ ಹೊಂದಿದ್ದು, ಮಿಲ್ಕಿ ಬ್ಯೂಟಿ ಭೇಟಿಗಾಗಿ ಕಾಯುತ್ತಿದ್ದ ಅಭಿಮಾನಿಗೆ ಕೊನೆಗೂ ನಟಿಯ ದರ್ಶನವಾಗಿದೆ.

Written by - Zee Kannada News Desk | Last Updated : Jun 27, 2023, 11:20 AM IST
  • ಮಹಿಳಾ ಅಭಿಮಾನಿ ಅಭಿಮಾನಕ್ಕೆ ಮನಸೋತ ನಟಿ ತಮನ್ನಾ ಭಾಟಿಯಾ
  • ಅಭಿಮಾನಿ ಕೈ ಮೇಲೆ ಮೂಡಿದ ನಟಿ ತಮನ್ನಾ ಟ್ಯಾಟ್ಯೂ
  • ಮಹಿಳಾ ಅಭಿಮಾನಿ ಗೆ ಕೊನೆಗೂ ಅನಿರೀಕ್ಷತವಾಗಿ ಮಿಲ್ಕಿ ಬ್ಯೂಟಿ ದರ್ಶನ
Tamannaah Bhatia : ಮಹಿಳಾ ಅಭಿಮಾನಿ ಅಭಿಮಾನಕ್ಕೆ ಮನಸೋತ ನಟಿ ತಮನ್ನಾ ಭಾಟಿಯಾ..!   title=

ಮುಂಬೈ: ಸಿನಿಮಾ ನಟ,ನಟಿಯರೆಂದರೆ ಅನೇಕರು ಅವರ ಮೇಲೆ ಅಪಾರ ಅಭಿಮಾನ ಹೊಂದಿರುತ್ತಾರೆ. ಹಾಗೆಯೇ ನಟಿ ತಮನ್ನಾ ಮೇಲೆ ಮಹಿಳಾ ಅಭಿಮಾನಿಯೊಬ್ಬರು ಅಪಾರ ಅಭಿಮಾನ ಹೊಂದಿದ್ದು, ಮಿಲ್ಕಿ ಬ್ಯೂಟಿ ಭೇಟಿಗಾಗಿ ಕಾಯುತ್ತಿದ್ದ ಅಭಿಮಾನಿಗೆ ಕೊನೆಗೂ ನಟಿಯ ದರ್ಶನವಾಗಿದೆ.

ಸೋಮವಾರ ರಾತ್ರಿಯಂದು ಮುಂಬೈ ವಿಮಾನ ನಿಲ್ದಾಣದತ್ತ ಪ್ರಯಾಣಿಸುವಾಗ ಮಹಿಳಾ ಅಭಿಮಾನಿಗೆ ನಟಿ ಕಾಣಿಸಿಕೊಂಡಿದ್ದಾರೆ. ನಟಿಯನ್ನು ಕಂಡು ಅವರ ಹತ್ತಿರ ಹೋಗಿ ಭೇಟಿ ಮಾಡಿ ಪ್ರೀತಿಯ ಅಪ್ಪುಗೆ ನೀಡಿದ್ದಾರೆ. ಬಳಿಕ ಆ ಮಹಿಳೆ ತನ್ನ ಕೈ ಮೇಲೆ ನಟಿ ತಮನ್ನಾ ಭಾಟಿಯಾ ಟ್ಯಾಟ್ಯೂ ತೋರಿಸಿದ್ದಾರೆ.

ಇದನ್ನೂ ಓದಿ: Anupama Gowda: ನಿರೂಪಕಿ ಅನುಪಮ ಗೌಡ ಟ್ರೆಡಿಷನ್ ಲುಕ್​ಗೆ ಫ್ಯಾನ್ಸ್‌ ಫಿದಾ; ಇಲ್ಲಿವೆ ನೋಡಿ ಫೋಟೊಸ್..!

ಅಭಿಮಾನಿಯ ಅಪಾರ ಪ್ರೀತಿಗೆ ತಮನ್ನಾ ಭಾವುಕರಾಗಿ ಮೆಚ್ಚುಗೆ ವ್ಯಕ್ತ ಪಡಿಸಿ ಆ ಅಭಿಮಾನಿಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

13 ನೇ ವಯಸ್ಸಿನಲ್ಲಿಯೇ ಚಿತ್ರರಂಗ ಪ್ರವೇಶಿಸಿದ ನಟಿ ತಮನ್ನಾ ಭಾಟಿಯಾ, ಅದಿನಿಂದ ಇಂದಿನವರೆಗೂ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಇದೀಗ ಇತ್ತೀಚಿನ ಪ್ರೈಮ್ ವಿಡಿಯೋದಲ್ಲಿ ಜೀ ಕರ್ದಾ ಎಂಬ ರೋಮ್ಯಾಂಟಿಕ್ ನಾಟಕ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ: Puneet Rajkumar: ಶಕ್ತಿ ಯೋಜನೆ ಹಿನ್ನಲೆ ಪುನೀತ್‌ ರಾಜ್‌ ಕುಮಾರ್‌ ಸಮಾಧಿಗೆ ಮಹಿಳೆಯರ ದಂಡು..!

ಸದ್ಯ ನಟಿ ತಮಿಳು ಆಕ್ಷನ್-ಕಾಮಿಡಿ ಸಿನಿಮಾ ಆಗಿರುವ ಜೈಲರ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಡಾ .ಶಿವ ರಾಜ್‌ಕುಮಾರ್, ರಜನಿಕಾಂತ್, ಮೋಹನ್ ಲಾಲ್, ಜಾಕಿ ಶ್ರಾಫ್, ರಮ್ಯಾ ಕೃಷ್ಣನ್  ಸೇರಿದಂತೆ ಅನೇಕರು ನಟಿಸಿದ್ದಾರೆ. ತಮನ್ನಾ ಭಾಟಿಯಾ ನಟನೆಯ ಜೈಲರ್‌ ಚಿತ್ರ ಆಗಸ್ಟ್‌ 11 ರಂದು ತೆರೆ ಮೇಲೆ ಬರಲು ಸಜ್ಜಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

 

Trending News