Entertainment:ಒಂದು ಕಾಲದಲ್ಲಿ ಸೇಲ್ಸ್‌ ಮ್ಯಾನ್‌  ಅಲ್ಲದೆ  ಫೋಟೋ ಲ್ಯಾಬ್‌ ಕೆಲಸ ಮಾಡುತ್ತಿದ್ದವರು  ಇಂದು  ತಮ್ಮ ಪ್ರತಿಭೆಯ ಮೂಲಕ  ವಿಶ್ವಾದ್ಯಂತ ಹೆಸರು ಮತ್ತು ಖ್ಯಾತಿಯನ್ನು ಗಳಿಸಿದ್ಧಾರೆ. ಈ ನಟನಿಗೆ ನೃತ್ಯ ಎಂದರೆ  ಅಚ್ಚುಮೆಚ್ಚು.1968 ಏಪ್ರಿಲ್    19 ರಲ್ಲಿ ಜನಿಸಿದ ಇವರು   ಮಹೇಶ್ ಭಟ್‌ಗೆ ಸಹಾಯಕ ನಿರ್ದೇಶಕರಾಗಿ ಮೊದಲು  1987 ರಲ್ಲಿ ಸೇವೆ ಸಲ್ಲಿಸಿದರು .


COMMERCIAL BREAK
SCROLL TO CONTINUE READING

ಅರ್ಷದ್ ವಾರ್ಸಿ ಡ್ಯಾನ್ಸ್ ಕ್ಸೇವಿಯರ್ ಕಾಲೇಜಿನಲ್ಲಿ ನೃತ್ಯ ಪ್ರದರ್ಶನವನ್ನು ನೀಡಲು ಹೋದಾಗ ಅವರಗೆ ಮರಿಯಾ ಎಂಬ   ಹುಡಿಗಿಯ ನೃತ್ಯ ಜೊತೆಗೆ ಆಕೆಯ ಸೌಂದರ್ಯವು  ನಟನನ್ನು  ಪ್ರೀತಿಯ ಬಲೆಗೆ ಜಾರುವಂತೆ ಮಾಡಿತು. ನೃತ್ಯದ ಮೇಲಿನ ಪ್ರೀತಿಯೇ ತಮ್ಮ ಪ್ರೇಯಸಿಯನ್ನು ಭೇಟಿಯಾಗುವಂತೆ ಮಾಡಿತು.


ಇದನ್ನೂ ಓದಿ: ಧಿಡೀರ್‌ ಮದುವೆ ಮುಂದೂಡಿದ ಶೇರ್‌ ಷಾ ಜೋಡಿ....
 
ಅರ್ಷದ್ ಅವರ ಪ್ರೀತಿ  ಪ್ರಸ್ತಾಪವನ್ನು  ಮರಿಯಾ ಮುಂದೆ ಹೇಳುತ್ತಾರೆ. ಆದರೆ ಮಹಿಳೆಯರ ಬುದ್ಧಿ ನಿಮಗೆ ಗೊತ್ತಲ್ವಾ .... ಯಾರ ಮೇಲಾದರೂ ಪ್ರೀತಿ ಅಥವಾ ಆಕರ್ಷಣೆ  ಇದ್ದರೆ  ಯಾರು ಮುಂದೆ ಸುಲಭವಾಗಿ   ಪ್ರಸ್ತಾಪಿಸುವುದಿಲ್ಲ... ನಮ್ಮನ್ನು ಯಾರಾದರೂ ಇಷ್ಟ ಪಡುತ್ತಾರೆ ಎಂದರೆ ಅವರನ್ನು ಒಂದಿಷ್ಟು ಸತಹಿಸುವುದು ಎಲ್ಲಾ ಹುಡುಗಿಯರ ಲಕ್ಷಣ...


ಹಾಗೆಯೇ ಅರ್ಷದ್ ರವರ ಕಥೆಯಲ್ಲೂ ಮರಿಯಾಳಿಗೆ ಇಷ್ಟವಿದ್ದರೂ ಇಲ್ಲ ಎಂದೇ ವಾದಿಸುತ್ತಿದ್ದರಂತೆ.. ತಮ್ಮ ಪ್ರೇಯಸಿಯ ಕಡೆಯಿಂದ ʼರಿಜೆಕ್ಟ್‌ʼ  ಉತ್ತರ ಬಂದಿದ್ದರೂ ನಟ ಮಾತ್ರ ಅದನ್ನ ಓಪ್ಪದೇ ಮತ್ತೆ  ಸ್ನೇಹಿತನ ಮೂಲಕ ಆಕೆಯನ್ನುಭೇಟಿಯಾದರೂ ಪ್ರೀತಿಯ ಸುಳಿವು ನೀಡುತ್ತಿರಲಿಲ್ಲ.ಆದರೆ ಮಾರಿಳಿಗೂ  ತನ್ನ  ಮೇಲೆ   ಮನಸ್ಸಿದೆ ಎಂದು   ಅರ್ಷದ್‌ಗೆ  ಗೊತ್ತಿತ್ತು. 


