Druva sarja Martin film : ಸ್ಯಾಂಡಲ್‌ವುಡ್‌ ಸಿನಿಮಾಗಳು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ಸಾಲು ಸಾಲಾಗಿ ನಿಂತಿವೆ. ಕಬ್ಜಾ ನಂತರ ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್‌ ಟೀಸರ್‌ ಬಿಡುಗಡೆಯಾಗಿದ್ದು, ಇದೂ ಸಹ ಭಾರತ ಸಿನಿರಂಗದಲ್ಲಿ ದಾಖಲೆ ಬರೆಯುವ ವಿಶ್ವಾಸ ಮೂಡಿಸಿದೆ. ಮಾರ್ಟಿನ್‌ ಚಿತ್ರದ ವಿಶೇಷ ಅಂದ್ರೆ, ಈ ಸಿನಿಮಾದ ಕಥೆಯನ್ನು ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಅವರು ಬರೆದಿದ್ದು, ಚಿತ್ರದ ಮೇಲಿನ ಕುತೂಹಲಕ್ಕೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಹೌದು, ನಿನ್ನೆ ಮಾರ್ಟಿನ್‌ ಟೀಸರ್‌ ರಿಲೀಸ್‌ ಆಯ್ತು. ಟೀಸರ್‌ ನೋಡಿದ್ರೆ ಮೈ ರೋಮಾಂಚನ ಗೊಳ್ಳುತ್ತದೆ, ನಮಗೆ ತಿಳಿಯದಂತೆ ಆ ಟೀಸರ್‌ನಲ್ಲಿ ಇನ್ವಾಲ್‌ ಆಗುತ್ತೇವೆ. ಇದೋಂದು ರಾಷ್ಟ್ರ ಭಕ್ತ ಸಿನಿಮಾ ಅಂತ ಮೆಲ್ನೋಟಕ್ಕೆ ಕಾಣಿಸುತ್ತದೆ. ಬ್ಯಾಂಗ್ರೌಂಡ್‌ ಮ್ಯೂಸಿಕ್‌ ಸೂಪರ್‌ ಆಗಿದೆ. ಧ್ರುವ ಕಟ್‌ಮಸ್ತ್‌ ಬಾಡಿ ಲುಕ್‌ ಸಖತ್ತಾಗಿದೆ. ಇಷ್ಟು ದಿನ ಡೈಲಾಂಗ್‌ನಿಂದಲೇ ಕಮಾಲ್‌ ಮಾಡುತ್ತಿದ್ದ ಆ್ಯಕ್ಷನ್ ಪ್ರೀನ್ಸ್‌ ಇದೀಗ ಕಂಪ್ಲೀಟ್‌ ಆ್ಯಕ್ಷನ್ ಕಿಂಗ್‌ ಆಗಿದ್ದಾರೆ. 


ಇದನ್ನೂ ಓದಿ: Hoysala songs : ಖಾಕಿ ಖದರ್‌ನಲ್ಲಿ ಡಾಲಿ.. ಹೊಯ್ಸಳ ಫಸ್ಟ್‌ ಸಾಂಗ್‌ ರಿಲೀಸ್‌..! ನೋಡಿ


