ಕೋಲ್ಕತ : ಸಧ್ಯ ಕೊರೋನಾ ದೇಶಾದ್ಯಂತ ಭಾರೀ ವೇಗದಲ್ಲಿ ಹಬ್ಬುತ್ತಿದೆ. ದಿನಾಲೂ ಸಾವಿರಾರು ಜನರು ಸೋಂಕಿಗೆ ಬಲಿಯಾಗುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಮತ್ತು ಅವರ ಸಂಬಂಧಿಕರೂ ಕೊರೋನಾದಿಂದ ನಿಧನರಾಗಿದ್ದಾರೆ. ಅದೇ ರೀತಿ ಇದೀಗ ಬಾಲಿವುಡ್ ಖ್ಯಾತ ಸಿಂಗರ್ ಅರ್ಜಿತ್​ ಸಿಂಗ್​ ಅವರ ತಾಯಿ ಕೂಡ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

ಅರ್ಜಿತ್(Arijit Singh) ಅವರ ತಾಯಿಗೆ ಕೆಲ ದಿನಗಳ ಹಿಂದೆ ಕೊರೋನಾ ದೃಢವಾಗಿತ್ತು, ಹಾಗಾಗಿ ಅವರನ್ನು ಕೋಲ್ಕತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಅಸು ನೀಗಿದ್ದಾರೆ.


ಇದನ್ನೂ ಓದಿ : Kangana Ranaut: 'ಒಂದು ವೇಳೆ ನೀವು ಧಣಿಗಳಾಗಿದ್ದರೆ, ಬಡವರ ಬಳಿ ಭಿಕ್ಷೆ ಕೇಳಬೇಡಿ'


ಗಾಯಕನ ತಾಯಿ ಆಸ್ಪತ್ರೆಗೆ ಸೇರಿರುವ ವಿಚಾರವನ್ನು ಮೊದಲು ನಟಿ ಸ್ವಸ್ತಿಕಾ ಮುಖರ್ಜಿ(Swastika Mukherjee) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆಸ್ಪತ್ರೆಯಲ್ಲಿದ್ದ ಅವರಿಗೆ ಎ ನೆಗೆಟಿವ್​ ರಕ್ತದ ಅವಶ್ಯಕತೆ ಇದೆ, ಯಾರಾದರೂ ಮುಂದೆ ಬಂದು ರಕ್ತದಾನ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೋರಿಕೊಂಡಿದ್ದರು. ಅದಾದ ನಂತರ ಆ ಟ್ವೀಟ್​ ಡಿಲೀಟ್ ಮಾಡಲಾಗಿತ್ತು.


ಇದನ್ನೂ ಓದಿ : Neha Kakkar ಬರ್ತ್ ಡೇ ಮರೆತ ಪತಿ ರೋಹನ್ ಪ್ರೀತ್, ಮುಂದೆ..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.