 ಒಮ್ಮೆ ಅರ್ಷದ್ ದುಬೈ ಪ್ರವಾಸಕ್ಕೆ ಹೋದಾಗ, ಮಾರಿಯಾ ಕೂಡ ಅವರೊಂದಿಗೆ ಹೋಗಿದ್ದರು.    ಆಗ ಅರ್ಷದ್ ತಂಪು ಪಾನೀಯದಲ್ಲಿ  ಬಿಯರ್ ಬೆರೆಸಿದ್ದರಂತೆ ಅದನ್ನ ಅರಿಯದೇ ಮಾರಿಯಾ ಬಿಯರ್ ಕುಡಿದು ಅರ್ಷದ್ ವಾರ್ಸಿ  ಮೇಲಿನ  ಪ್ರೀತಿಯನ್ನು ವ್ಯಕ್ತಪಡಿಸಿದ್ದರಂತೆ ಅದೇನೆ ಇರಲಿ ಕೊನೆಗೂ ಬಿಯರ್  ಕುಡಿದಾದರೂ ಅರ್ಷದ್ ವಾರ್ಸಿ  ಮೇಲಿನ  ಪ್ರೀತಿ ಗುಟ್ಟು ರಟ್ಟಾಯಿತೇಂಬುವುದೇ ಖುಷಿಯ ವಿಚಾರ!


ಇದನ್ನೂ ಓದಿ:ಬಾಕ್ಸ್ ಆಫೀಸ್ ನಲ್ಲಿ ಮುಂದುವರೆದ ಪಠಾಣ್ ಅಬ್ಬರ, 12 ದಿನಗಳಲ್ಲಿ 832.20 ಕೋಟಿ..! 


ಅರ್ಷದ್ ವಾರ್ಸಿ ಮತ್ತು  ಮಾರಿಯಾ ಅವರ ಲವ್ ಸ್ಟೋರಿ ನಿಧಾನವಾಗಿ ಏರಲು ಪ್ರಾರಂಭವಾಗಿ  ಪರಸ್ಪರ  ಪ್ರೀತಿಸಿ ಮದುವೆಯಾದರು .  1996ರಲ್ಲಿ ಅರ್ಷದ್ ವಾರ್ಸಿ ಮೊದಲ 'ಆಯ್ ತೇರೆ ಮೇರೆ ಸಪ್ನೆ' ಚಿತ್ರ ತೆರೆ ಮೇಲೆ ಬಂದಿತ್ತು ಆದರೆ ಯಾವುದೇ ಯಶಸ್ಸನ್ನು ತಂದು ಕೊಡಲಿಲ್ಲ.ಇದರಿಂದಾಗಿ ಅರ್ಷದ್ ವಾರ್ಸಿ ಮೂರು ವರ್ಷಗಳ ಕಾಲ ಮನೆಯಲ್ಲಿ ಖಾಲಿ ಕುಳಿತಿದ್ದರು. ಪತಿಯ ಸೋಲಿನ ಸಮಯದಲ್ಲೂ ಕೈ ಬಿಡದೇ  ಮರಿಯಾ ಮನೆಯ ಎಲ್ಲಾ ಜವಾಬ್ದಾರಿಯನ್ನು ತಾನೇ ನಿಭಾಯಿಸುತ್ತಿದ್ದರು.ಬಹುಷಃ ವಾರ್ಸಿ ಡ್ಯಾನ್ಸ್ ಕ್ಸೇವಿಯರ್ ಕಾಲೇಜಿನಲ್ಲಿ ನೃತ್ಯ ಪ್ರದರ್ಶನವನ್ನು ನೀಡಲು ಹೋಗದಿದ್ದರೇ ಮರಿಯಾಳಂತ ಪತ್ನಿ ಸಿಗುತ್ತಿರಲಿಲ್ಲ ಎನಿಸುತ್ತದೆ. ನೃತ್ಯದ ಮೇಲಿನ ಪ್ರೀತಿಯೇ ತಮ್ಮ ಪ್ರೇಯಸಿಯನ್ನು ಭೇಟಿಯಾಗುವಂತೆ ಮಾಡಿತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.