Aryan Khan Case: ಸಮೀರ್ ವಾಂಖೇಡೆ ಹಾಗೂ ಶಾರುಖ್ ಖಾನ್ ನಡುವಿನ ಬೆಚ್ಚಿಬೀಳಿಸುವ ಚಾಟ್ ಬಹಿರಂಗ
Aryan Khan Drugs Case: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಜೊತೆಗಿನ ಚಾಟ್ ವಿವರಗಳನ್ನು ಸಮೀರ್ ವಾಂಖೆಡೆ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಗೆ ಲಗಟ್ಟಿಸಿದ್ದಾರೆ. ಈ ವೇಳೆ ವಾಂಖೆಡೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಅವರ ಮೇಲಿದೆ.
Aryan Khan Case: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣದಲ್ಲಿ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಎದುರಿಸುತ್ತಿದ್ದಾರೆ. ಏತನ್ಮಧ್ಯೆ ಕಿಂಗ್ ಖಾನ್ ಜೊತೆಗಿನ ವಾಂಖೆಡೆ ಚಾಟ್ ವಿವರಗಳು ಇದೀಗ ಮುನ್ನೆಲೆಗೆ ಬಂದಿವೆ. ಸಮೀರ್ ವಾಂಖೆಡೆ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯೊಂದಿಗೆ ಈ ಚಾಟ್ ವಿವರಗಳನ್ನು ಲಗತ್ತಿಸಿದ್ದಾರೆ. ಚಾಟ್ ಸಂಭಾಷಣೆಯಲ್ಲಿ, ಆರ್ಯನ್‌ನಿಂದ ಯಾವುದೇ ತಪ್ಪಾಗಿಲ್ಲ ಎಂದು ಹೇಳುವ ಪ್ರಯತ್ನ ನಡೆಸಲಾಗಿದೆ. ವರಿಷ್ಠರ ಆದೇಶದಂತೆ ಪ್ರಕರಣದಲ್ಲಿ ಕೆಲಸ ಮಾಡಿರುವುದಾಗಿ ಸಮೀರ್ ವಾಂಖೆಡೆ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಶಾರುಖ್ ಮತ್ತು ಸಮೀರ್ ವಾಂಖೆಡೆ ನಡುವಿನ ಮಾತುಕತೆ ಹೇಗಿತ್ತು
ಸಮೀರ್ ವಾಂಖೆಡೆ ಪ್ರಕಾರ, ಶಾರುಖ್ ಖಾನ್ ಅವರಿಗೆ ಚಾಟ್‌ನಲ್ಲಿ ಮೆಸೇಜ್ ಕಳುಹಿಸಿದ್ದರು ಎನ್ನಲಾಗಿದೆ. ಸಮೀರ್ ಗೆ ಕಳುಹಿಸಿರುವ ಸಂದೇಶದಲ್ಲಿ, ಕಿಂಗ್ ಖಾನ್, “ನನ್ನ ಬಗ್ಗೆ ನೀವು ನನಗೆ ನೀಡಿದ ಎಲ್ಲಾ ವಿಚಾರಗಳು ಮತ್ತು ವೈಯಕ್ತಿಕ ಮಾಹಿತಿಗಳಿಗಾಗಿ ನಾನು ನಿಮಗೆ ಸಾಕಷ್ಟು ಧನ್ಯವಾದ ಹೇಳಲಾರೆ. ಆದರೆ ಆತ ನೀವು ಮತ್ತು ನಾನು ಹೆಮ್ಮೆಪಡುವಂತಹ ವ್ಯಕ್ತಿಯಾಗುತ್ತಾನೆ ಎಂಬುದನ್ನು ನಾನು ಸುನೀಶ್ಚಿತಗೊಳಿಸುವೆ. ಈ ಘಟನೆ ಆತನ ಜೀವನದಲ್ಲಿ ಒಂದು ಉತ್ತಮ ತಿರುವು ಎಂದು ಸಾಬೀತಾಗಲಿದೆ ಎಂಬ ಭರವಸೆ ನಾನು ನೀಡುತ್ತೇನೆ, ಒಳ್ಳೆಯ ರೀತಿಯಲ್ಲಿ...." ಇದಕ್ಕೂ ಮುಂದುವರೆದು ತಮ್ಮ ಚಾಟ್ ನಲ್ಲಿ ಬರೆದುಕೊಂಡ, ಶಾರುಖ್ ಖಾನ್ ಧನ್ಯವಾದ, ನೀವು ಓರ್ವ ಒಳ್ಳೆಯ ವ್ಯಕ್ತಿ ಎಂದು ಬರೆದಿದ್ದಾರೆ. ದಯವಿಟ್ಟು ಇಂದು ಆತನ ಮೇಲೆ ಕರುಣೆ ತೋರಿ ಎಂದು ನಾನು ವಿನಂತಿಸುತ್ತೇನೆ. ಇದಕ್ಕೆ ಉತ್ತರಿಸಿದ ವಾಂಖೆಡೆ - ಖಂಡಿತವಾಗಿ ಚಿಂತಿಸಬೇಡಿ ಎಂದಿದ್ದಾರೆ.
