Selfiee collecion : ಕೇವಲ 1 ಕೋಟಿ ಹಣ ಗಳಿಸಿದ ಅಕ್ಷಯ್‌ ಕುಮಾರ್‌ ʼಸೆಲ್ಫಿ ಸಿನಿಮಾʼ..! ʼಪಠಾಣ್‌ʼ ದಾಖಲೆ ಮುರಿದಂತೆ ಬಿಡಿ..

ಬಾಲಿವುಡ್‌ ಸ್ಟಾರ್‌ ನಟ ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ಸೆಲ್ಫಿ ಒಂದು ದಿನದ ಹಿಂದೆ ಬಿಡುಗಡೆಯಾಗಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಆದರೆ ಬಿಡುಗಡೆಯಾದ ಮೊದಲ ದಿನವೇ ಚಿತ್ರ ಕಲೆಹಾಕಿದ ಅಂಕಿಅಂಶಗಳು ಅತ್ಯಂತ ಆಘಾತಕಾರಿಯಾಗಿದ್ದು, ಸೂಪರ್‌ಸ್ಟಾರ್‌ ನಟನ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೇವಲ 1. 30 ಕೋಟಿಗಳನ್ನು ಗಳಿಸಿದೆ.

Written by - Krishna N K | Last Updated : Feb 25, 2023, 03:34 PM IST
  • ಬಾಲಿವುಡ್‌ ಸ್ಟಾರ್‌ ನಟ ಅಕ್ಷಯ್ ಕುಮಾರ್ ಸೆಲ್ಫಿ ಸಿನಿಮಾ ಒಂದು ದಿನದ ಹಿಂದೆ ಬಿಡುಗಡೆಯಾಗಿದೆ.
  • ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ.
  • ಆದರೆ ಬಿಡುಗಡೆಯಾದ ಮೊದಲ ದಿನವೇ ಚಿತ್ರ ಕಲೆಹಾಕಿದ ಅಂಕಿಅಂಶಗಳು ಅತ್ಯಂತ ಆಘಾತಕಾರಿಯಾಗಿದೆ.
Selfiee collecion : ಕೇವಲ 1 ಕೋಟಿ ಹಣ ಗಳಿಸಿದ ಅಕ್ಷಯ್‌ ಕುಮಾರ್‌ ʼಸೆಲ್ಫಿ ಸಿನಿಮಾʼ..! ʼಪಠಾಣ್‌ʼ ದಾಖಲೆ ಮುರಿದಂತೆ ಬಿಡಿ.. title=

Selfiee box office collection Day 1 : ಬಾಲಿವುಡ್‌ ಸ್ಟಾರ್‌ ನಟ ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ಸೆಲ್ಫಿ ಒಂದು ದಿನದ ಹಿಂದೆ ಬಿಡುಗಡೆಯಾಗಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಆದರೆ ಬಿಡುಗಡೆಯಾದ ಮೊದಲ ದಿನವೇ ಚಿತ್ರ ಕಲೆಹಾಕಿದ ಅಂಕಿಅಂಶಗಳು ಅತ್ಯಂತ ಆಘಾತಕಾರಿಯಾಗಿದ್ದು, ಸೂಪರ್‌ಸ್ಟಾರ್‌ ನಟನ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೇವಲ 1. 30 ಕೋಟಿಗಳನ್ನು ಗಳಿಸಿದೆ.