ಎಲ್ಲರಿಗೂ ತಿಳಿದ ವಿಚಾರ ಅಂದ್ರೆ ಧ್ರುವ ಸರ್ಜಾ, ಅರ್ಜುನ್‌ ಸರ್ಜಾ ಅವರಿಗೆ ಅಳಿಯ ಆಗ್ಬೇಕು. ಸದ್ಯ ಅಳಿಯನಿಗಾಗಿ ಸಾಕಷ್ಟು ಸಮಯ ತಗೊಂಡು ಆ್ಯಕ್ಷನ್ ಕಿಂಗ್‌ ಈ ರೋಚಕ ಕಥೆಯನ್ನು ಸೃಷ್ಟಿಸಿದ್ದು ಇಂಟ್ರಸ್ಟಿಂಗ್‌ ವಿಚಾರ. ಇನ್ನೊಂದು ವಿಚಾರ ಏನಪ್ಪಾ ಅಂದ್ರೆ, ಈ ಸಿನಿಮಾದಲ್ಲಿ ಧ್ರುವ ಸರ್ಜಾ ʼಮಾರ್ಟಿನ್‌ʼ ಅಲ್ವಂತೆ, ಹಾಗಂತ ಅರ್ಜುನ್‌ ಸರ್ಜಾ ಕೂಡ ಈ ಸಿನಿಮಾದಲ್ಲಿ ನಟಿಸಿಲ್ಲ. ಹಾಗಿದ್ರೆ,, ಮಾರ್ಟಿನ್‌ ಯಾರು...? ಎಂಬ ಪ್ರಶ್ನೆಯ ಕುರಿತು ತಲೆಕೆಡಿಸಿಕೊಳ್ಳುವಂತಾಗಿದೆ. ಇದಕ್ಕೆ ಉತ್ತರ ಸಿಕ್ಬೇಕು ಅಂದ್ರೆ ಸಿನಿಮಾ ರಿಲೀಸ್‌ ಅಗೋವರೆಗೂ ಕಾಯಲೇಬೇಕು.


ಇನ್ನು ʼಮಾರ್ಟಿನ್ʼ ರೋಚಕ ಕಥೆಯನ್ನು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಬರೆದಿದ್ದಾರೆ. ಈ ಕಂಪ್ಲೀಟ್‌ ಆಕ್ಷನ್ ಎಂಟರ್‌ಟೈನರ್ ಚಲನಚಿತ್ರವನ್ನು ಎ ಪಿ ಅರ್ಜುನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ ಮತ್ತು ವೈಭವಿ ಶಾಂಡಿಲ್ಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮಣಿ ಶರ್ಮಾ ಮತ್ತು ರವಿ ಬಸ್ರೂರ್ ಹಾಡುಗಳನ್ನು ಸಂಯೋಜಿಸಿದ್ದಾರೆ. ಸತ್ಯ ಹೆಗಡೆ ಅ‍ದ್ದೂರಿ ಛಾಯಾಗ್ರಹಣ ಈ ಸಿನಿಮಾಗಿದೆ. ಕೆಎಂ ಪ್ರಕಾಶ್ ಸಂಕಲನ ಈ ಸಿನಿಮಾವನ್ನು ವಾಸವಿ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಉದಯ್ ಕೆ ಮೆಹ್ತಾ ನಿರ್ಮಿಸಿದ್ದಾರೆ.


ಇದನ್ನೂ ಓದಿ: Selfiee collecion : ಕೇವಲ 1 ಕೋಟಿ ಹಣ ಗಳಿಸಿದ ಅಕ್ಷಯ್‌ ಕುಮಾರ್‌ ʼಸೆಲ್ಫಿ ಸಿನಿಮಾʼ..! ʼಪಠಾಣ್‌ʼ ದಾಖಲೆ ಮುರಿದಂತೆ ಬಿಡಿ..


ಪ್ಯಾನ್‌ ಇಂಡಿಯಾ ಸಿನಿಮಾ ಮಾರ್ಟಿನ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ವಿಶೇಷ ಅಂದ್ರೆ ಖ್ಯಾತ ಸ್ಟಂಟ್ ಡೈರೆಕ್ಟರ್‌ ಬ್ರದರ್ಸ್‌ ರಾಮ್-ಲಕ್ಷ್ಮಣ್ ಮತ್ತು ರವಿವರ್ಮ ಅವರು 40 ದಿನಗಳ ಕಾಲ ಕ್ಲೈಮ್ಯಾಕ್ಸ್ ಆಕ್ಷನ್ ಸೀಕ್ವೆನ್ಸ್‌ಗಳನ್ನು ಸಂಯೋಜಿಸಿದ್ದಾರೆ. ಮಾರ್ಟಿನ್ 2023 ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.