ಭಾರತೀಯ ರೈಲು ಇಲಾಖೆ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ವಿಶೇಷ ರೈಲುಗಳನ್ನು ಸಹ ಓಡಿಸುತ್ತಿದೆ. ಬಿಹಾರದಲ್ಲಿ ಪ್ರವೇಶ ಪರೀಕ್ಷೆಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.
'ಸೆಪ್ಟೆಂಬರ್ 21 ರಿಂದ, ಕಂಟೇನ್ಮೆಂಟ್ ವಲಯದ ಹೊರಗೆ ವಾಸಿಸುವ 9-12 ತರಗತಿಗಳ ವಿದ್ಯಾರ್ಥಿಗಳು ತಮ್ಮ ಪೋಷಕರು / ಪಾಲಕರ ಲಿಖಿತ ಒಪ್ಪಿಗೆಯೊಂದಿಗೆ ಶಾಲೆಗೆ ಹೋಗಬಹುದು ಎಂದು ದೆಹಲಿ ಸರ್ಕಾರ ಹೇಳಿದೆ. ಇದಕ್ಕಾಗಿ ಆರೋಗ್ಯ ಸಚಿವಾಲಯವು ಎಸ್ಒಪಿ ನೀಡಲಿದ್ದು ಅದನ್ನು ಶಾಲೆಗಳು ಅನುಸರಿಸಲಿವೆ.
ದೆಹಲಿ ಮೆಟ್ರೋ ದಿನಕ್ಕೆ ಕೇವಲ 8 ಗಂಟೆಗಳ ಕಾಲ ಚಲಿಸುತ್ತದೆ ಮತ್ತು ಸೋಂಕಿತ ವಲಯದ ನಿಲ್ದಾಣಗಳು ಮುಚ್ಚಲ್ಪಡುತ್ತವೆ. ಆದರೆ ಪ್ಲಾಟ್ಫಾರ್ಮ್ನಲ್ಲಿ ಪ್ರಯಾಣಿಕರ ನಡುವಿನ ಸಾಮಾಜಿಕ ಅಂತರವನ್ನು ಕಾಣದಿದ್ದರೆ, ರೈಲು ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂಬ ನಿಯಮವನ್ನೂ ಇದಕ್ಕೆ ಸೇರಿಸಲಾಗಿದೆ.
ಅನ್ಲಾಕ್ 4 ರ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ. ಇದರಲ್ಲಿ ಮೆಟ್ರೋ ಚಲಾಯಿಸಲು ಅನುಮತಿ ನೀಡಲಾಗಿದೆ. ದೆಹಲಿ ಮೆಟ್ರೋ ಸೆಪ್ಟೆಂಬರ್ 7 ರಿಂದ ಕಾರ್ಯಾಚರಣೆ ಆರಂಭಿಸಲಿದೆ.
ಆನ್ಲೈನ್ ಕ್ಲಾಸ್ ಮಾಡಲು ಅಡ್ಡಿ ಇರುವುದಿಲ್ಲ. 9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು (ಕಂಟೇನ್ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಮಾತ್ರ) ಪೋಷಕರ ಒಪ್ಪಿಗೆ ಮೇರೆಗೆ ಶಾಲೆಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.