ಚಾಟ್ ನಲ್ಲಿ ಮುಂದುವರೆದು ಬರೆದುಕೊಂಡಿರುವ ಶಾರುಖಾನ್ " ಗಾಡ್ ಬ್ಲೇಸ್ ಯು, ನಾನು ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ ತಬ್ಬಿಕೊಳ್ಳಲು ಬಯಸುತ್ತೇನೆ. ದಯವಿಟ್ಟು ಅದು ನಿಮಗೆ ಸಾಧ್ಯವಾದಾಗ ನನಗೆ ತಿಳಿಸಿ. ನಾನು ಯಾವಾಗಲೂ ನಿಮ್ಮನ್ನು ಗೌರವಿಸುತ್ತೇನೆ ಎಂಬುದು ಸತ್ಯ ಮತ್ತು ಇದೀಗ ಅದು ಮತ್ತಷ್ಟು ಹೆಚ್ಚಾಗಿದೆ ಅದು ದೊಡ್ಡ ಗೌರವ" ಎಂದು ಬರೆದಿದ್ದಾರೆ ಇದಕ್ಕೆ ಉತ್ತರಿಸಿದ ವಾಂಖೆಡೆ, "ಖಂಡಿತ ಡಿಯರ್, ಇದೆಲ್ಲವೂ ಮೊದಲು ಮುಗಿದುಹೋಗಲಿ ಭೇಟಿಯಾಗೋಣ." ಎಂದಿದ್ದಾರೆ.
ವಾಂಖೆಡೆ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಲಂಚ ಪಡೆದ ಆರೋಪವನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ಇದನ್ನೂ ಓದಿ-G-7 Summit Update: G7 ಶೃಂಗಸಭೆಯಲ್ಲಿ ಭಾಗಿಯಾಗಲು ಜಪಾನ್ ತೆರಳಲಿದ್ದಾರೆ ಪಿಎಂ ಮೋದಿ
ವಾಂಖೆಡೆ ಮೇಲಿನ ಆರೋಪಗಳೇನು?
2021 ರ ಅಕ್ಟೋಬರ್ 3 ರಂದು ಗೋವಾಗೆ ಹೋಗುತ್ತಿದ್ದ ಕಾರ್ಡೆಲಿಯಾ ಕ್ರೂಸ್ ನಿಂದ ಮಾದಕವಸ್ತು ವಶಪಡಿಸಿಕೊಂಡ ಪ್ರಕರಣದಲ್ಲಿ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಆರೋಪಿಯನ್ನಾಗಿ ಮಾಡದಿದ್ದಕ್ಕಾಗಿ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರು 25 ಕೋಟಿ ರೂಪಾಯಿ ಲಂಚವನ್ನು ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪಗಳಿಂದಾಗಿ ಸಿಬಿಐ ಇತ್ತೀಚೆಗೆ ವಾಂಖೆಡೆ ಮತ್ತು ಇತರ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಆದರೆ, ಸಿಬಿಐಗೆ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ವಾಂಖೆಡೆ ಹೈಕೋರ್ಟ್ ರಜಾಕಾಲದ ಪೀಠಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ವಾಂಖೆಡೆ ಅವರ ಈ ಅರ್ಜಿಯ ಕುರಿತು ಪೀಠದ ತೀರ್ಪು ಇನ್ನಷ್ಟೇ ಬರಬೇಕಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