Kangana Ranaut: 'ಒಂದು ವೇಳೆ ನೀವು ಧಣಿಗಳಾಗಿದ್ದರೆ, ಬಡವರ ಬಳಿ ಭಿಕ್ಷೆ ಕೇಳಬೇಡಿ'

'Do Not Beg From Poor If Your Are Rich' - ಕಂಗನಾ ರಣಾವತ್ ಕೊವಿಡ್-19 ವರದಿ ಋಣಾತ್ಮಕ ಬಂದ ಬಳಿಕ ಕಂಗನಾ ಜನರೊಂದಿಗೆ ತನ್ನ ಕೊರೊನಾ ಮಹಾಮಾರಿಯ ಅನುಭವವನ್ನು ಹಂಚಿಕೊಂಡಿದ್ದಾಳೆ.

Written by - Nitin Tabib | Last Updated : May 19, 2021, 09:02 PM IST
  • ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ಬಾಲಿವುಡ್ 'ಕ್ವೀನ್'
  • ಧಣಿಗಳಾಗಿದ್ದರೆ ಬಡವರ ಬಳಿ ಭಿಕ್ಷೆ ಕೇಳಬೇಡಿ ಎಂದ ಕಂಗನಾ ರಣಾವತ್.
  • ಪ್ರಾಮಿನೆಂಟ್ ವ್ಯಕ್ತಿಯಾಗಿದ್ದರೆ ಕೆಲ ವ್ಯಕ್ತಿಗಳ ಹಿಂದೆ ಧಾವಿಸಬೇಡಿ.
Kangana Ranaut: 'ಒಂದು ವೇಳೆ ನೀವು ಧಣಿಗಳಾಗಿದ್ದರೆ, ಬಡವರ ಬಳಿ ಭಿಕ್ಷೆ ಕೇಳಬೇಡಿ' title=
'Do Not Beg From Poor If Your Are Rich' (File Photo)

ಮುಂಬೈ: 'Do Not Beg From Poor If Your Are Rich' - ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಕೂಡ ಕೊರೊನಾ ಸೋಂಕಿಗೆ ಗುರಿಯಾಗಿದ್ದಳು. ಮೇ 8 ರಂದು ಕಂಗನಾ ತನ್ನ ಕೊರೊನಾ ವರದಿ ಪಾಸಿಟಿವ್ ಬಂದುದನ್ನು ಹಂಚಿಕೊಂಡಿದ್ದಳು. ಸುಮಾರು 10 ದಿನಗಳ ಬಳಿಕ ಕಂಗನಾ ತಾನು ಕೊರೊನಾ ಸೊಂಕನ್ನು ಗೆದ್ದುಬಂದಿರುವ ಕುರಿತು ತನ್ನ ಅಭಿಮಾನಿಗಳಿಗೆ ಹೇಳಿದ್ದಳು. ತನ್ನ ಕೊವಿಡ್ -19(Covid-19) ವರದಿ ಋಣಾತ್ಮಕ ಬಂದ ಒಂದು ದಿನದ ಬಳಿಕ ಕಂಗನಾ ತನ್ನ ಇನ್ಸ್ಟಾಗ್ರಾಮ್ ಖಾತೆಯ  ಮೇಲೆ ವಿಡಿಯೋವೊಂದನ್ನು ಹಂಚಿಕೊಂಡು, ಕಾಯಿಲೆಯ ವೇಳೆ ಹೇಗಿರಬೇಕು, ಅದನ್ನು ಹೇಗೆ ನಿರ್ವಹಿಸಬೇಕು... ಈ ಕುರಿತು ತನ್ನ ಅನುಭವಗಳನ್ನು ಹಂಚಿಕೊಂಡಿದ್ದಳು. ಈ ವಿಡಿಯೋದಲ್ಲಿ ಕೊರೊನಾ ಅವಧಿಯಲ್ಲಿ ತಾನು ಏನೇನು ಮಾಡಿದೆ ಎಂಬುದನ್ನು ಕಂಗನಾ ಹೇಳಿಕೊಂಡಿದ್ದಾಳೆ. ಜೊತೆಗೆ ಇನ್ಸ್ಟಾಸ್ಟೋರಿಯಲ್ಲಿ ಸ್ಟೋರಿಯನ್ನು ಕೂಡ ಹಂಚಿಕೊಂಡಿದ್ದಳು.

ಕಂಗನಾ ರಣಾವತ್ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಹಾಮಾರಿಯಿಂದ ಪಡೆದ ಮೊದಲ ಪಾಠವನ್ನು ಹಂಚಿಕೊಂಡಿದ್ದಾಳೆ.

1. ಯಾರು ಕಡಿಮೆ  (ಚಿಕ್ಕವರು) ಇಲ್ಲ, ಪ್ರತಿಯೊಬ್ಬರೂ ಸಹಾಯ ಮಾಡಬಲ್ಲರು. ಆದರೆ, ಇದಕ್ಕಾಗಿ ನೀವು ನಿಮ್ಮ ಜಾಗ, ಪಾತ್ರ ಹಾಗೂ ಸಮಾಜದ ಮೇಲೆ ತಮ್ಮ ಪ್ರಭಾವವನ್ನು ಗುರುತಿಸುವುದು ತುಂಬಾ ಮಹತ್ವದ್ದಾಗಿದೆ.

