ಅಕ್ಟೋಬರ್ 4 ವರೆಗೆ ಶಾರುಖ್ ಖಾನ್ ಪುತ್ರ ಆರ್ಯನ್ NCB ಕಸ್ಟಡಿಗೆ

ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನನ್ನು ಮಾದಕ ದ್ರವ್ಯ ನಿಯಂತ್ರಣ ಪ್ರಕರಣದಲ್ಲಿ ಬಂಧಿಸಲಾಗಿದೆ.ಪಿಟಿಐ ವರದಿಯ ಪ್ರಕಾರ ಮುಂಬೈ ಕೋರ್ಟ್ ಆರ್ಯನ್ ಮತ್ತು ಇತರ ಇಬ್ಬರು ವ್ಯಕ್ತಿಗಳನ್ನು ಅಕ್ಟೋಬರ್ 4 ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಿದೆ.

Written by - Zee Kannada News Desk | Last Updated : Oct 3, 2021, 09:04 PM IST
  • ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನನ್ನು ಮಾದಕ ದ್ರವ್ಯ ನಿಯಂತ್ರಣ ಪ್ರಕರಣದಲ್ಲಿ ಬಂಧಿಸಲಾಗಿದೆ.
  • ಪಿಟಿಐ ವರದಿಯ ಪ್ರಕಾರ ಮುಂಬೈ ಕೋರ್ಟ್ ಆರ್ಯನ್ ಮತ್ತು ಇತರ ಇಬ್ಬರು ವ್ಯಕ್ತಿಗಳನ್ನು ಅಕ್ಟೋಬರ್ 4 ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಿದೆ.
ಅಕ್ಟೋಬರ್ 4 ವರೆಗೆ ಶಾರುಖ್ ಖಾನ್ ಪುತ್ರ ಆರ್ಯನ್ NCB ಕಸ್ಟಡಿಗೆ  title=
file photo

ಮುಂಬೈ: ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನನ್ನು ಮಾದಕ ದ್ರವ್ಯ ನಿಯಂತ್ರಣ ಪ್ರಕರಣದಲ್ಲಿ ಬಂಧಿಸಲಾಗಿದೆ.ಪಿಟಿಐ ವರದಿಯ ಪ್ರಕಾರ ಮುಂಬೈ ಕೋರ್ಟ್ ಆರ್ಯನ್ ಮತ್ತು ಇತರ ಇಬ್ಬರು ವ್ಯಕ್ತಿಗಳನ್ನು ಅಕ್ಟೋಬರ್ 4 ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಿದೆ.

ಹಿಂದಿನ ವರದಿಯಲ್ಲಿ, ಆರ್ಯನ್ ನನ್ನು ನಿಷೇಧಿತ ವಸ್ತುಗಳ ಖರೀದಿ, ಬಳಕೆ, ಮಾರಾಟದಲ್ಲಿ ತೊಡಗಿದ್ದಕ್ಕಾಗಿ ಬಂಧಿಸಲಾಯಿತು ಎಂದು ತಿಳಿದುಬಂದಿದೆ.ಬಂಧನ ಪತ್ರದ ಪ್ರಕಾರ 13 ಗ್ರಾಂ ಕೊಕೇನ್, 5 ಗ್ರಾಂ ಎಂಡಿ, 21 ಗ್ರಾಂ ಚರಸ್ ಮತ್ತು 22 ಮಾತ್ರೆಗಳ ಎಂಡಿಎಂಎ ಮತ್ತು 1.33 ಲಕ್ಷ ನಗದು ವಿಚಾರವಾಗಿ ಬಂಧಿಸಲಾಗಿದೆ.ನಮ್ಮ ಮೂಲಗಳ ಪ್ರಕಾರ ಆರೋಪಿಯೊಬ್ಬನು ಕಣ್ಣಿನ ಲೆನ್ಸ್ ಕವರ್‌ನಲ್ಲಿ ಅಡಗಿಸಿಟ್ಟಿದ್ದ ನಿಷೇಧಿತ ವಸ್ತುವನ್ನು (ಕೊಕೇನ್) ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Drugs Party: Shah Rukh Khan ಪುತ್ರ Aryan Khan ಬಂಧನ, ಸೆಕ್ಷನ್ 8C, 27, 20B, 35K ಅಡಿ ಬಂಧನ!

