Appu fans vs Darshan fans : ವೀರ ಕನ್ನಡಿಗ, ಶಾಂತಿಯ ಪ್ರತೀಕ, ಅಜಾತಶತ್ರು, ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರು ಒಳ್ಳೆಯತನಕ್ಕೆ ಹಿಡಿದ ಕೈಗನ್ನಡಿಯಾಗಿದ್ದರು. ಇಂದಿಗೂ ರಾಜವಂಶದ ಕುಡಿ ಕನ್ನಡಿಗರ ಹೃದಯದಲ್ಲಿ ಅಜರಾಮರ. ಅಪ್ಪು ತಮ್ಮ ಅಭಿಮಾನಿಗಳಿಗೆ ಸದಾ ಖುಷ್‌ ಖುಷಿಯಾಗಿ ಯಾರಿಗೂ ನೋವುಂಟು ಮಾಡದಂತೆ ಇರಲು ಹೇಳುತ್ತಿದ್ರು. ಆದ್ರೆ ಇದೀಗ ಅಂತಹ ಯುವರತ್ನನ ಅಭಿಮಾನಿಗಳು ದರ್ಶನ್‌ ಅವರ ಮೇಲೆ ಚಪ್ಪಲಿ ಎಸೆದು ಅವಮಾನ ಮಾಡುವ ಮಟ್ಟಕ್ಕೆ ಇಳಿದ್ರಾ ಎನ್ನುವ ಅನುಮಾನ ಕಾಡುತ್ತಿದೆ.


COMMERCIAL BREAK
SCROLL TO CONTINUE READING

ಹೌದು.. ದೊಡ್ಮನೆ ತಮ್ಮ ಅಭಿಮಾನಿಗಳನ್ನು ದೇವರು ಅಂತ ಕರೆಯಿತು. ವರನಟ ರಾಜಣ್ಣ ಅವರು ಅಭಿಮಾನಿಗಳನ್ನ ತಮ್ಮ ಹೃದಯದಲ್ಲಿಟ್ಟು ಪೂಜೆ ಮಾಡುತ್ತಿದ್ರು. ಅವರ ಮಗ ವೀರ ಕನ್ನಡಿಗ, ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ತಮ್ಮ ಪ್ಯಾನ್ಸ್‌ಗಳನ್ನು ಮನೆ ದೇವರು ಅಂತ ಕರೆದ್ರು. ಅಲ್ಲದೆ, ಯಾವುದೇ ದ್ವೇಷ, ಅಸೂಯೆ, ಹೊಡೆದಾಟ, ಮನಸ್ಥಾಪದಂತಹ ಘಟನೆಗಳು ರಾಜ ಪರಿವಾರದ ಸ್ಟಾರ್‌ಗಳಿಗೆ ಇದೂವರೆಗೂ ಅಂಟಿಕೊಂಡಿಲ್ಲ. ಎಲ್ಲರನ್ನೂ ತಮ್ಮವರೇ ಎಂದು ಭಾವಿಸಿರುವ ಮನೆ ಅಂದ್ರೆ ದೊಡ್ಮನೆ.


ಇದನ್ನೂ ಓದಿ: ShivaRajkumar: ದರ್ಶನ್‌ಗೆ ಚಪ್ಪಲಿ ಎಸೆತ: ಫ್ಯಾನ್ಸ್ ಒತ್ತಾಯದ ಬೆನ್ನಲ್ಲೇ ಶಿವಣ್ಣ ಪ್ರತಿಕ್ರಿಯೆ


ಅಷ್ಟೇ ಅಲ್ಲದೆ, ಸಣ್ಣ ಕಲಾವಿದರಿಂದ ಹಿಡಿದು ಹಿರಿಯ ಕಲಾವಿದರಿಗೂ ತಲೆಬಾಗಿ ಗೌರವಿಸುತ್ತಿದ್ದ ಮನುಷ್ಯ ಪುನೀತ್‌ ರಾಜಕುಮಾರ್‌. ಸದಾ ಹಸನ್ಮುಖಿಯಾಗಿದ್ದ ಅಪ್ಪು ಅದೇಷ್ಟೋ ಕಣ್ಣೀರು ಒರೆಸುವ ಕೆಲಸ ಮಾಡಿದ್ದರು. ಆದ್ರೆ ಇಂದು ಅಂತಹ ನಟನ ಅಭಿಮಾನಿಗಳ ಮೇಲೆ ಚಪ್ಪಲಿ ಎಸೆದ ಆರೋಪ ಕೇಳಿ ಬಂದಿದೆ. ಅದು ಒಬ್ಬ ಕಲಾವಿದನ ಮೇಲೆ ಎನ್ನುವುದು ನಿಜಕ್ಕೂ ವಿಪರ್ಯಾಸ. ಇದೀಗ ಈ ಘಟನೆಯ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.


