ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ನಡುವೆಯೇ ಜೀವನವು ಕ್ರಮೇಣ ಸಾಮಾನ್ಯವಾಗುತ್ತಿದೆ. ಅನ್ಲಾಕ್ 4  (Unlock 4 ) ಸಮಯದಲ್ಲಿ ಆರ್ಥಿಕತೆಯನ್ನು ಮತ್ತೆ ಟ್ರ್ಯಾಕ್ ಗೆ ತರಲ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಸಿನೆಮಾ ಹಾಲ್‌ಗಳು (Cinema Hall) ಯಾವಾಗ ತೆರೆಯುತ್ತವೆ ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ. ಇತ್ತೀಚೆಗೆ ಈ ನಿಟ್ಟಿನಲ್ಲಿ   ಅಕ್ಟೋಬರ್ 1 ರಿಂದ ಸರ್ಕಾರ ಚಿತ್ರಮಂದಿರವನ್ನು ತೆರೆಯಲು ಅನುಮತಿ ನೀಡಿದೆ ಎಂಬ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ.


ಈ ಷರತ್ತುಗಳೊಂದಿಗೆ ದೆಹಲಿಯ ಈ ವಿದ್ಯಾರ್ಥಿಗಳು ಸೆಪ್ಟೆಂಬರ್ 21 ರಿಂದ ಶಾಲೆಗೆ ಹೋಗಲು ಸಾಧ್ಯ!


COMMERCIAL BREAK
SCROLL TO CONTINUE READING

ಆದರೆ ಈ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಇದೊಂದು ನಕಲಿ ಸುದ್ದಿ ಎಂದು ಸಾಬೀತಾಗಿದೆ. ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ತನ್ನ ಫ್ಯಾಕ್ಟ್ ಚೆಕ್‌ನಲ್ಲಿ ಇದನ್ನು ಕಂಡು ಹಿಡಿದಿದೆ. ಅಂದರೆ, ಅಕ್ಟೋಬರ್ 1 ರಿಂದ ಸರ್ಕಾರ ಸಿನಿಮಾ ಹಾಲ್ ತೆರೆಯಲು ಹೋಗುವುದಿಲ್ಲ. ಕಟ್ಟುನಿಟ್ಟಿನ ನಿಯಮಗಳೊಂದಿಗೆ ಅಕ್ಟೋಬರ್ 1 ರಿಂದ ದೇಶಾದ್ಯಂತ ಸಿನೆಮಾ ಹಾಲ್‌ಗಳನ್ನು ಪುನಃ ತೆರೆಯಲು ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ ಎಂಬ ವರದಿಗಳು ನಕಲಿ ವರದಿಗಳಾಗಿವೆ ಎಂದು ಅದು ಸ್ಪಷ್ಟಪಡಿಸಿದೆ.


ಅನ್​ಲಾಕ್-4: ಪಬ್, ಕ್ಲಬ್, ಬಾರ್ ಆಂಡ್ ರೆಸ್ಟೋರೆಂಟ್​ ಆರಂಭ

ವಿಶೇಷವೆಂದರೆ ಅನ್ಲಾಕ್ 4.0 ರಲ್ಲಿ ಮೆಟ್ರೋ (Metro) ಸೇವೆಯನ್ನು ಪುನಃಸ್ಥಾಪಿಸಲು ಸರ್ಕಾರ ಅನುಮತಿ ನೀಡಿತ್ತು, ಆದರೆ ಸಿನೆಮಾ ಹಾಲ್, ಈಜುಕೊಳ ಮತ್ತು ರಂಗಮಂದಿರವನ್ನು ಸೆಪ್ಟೆಂಬರ್ 30 ರವರೆಗೆ ಮುಚ್ಚುವಂತೆ ಕೇಳಿದೆ. ಕರೋನಾದ ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನಿಸಿದರೆ ಇದೀಗ ಸಿನೆಮಾ ಹಾಲ್ ತೆರೆಯುವ ಅಪಾಯವನ್ನು ತೆಗೆದುಕೊಳ್ಳಲು ಸರ್ಕಾರ ಬಯಸುವುದಿಲ್ಲ. ಆದ್ದರಿಂದ ಈ ಕುರಿತಂತೆ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.