ಹೆಚ್ಚುತ್ತಿದೆ Aryan Khan ಸಂಕಷ್ಟ , ಇಂದು ಕೂಡಾ ಸಿಕ್ಕಿಲ್ಲ ಜಾಮೀನು
ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 13 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನವದೆಹಲಿ : ಅಕ್ಟೋಬರ್ 2 ರಂದು, NCB ಮುಂಬೈನಲ್ಲಿ ನಡೆಯುತ್ತಿರುವ ಉನ್ನತ ಮಟ್ಟದ ರೇವ್ ಪಾರ್ಟಿ (Rave Party) ಮೇಲೆ ದಾಳಿ ನಡೆಸಿ, 8 ಜನರನ್ನು ಬಂಧಿಸಿತ್ತು. ಬಂಧಿತರೆಲ್ಲರನ್ನು ಅಕ್ಟೋಬರ್ 3 ಸಂಜೆಯವರೆಗೆ ವಿಚಾರಣೆಗೊಳಪಡಿಸಲಾಯಿತು. ನಂತರ ಶಾರುಖ್ ಖಾನ್ (Shah Rukh Khan) ಪುತ್ರ ಆರ್ಯನ್ ಖಾನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಯಿತು. ಈ ಪ್ರಕರಣದಲ್ಲಿ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ದಿನೇ ದಿನೇ ಆರ್ಯನ್ ಖಾನ್ (Aryan Khan) ಸಂಕಷ್ಟ ಹೆಚ್ಚುತ್ತಿದೆ. ಇಂದು ಕೂಡಾ ಆರ್ಯನ ಖಾನ್ ಜಾಮೀನು ನಿರಾಕರಿಸಲಾಯಿತು.
ಆರ್ಯನ್ ಜಾಮೀನು ನಿರಾಕರಣೆ :
ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 13 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೀಗ, ಬುಧವಾರ ಮಧ್ಯಾಹ್ನ 2.45 ಕ್ಕೆ ಈ ವಿಷಯದ ವಿಚಾರಣೆ ನಡೆಯಲಿದೆ. NCB ಈ ವಿಷಯದ ತನಿಖೆ ನಡೆಸುತ್ತಿದೆ. ಆರ್ಯನ್ ಖಾನ್ (Aryan Khan) ಅಕ್ಟೋಬರ್ 3 ರಿಂದ ಅಕ್ಟೋಬರ್ 8 ರವರೆಗೆ ಎನ್‌ಸಿಬಿಯ (NCB) ವಶದಲ್ಲಿದ್ದರು. ಆರ್ಯನ್ ಹೇಳಿಕೆಯನ್ನು ಅಕ್ಟೋಬರ್ 10 ರಂದು ದಾಖಲಿಸಲಾಗಿದೆ.
ಇದನ್ನೂ ಓದಿ : Yash Viral Video: Mumbaiನಲ್ಲಿ ಬೀದಿಗಿಳಿದ KGFನ 'Rocky Bhai' Yash, ಅಭಿಮಾನಿಗಳ ರಿಯಾಕ್ಷನ್ ಹೇಗಿತ್ತು ಗೊತ್ತಾ?
NCB ವಶಕ್ಕೆ :
ಮುಂಬೈನಲ್ಲಿ ನಡೆಯಲಿರುವ ರೇವ್ ಪಾರ್ಟಿ ಬಗ್ಗೆ ಖಚಿತ್ ಮಾಹಿತಿ ಮೇರೆಗೆ, ಅಕ್ಟೋಬರ್ 2 ರಂದು, 20 ರಿಂದ 22 ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಈ ಸಮಯದಲ್ಲಿ, ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಜನರಿಂದ ಮಾದಕವಸ್ತುಗಳನ್ನು (Mumbai drug case) ವಶಪಡಿಸಿಕೊಂಡು, ಎಲ್ಲರನ್ನೂ ವಿಚಾರಣೆಗೊಳಪಡಿಸಲಾಯಿತು. ನಂತರ ಭಾನುವಾರ ಮಧ್ಯಾಹ್ನ, ನಿಷೇಧಿತ ವಸ್ತುಗಳ ಬಳಕೆ, ಮಾರಾಟ ಮತ್ತು ಖರೀದಿಯಲ್ಲಿ ಭಾಗಿಯಾದ ಆರೋಪದಡಿಯಲ್ಲಿ ಆರ್ಯನ್ ಸೇರಿದಂತೆ 3 ಆರೋಪಿಗಳನ್ನು ಬಂಧಿಸಲಾಯಿತು. ಎನ್‌ಸಿಬಿ ಪ್ರಕಾರ, ಆರೋಪಿಗಳಿಂದ 13 ಗ್ರಾಂ ಕೊಕೇನ್, 5 ಗ್ರಾಂ ಎಂಡಿ, 21 ಗ್ರಾಂ ಚರಸ್ ಮತ್ತು ಎಮ್‌ಡಿಎಂಎ 22 ಟ್ಯಾಬ್ಲೆಟ್‌ಗಳು, ಮತ್ತು 1.33 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಸಂಜೆ 6: 30 ಕ್ಕೆ, ಮೂವರು ಆರೋಪಿಗಳನ್ನು ಮುಂಬೈನ ಫೋರ್ಟ್ ನ್ಯಾಯಾಲಯಕ್ಕೆ (Court) ಹಾಜರುಪಡಿಸಲಾಯಿತು. ನಂತರ ಒಂದು ದಿನದ ಕಸ್ಟಡಿಗೆ NCB ಒಪ್ಪಿಸಿತು. ನಂತರ ಇತರ 5 ಆರೋಪಿಗಳನ್ನು ಕೂಡ ಎನ್‌ಸಿಬಿ ಬಂಧಿಸಿದೆ.
ಇದನ್ನೂ ಓದಿ : Mystery Boy ಜೊತೆಗೆ ಈಜುಕೊಳದಲ್ಲಿ ಮಸ್ತಿಗಿಳಿದ Nora Fatehi, Video Viral
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