2. 'ಒಂದು ವೇಳೆ ನೀವು ಧಣಿಗಳಾಗಿದ್ದರೆ, ಬಡವರ ಬಳಿ ಭಿಕ್ಷೆ ಕೇಳಬೇಡಿ'.

3. ಒಂದು ವೇಳೆ ನಿಮ್ಮ ವರ್ಚಸ್ಸು ಆಕ್ಸಿಜನ್, ಬೆಡ್ ಗಳನ್ನು, ಔಷಧಿಗಳನ್ನು ಅರೆಂಜ್ ಮಾಡಬಹುದಾದರೆ, ನೀವು ಹಲವು ಪ್ರಾಣಗಳನ್ನು ಉಳಿಸಬಹುದು.

ಇದನ್ನೂ ಓದಿ- 'ನನಗೆ ವಯಸ್ಸಾಗಿದ್ದರಿಂದ ನನ್ನ ದೇಹವೂ ಬದಲಾಗಿದೆ'- ಪ್ರಿಯಾಂಕಾ ಚೋಪ್ರಾ

4. ಒಂದು ವೇಳೆ ನೀವು ಪ್ರಾಮಿನೆಂಟ್ ವ್ಯಕ್ತಿಗಳಾಗಿದ್ದರೆ, ಕೆಲ  ವ್ಯಕ್ತಿಗಳ ಹಿಂದೆ ಧಾವಿಸಬೇಡಿ. ಲಕ್ಷಾಂತರ ಜನರನ್ನು ಉಳಿಸುವವರನ್ನು ಸಪೋರ್ಟ್ ಮಾಡಿ ಹಾಗೂ ಅವರನ್ನು ರಕ್ಷಿಸಿ.

5.ಯಾವುದೇ ಒಂದು ಶಕ್ತಿ ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಲಕ್ಷಾಂತರ ಬೆಡ್ ಹಾಗೂ ಆಕ್ಸಿಜನ್ ಸಮಸ್ಯೆಯ ಸಮಾಧಾನ ನೀಡಿದರೆ, ನಿಮ್ಮ ಕೊಡುಗೆಯನ್ನು ಮರೆಯದಿರಿ. ಚಿಕ್ಕದಿರಬಹುದು ಆದರೆ ಅಂದನ್ನು ನೆನಪಿನಲ್ಲಿಡಿ. ಹಲವು ಜನರು ಜೀವನದಲ್ಲಿ ನಿಮ್ಮ ದಯೆಯನ್ನು ಒಪ್ಪಿಕೊಳ್ಳುವುದಿಲ್ಲ, ಆದರೆ ಉಳಿದವರು ನಿಮ್ಮ ಬಗ್ಗೆ ಯೋಚಿಸಲಿದ್ದಾರೆ.

ಇದನ್ನೂ ಓದಿ-Paresh Rawal Shared His Demise News: ಅಭಿಮಾನಿಗಳ ಜೊತೆಗೆ ತನ್ನ ಸಾವಿನ ಸುದ್ದಿ ಹಂಚಿಕೊಂಡ Paresh Rawal! ಅಭಿಮಾನಿಗಳು ಮಾಡಿದ್ದೇನು?

ದೇಶದ ಹಲವು ಸೆಲಿಬ್ರಿಟಿಗಳು ಭಾರತದ ಕೊರೊನಾ ಪೀಡಿತರ ಸಹಾಯಕ್ಕಾಗಿ ಸತತವಾಗಿ ಹಣ ಸಂಗ್ರಹಣೆಯಲ್ಲಿ ತೊಡಗಿರುವ ಹಿನ್ನೆಲೆ ಕೊರೊನಾ ಈ ಸಂದೇಶ ಭಾರಿ ಮಹತ್ವಪಡೆದುಕೊಂಡಿದೆ. ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ (Priyanka Chopra) ಕೂಡ ಕೊವಿಡ್-19 ಪರಿಹಾರಕ್ಕಾಗಿ 22 ಕೋಟಿ ರೂ. ಹಣ ಸಂಗ್ರಹಿಸಿರುವ ಮಾಹಿತಿ ಹಂಚಿಕೊಂಡಿದ್ದಾಳೆ. ಇದಲ್ಲದೆ ಅನುಷ್ಕಾ ಶರ್ಮಾ (Anushka Sharma) ಹಾಗೂ ಅವಳ ಪತಿ ವಿರಾಟ್ ಕೊಹ್ಲಿ (Virat Kohli) ತಮ್ಮ ದೇಶಕ್ಕಾಗಿ 11 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Happy Birthday Sunny Leone : 10 ಸಾವಿರ ವಲಸೆ ಕಾರ್ಮಿಕರ ನೆರವಿಗೆ ನಿಂತು 'ಬರ್ತ್ ಡೇ' ಆಚರಿಸಿಕೊಂಡ ಸನ್ನಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News