ಯಸ್‌.. ನಿಜವಾಗಿಯೂ ಅಂದು ಏನಾಯ್ತು..? ವೇದಿಯ ಮೇಲೆ ಕ್ರಾಂತಿ ಸಿನಿಮಾದ ಹಾಡನ್ನು ಬಿಡುಗಡೆ ಮಾಡಲು ಹೋಗಿದ್ದ ದರ್ಶನ್‌ಗೆ ಹೀಗೆಕಾಯ್ತು ಅನ್ನೋದು ನಿಗೂಢವಾಗಿ ಉಳಿದಿದೆ. ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಈ ಕೆಲಸವನ್ನು ಅಪ್ಪು ಅಭಿಮಾನಿಗಳು ಮಾಡಲು ಸಾಧ್ಯವಿಲ್ಲ. ಇದು ಯಾರೋ ಕಿಡಿಗೇಡಿಗಳ ಕೃತ್ಯವಿರಬೇಕು ಎನ್ನುವ ಮಾತು ಕೇಳಿ ಬರುತ್ತಿದೆ. ಅಲ್ಲದೆ, ದಚ್ಚುಗೆ ವಿರೋಧ ವ್ಯಕ್ತಪಡಿಸಿದರೂ ಚಪ್ಪಲಿ ಎಸೆಯುವಂತಹ ಮನಸ್ಸು ಯುವರತ್ನನ ಅಭಿಮಾನಿಗಳಿಗಿಲ್ಲ ಎನ್ನುವುದು ನೆಟ್ಟಿಗರ ವಾದ. ಆದ್ರೆ ಸತ್ಯ ಏನು ಎನ್ನುವುದು ದೇವರಿಗೆ ಗೊತ್ತು.


ಇದನ್ನೂ ಓದಿ: ದರ್ಶನ್ ಮೇಲೆ ಚಪ್ಪಲಿ ಎಸೆತ: ನಿಮ್ಮ ಮೇಲೆ ಆರೋಪಿಸಿದವರಿಗೆ ಉತ್ತರ ಕೊಡಿ ಶಿವಣ್ಣ ಎಂದ ಫ್ಯಾನ್ಸ್!


ಇನ್ನೂ ನೆಚ್ಚಿನ ನಟನಿಗೆ ಹೀಗಾಯ್ತು ಅಂತ ದಚ್ಚು ಅಭಿಮಾನಿಗಳ ಮನಸ್ಸಿಗೆ ಭಾರಿ ನೋವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದಾಸನ ಅಭಿಮಾನಿಗಳು ಗರಂ ಆಗಿದ್ದಾರೆ. ಘಟನೆ ನಡೆದರೂ ದರ್ಶನ್‌ ನಗುತ್ತಲೇ ನೋವು ಅನುಭವಿಸಿ ದೊಡ್ಡವರೆನಿಸಿಕೊಂಡರು. ಅದೇ ತರ ಕಿಡಿಗೇಡಿಗಳ ಕೃತ್ಯದಿಂದ ಇಬ್ಬರು ಸ್ಟಾರ್‌ಗಳ ಅಭಿಮಾನಿಗಳು ಪರಸ್ಪರ ಹೊಡೆದಾಡಿಕೊಳ್ಳದೆ ಶಾಂತಿ ಕಾಪಾಡಿಕೊಂಡು, ಘಟನೆಗೆ ನೈಜ ಕಾರಣ ತಿಳಿದಿಕೊಂಡ್ರೆ ಉತ್ತಮ ಎನ್ನುವುದು ನೆಟ್ಟಿಗರ ಮಾತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.