ನವದೆಹಲಿ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್(Aryan Khan) ಮುಂಬೈ ಕ್ರೂಸ್ ಹಡಗಿನ ಹೈಟೆಕ್ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಜೈಲುಪಾಲಾಗಿದ್ದರು. ಕಳೆದ ವಾರ ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಹೊರಬಂದ ನಂತರ ತಮ್ಮ Instagram ಪ್ರೊಫೈಲ್ ಚಿತ್ರವನ್ನು ಅಳಿಸಿದ್ದಾರೆ. 23 ವರ್ಷದ ಸ್ಟಾರ್ ಕಿಡ್ ಆರ್ಯನ್ ಖಾನ್ Instagramನಲ್ಲಿ 1.9 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.


COMMERCIAL BREAK
SCROLL TO CONTINUE READING

ಜೈಲಿನಿಂದ ಹೊರಬಂದ ಬಳಿಕ ಆರ್ಯನ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಚಿತ್ರ(Instagram Profile Picture)ವನ್ನು ಡಿಲೀಟ್ ಮಾಡಿರುವುದು ಅವರ ಅಭಿಮಾನಿಗಳಿಗೆ ದೊಡ್ಡ ಗೊಂದಲವನ್ನು ಮೂಡಿಸಿದೆ. ಆರ್ಯನ್ ಹೀಕೆಗೆ ಮಾಡಿದರು ಅಂತಾ ಅನೇಕರು ತಲೆಕೆಡಿಸಿಕೊಂಡಿದ್ದಾರೆ. ಆರ್ಯನ್ ಇನ್‌ಸ್ಟಾಗ್ರಾಮ್ ಸ್ನೇಹಿ ವ್ಯಕ್ತಿಯಲ್ಲ. ಈ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗೆ 2013ರಲ್ಲಿ ಸೇರಿದ್ದ ಅವರು ಇದುವರೆಗೂ ಕೇವಲ 24 ಪೋಸ್ಟ್‌ ಗಳನ್ನು ಮಾತ್ರ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ:  ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಸಂಗ್ರಹವು 1.30 ಲಕ್ಷ ಕೋಟಿ ರೂ.ಗೆ ಏರಿಕೆ


ಎನ್​ಸಿಬಿ ಬಲೆಗೆ ಬಿದ್ದು ಜೈಲು ಸೇರಿದ್ದ ಆರ್ಯನ್  ಸದ್ಯ ಜಾಮೀನು ಪಡೆದು ಹೊರಬಂದಿದ್ದಾರೆ. ಬಾಂಬೆ ಹೈಕೋರ್ಟ್(High Court of Bombay)​ ಅ.28ರಂದು ಶಾರುಖ್​ ಪುತ್ರನಿಗೆ ಜಾಮೀನು ನೀಡಿತ್ತು. ಜೈಲಿನ ಪ್ರಕ್ರಿಯೆಗಳು ಮುಗಿದ ಬಳಿಕ ಅ.30ರಂದು ಆರ್ಯನ್ ಜೈಲಿನಿಂದ ಹೊರಗೆ ಬಂದು ಶಾರುಖ್ ನಿವಾಸ ಮನ್ನತ್ ಗೆ ಹಿಂತಿರುಗಿ ಕುಟುಂಬವನ್ನು ಸೇರಿದ್ದರು. ಸೆರೆವಾಸದಿಂದ ಪಾರಾಗಿ ಬಂದ ಆರ್ಯನ್ ಸ್ವಾಗತಿಸಲು ಶಾರುಖ್ ನಿವಾಸದ ಎದುರಿನಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಡೋಲ್ ಭಾರಿಸಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸುವ ಮೂಲಕ ಆರ್ಯನ್ ಅವರನ್ನು ಸ್ವಾಗತಿಸಿದ್ದರು.


ಅ.2ರಂದು ಮಂಬೈನ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ(Mumbai Drugs Case) ನಡೆಯುತ್ತಿದೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಆರ್ಯನ್​ ಖಾನ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಅವರನ್ನು ಕೋರ್ಟ್​ ನ್ಯಾಯ್ಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಸುಮಾರು 25 ದಿನಗಳಿಗೂ ಹೆಚ್ಚು ದಿನಗಳ ಕಾಲ ಆರ್ಯನ್​ ಆರ್ಥರ್​ ರೋಡ್​ ಜೈಲಿನಲ್ಲಿದ್ದರು. ಪುತ್ರನಿಗೆ ಜಾಮೀನು ಕೊಡಿಸಲು ಹರಸಾಹಪಟ್ಟಿದ್ದ ಶಾರುಖ್ ಮತ್ತು ಗೌರಿ ಖಾನ್ ಈಗ ನಿಟ್ಟುಸಿರು ಬಿಟ್ಟಿದ್ದಾರೆ.  


ಇದನ್ನೂ ಓದಿ: Viral News: ಹೆಂಡತಿಯ ಮಾತು ಕೇಳಿ ಗಂಡನ ಮನ ಕರಗಿತು, ಆಮೇಲೆ ಏನಾಯ್ತು..?


 ಕಳೆದ ವಾರ ಆರ್ಯನ್(Aryan Khan) ಜೈಲಿನಿಂದ ಮರಳಿದ ನಂತರ SRK ಸ್ನೇಹಿತರು ಮತ್ತು ಉದ್ಯಮದ ಸಹೋದ್ಯೋಗಿಗಳು ಟ್ವೀಟ್ ಮಾಡುವ ಮೂಲಕ ಸ್ವಾಗತಿಸಿದ್ದರು. ಕರಣ್ ಜೋಹರ್, ಶನಯಾ ಕಪೂರ್, ಹನ್ಸಲ್ ಮೆಹ್ತಾ ಇತರರು ಸಾಮಾಜಿಕ ಮಾಧ್ಯಮದಲ್ಲಿ ಪ್ರೀತಿಯನ್ನು ತೋರಿಸಿದ್ದರು. ಆರ್ಯನ್ ಸಹೋದರಿ ಸುಹಾನಾ ಖಾನ್ ತಮ್ಮ ಬಾಲ್ಯದ ಚಿತ್ರವನ್ನು Instagramನಲ್ಲಿ ಪೋಸ್ಟ್ ಮಾಡಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