ಈ ಹಿಂದೆ ಕಾರ್ತಿಕ್ ಆರ್ಯನ್ ಅವರ ಶೆಹಜಾದಾ ಒಂದು ದಿನದ ಮೊತ್ತವನ್ನೂ ಸಹ ದಾಟಲು ಅಕ್ಷಯ್‌ ಕುಮಾರ್‌ ಸೆಲ್ಫಿಗೆ ಸಾಧ್ಯವಾಗಿಲ್ಲ. ಶೆಹಜಾದಾ ಒಂದು ದಿನದಲ್ಲಿ 2.92 ಕೋಟಿ ಗಳಿಸಿತು. ಇನ್ನು ಈ ಕುರಿತು ತರಣ್ ಆದರ್ಶ್ ಟ್ವೀಟ್‌ ಮಾಡಿದ್ದು, ಅಕ್ಷಯ್ ಕುಮಾರ್ ನಟನೆಯ ಸೆಲ್ಫಿಯ ಬಾಕ್ಸ್ ಆಫೀಸ್‌ ಮೊತ್ತದ ಕುರಿತು ದಾಖಲೆ ನೀಡಿದ್ದಾರೆ. ಒಬ್ಬ ಸೂಪರ್‌ ಸ್ಟಾರ್‌ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಕೇವಲ 1.30 ಕೋಟಿಗಳಿಸಿರುವುದು ಆಘಾತ ಉಂಟುಮಾಡಿದೆ.

ಇದನ್ನೂ ಓದಿ: Urvashi Rautela : ಊರ್ವಶಿ ರೌಟೇಲಾ ಜೊತೆ ಡೇಟಿಂಗ್ ಲಿಸ್ಟ್'ನಲ್ಲಿ ಅಂಬಾನಿ ಮಗ ಸೇರಿ ಖ್ಯಾತ ಕ್ರಿಕೆಟಿಗರು!

ಯಾವಾಗ್ಲೂ ಅಕ್ಷಯ್ ಕುಮಾರ್ ತಮ್ಮ ವಿಶಿಷ್ಟ ಸ್ಕ್ರಿಪ್ಟ್‌ ಮೂಲಕ  ತೆರೆ ಮೇಲೆ ಬಂದು ಮೋಡಿ ಮಾಡುತ್ತಿದ್ದರು. ಆದ್ರೆ, ಸೆಲ್ಫಿ ಸಿನಿಮಾ ಹೆಚ್ಚಾಗಿ ಪ್ರೇಕ್ಷಕರ ಗಮನಸೆಳೆಯುತ್ತಿಲ್ಲ. ಬಾಕ್ಸ್ ಆಫೀಸ್ ನಿಜಕ್ಕೂ ಅಘಾತ ದಾಖಲೆಯನ್ನು ಅಕ್ಷಯ್‌ ಸಿನಿಮಾ ಮಾಡಿದೆ. ಸೆಲ್ಫಿ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿದೆ ಎಂದು ಘೋಷಿಸಲಾಗಿದೆ. ಇದು ಅಕ್ಷಯ್ ಕುಮಾರ್ ಅವರ ಸತತ ಆರನೇ ಚಿತ್ರವಾಗಿದ್ದು, ಒಂದು ಗಲ್ಲಾ ಪಟ್ಟಿಯಲ್ಲಿ ವಿಫಲವಾಗಿದೆ. ಇನ್ನು ಅಕ್ಷಯ್‌ ಕುಮಾರ್‌ ಸೆಲ್ಫಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ವಿಫಲವಾದ ಹಿನ್ನೆಲೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೋಲ್‌ ಮಾಡಲಾಗುತ್ತಿದೆ. ಅಲ್ಲದೆ, ಪಠಾಣ್‌ ದಾಖಲೆ ಮುರಿಯೋದು ಯಾವಾಗ ಅಂತ ನೆಟ್ಟಿಗರು ಹಾಸ್ಯ ಮಾಡುತ್ತಿದ್ದಾರೆ.

ಅಕ್ಷಯ್‌ ಕುಮಾರ್‌ ಸೆಲ್ಫಿ ಸಿನಿಮಾ ಕಾಲಿವುಡ್‌ನ ಡ್ರೈವಿಂಗ್‌ ಲೈಸೆನ್ಸ್‌ ಸಿನಿಮಾದ ರಿಮೇಕ್ ಆಗಿದೆ. ಮಲಯಾಳಂನಲ್ಲಿ ಪೃಥ್ವಿರಾಜ್ ಮತ್ತು ಸೂರಜ್ ವೆಂಜರಮೂಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಹಿಂದಿಯಲ್ಲಿ ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸೆಲ್ಫಿ ಸಿನಿಮಾ ಕರಣ್ ಜೋಹರ್ ಧರ್ಮ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News