ಭಾನುವಾರ (ಅಕ್ಟೋಬರ್ 3), ಶಾರುಖ್ ಖಾನ್ (Shah Rukh Khan) ಮತ್ತು ಗೌರಿ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತು ಇತರ ಏಳು ಮಂದಿಯನ್ನು ಪಾರ್ಟಿಯಲ್ಲಿ ದಾಳಿ ನಡೆಸಿದ ನಂತರ ಮಾದಕ ದ್ರವ್ಯ ಪ್ರಕರಣದಲ್ಲಿ ಮಾದಕದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಬಂಧಿಸಿದೆ.ವರದಿಗಳ ಪ್ರಕಾರ, ಬಂಧಿತರು ಮುಂಬೈನಿಂದ ಗೋವಾಕ್ಕೆ ತೆರಳುವ ಕ್ರೂಸ್ ಹಡಗಿನಲ್ಲಿ ಪಾರ್ಟಿ ಮಾಡುತ್ತಿದ್ದರು.

ಆರ್ಯನ್ ಖಾನ್ ಹೊರತುಪಡಿಸಿ, ಮುನ್ಮುನ್ ಧಮೇಚಾ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾ ಮತ್ತು ಅರ್ಬಾಜ್ ಮರ್ಚೆಂಟ್ ಅವರನ್ನು ಎನ್ಸಿಬಿಯಿಂದ ಬಂಧಿಸಲಾಗಿದೆ.

ಇದನ್ನೂ ಓದಿ: Indian Sign Language Dictionary ಯಲ್ಲಿ ಸ್ಥಾನ ಪಡೆದ ಶಾರುಖ್ ಖಾನ್ !

ಸುಳಿವು ಪಡೆದ ನಂತರ, ಎನ್‌ಸಿಬಿ ಮುಂಬೈನ ಅಧಿಕಾರಿಗಳು ಅಕ್ಟೋಬರ್ 2 ರಂದು ಕ್ರೂಸ್ ಮೇಲೆ ದಾಳಿ ನಡೆಸಿದರು,ಕಾರ್ಯಾಚರಣೆಯ ಸಮಯದಲ್ಲಿ, ಮಾಹಿತಿಯ ಪ್ರಕಾರ, ಎಂಡಿಎಂಎ/ ಎಕ್ಟಾಸಿ, ಕೊಕೇನ್, ಎಂಡಿ (ಮೆಫೆಡ್ರೋನ್) ಮತ್ತು ಚರಸ್ ನಂತಹ ವಿವಿಧ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಇಬ್ಬರು ಮಹಿಳೆಯರನ್ನು ಒಳಗೊಂಡಂತೆ ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ ಮತ್ತು ಮಾದಕದ್ರವ್ಯಗಳ ಮರುಪಡೆಯುವಿಕೆಗೆ ಸಂಬಂಧಿಸಿದಂತೆ ಅವರ ಪಾತ್ರವನ್ನು ತನಿಖೆ ಮಾಡಲಾಗುತ್ತಿದೆ. ಈ ವಿಷಯದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.ಶನಿವಾರ ಸಂಜೆ ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ನೇತೃತ್ವದಲ್ಲಿ ದಾಳಿ ನಡೆಯಿತು.

ಇದನ್ನೂ ಓದಿ: ಶಾರುಖ್ ಪುತ್ರನ ಜೊತೆ ಕಾಣಿಸಿಕೊಂಡ ಜೂಹ್ಲಿ ಪುತ್ರಿ ಜಾಹ್ನವಿ? ಜೂಹ್ಲಿ ಚಾವ್ಲಾ ಹೇಳಿದ್ದೇನು ಗೊತ್ತೇ?

'ಕಾರ್ಯಾಚರಣೆಯ ಸಮಯದಲ್ಲಿ, ಶಂಕಿತರನ್ನು ಶೋಧಿಸಲಾಯಿತು ಮತ್ತು ಅವರಿಂದ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು, ಅದನ್ನು ಅವರು ಬಟ್ಟೆ, ಒಳ ಉಡುಪು ಮತ್ತು ಪರ್ಸ್ (ಮಹಿಳೆಯರಿಂದ) ನಲ್ಲಿ ಅಡಗಿಸಿಟ್ಟಿದ್ದರು" ಎಂದು ಎನ್ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.ಬಂಧಿತರನ್ನು ಕಾನೂನಿನ ವಿಧಿವಿಧಾನಗಳು ಮುಗಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಎನ್ಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News