ಬಿಗ್‌ಬಾಸ್ ಮನೆಯಲ್ಲಿ ಇರೋರೆಲ್ಲ ಸ್ವಾರ್ಥಿಗಳು.. ರಾಜಣ್ಣ ಹೀಗೆ ಅಂದಿದ್ದು ಯಾಕೆ..!
ದಿನಗಳು ಹತ್ತಿರ ಬಂದಂತೆ ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್‌ಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸ್ಪರ್ಧಿಗಳ ಮಧ್ಯ ಧ್ವೇಷ, ಅಸೂಯೆ, ವಾದ ವಿವಾಧಗಳು ಹೆಚ್ಚಾಗುತ್ತಲೇ ಇವೆ. ಸದ್ಯ ಕಿಚ್ಚನ ಮುಂದೆಯೇ ನಡೆದ ಕಾಳಜಿ ಮತ್ತು ಸ್ವಾರ್ಥಿಗಳ ಚರ್ಚೆಯಲ್ಲಿ ಗುರೂಜಿಯನ್ನು ಬಿಟ್ಟರೆ ರಾಜಣ್ಣನೇ ಹೆಚ್ಚು ಸ್ವಾರ್ಥಿ ಎಂದು ಹೇಳಿದ ಮನೆ ಮಂದಿ ವಿರುದ್ಧ ರೂಪೇಶ್ ರಾಜಣ್ಣ ಕೆಂಡಾಮಂಡಲರಾಗಿದ್ದಾರೆ.
BBK9 : ದಿನಗಳು ಹತ್ತಿರ ಬಂದಂತೆ ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್‌ಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸ್ಪರ್ಧಿಗಳ ಮಧ್ಯ ಧ್ವೇಷ, ಅಸೂಯೆ, ವಾದ ವಿವಾಧಗಳು ಹೆಚ್ಚಾಗುತ್ತಲೇ ಇವೆ. ಸದ್ಯ ಕಿಚ್ಚನ ಮುಂದೆಯೇ ನಡೆದ ಕಾಳಜಿ ಮತ್ತು ಸ್ವಾರ್ಥಿಗಳ ಚರ್ಚೆಯಲ್ಲಿ ಗುರೂಜಿಯನ್ನು ಬಿಟ್ಟರೆ ರಾಜಣ್ಣನೇ ಹೆಚ್ಚು ಸ್ವಾರ್ಥಿ ಎಂದು ಹೇಳಿದ ಮನೆ ಮಂದಿ ವಿರುದ್ಧ ರೂಪೇಶ್ ರಾಜಣ್ಣ ಕೆಂಡಾಮಂಡಲರಾಗಿದ್ದಾರೆ.
ಹೌದು, ಬಿಗ್ 100 ದಿನಗಳ ಆಟದಲ್ಲಿ ಈಗಾಗಲೇ 50 ದಿನಗಳು ಉರುಳಿ ಹೋಗಿವೆ. ಬಿಗ್‌ಬಾಸ್ ಸ್ಪರ್ಧಿಗಳಿಗೆ ದಿನಗಳು ಕಳೆದಂತೆ ಎಲಿಮಿನೇಷನ್ ಟೆನ್ಷನ್ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅದು ಎಷ್ಟೇ ಒಳ್ಳೆಯ ಸ್ನೇಹಿತರಾಗಿದ್ದರೂ ಸಹ ಗೆಲುವಿಗಾಗಿ ಪೈಪೋಟಿ ಮಾಡಲೇಬೇಕಾದ ಹಂತಕ್ಕೆ ಬಿಗ್‌ಹೌಸ್ ಸ್ಪರ್ಧಿಗಳು ಬಂದು ತಲುಪಿದ್ದಾರೆ. ಈಗ ಕಿಚ್ಚನ ಎದುರು ಕಾಳಜಿ ಮತ್ತು ಸ್ವಾರ್ಥಿಗಳ ಚರ್ಚೆ ನಡೆಯಿತು.
ಇದನ್ನೂ ಓದಿ: ಆಟೋ ಹಿಂದೆ ಅತಿರಥ ಮಹಾರಥ ʼಸಾರಥಿʼ : DBoss ಅಭಿಮಾನಿಗಳ ಅಭಿಮಾನ..!
ಕಿಚ್ಚನ ಎದುರೇ ನಡೆದ ಚರ್ಚೆಯಲ್ಲಿ ಎಲ್ಲರೂ ನೇರವಾಗಿಯೇ ಉತ್ತರ ನೀಡಿದ್ದಾರೆ. ಸ್ವಾರ್ಥಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಆರ್ಯವರ್ಧನ್ ಗುರೂಜಿ ಬಂದರೆ ಮೊದಲನೇ ಸ್ಥಾನದಲ್ಲಿ ರೂಪೇಶ್ ರಾಜಣ್ಣ ಹೆಸರು ಹೆಚ್ಚಾಗಿ ಕೇಳಿಬಂತು. ಇದರಿಂದ ರೊಚ್ಚಿಗೆದ್ದ ರಾಜಣ್ಣ ಬಿಗ್ ಬಾಸ್ ಮೆನಯಲ್ಲಿರುವ ಎಲ್ಲರೂ ಸ್ವಾರ್ಥಿಗಳೇ ಎಂದು ಹೇಳಿದರು. ಅಲ್ಲದೆ, ಆರ್ಯವರ್ಧನ್ ಗುರೂಜಿ ಮೇಲೆ ಊಟ ಕೊಡೊದ್ರಲ್ಲೂ ಸ್ವಾರ್ಥತನ ತೋರಿಸ್ತಾರೆ ಅಂತ ಅಮೂಲ್ಯ ಗೌಡ ಆರೋಪ ಮಾಡಿದ್ರು. ರೂಪೇಶ್ ಶೆಟ್ಟಿಯನ್ನು ಸ್ವಾರ್ಥಿಗಳ ಪಟ್ಟಿಗೆ ಸೇರಿಸಿದ ಪ್ರಶಾಂತ್ ಸಂಬರ್ಗಿ ಸ್ವಲ್ಪನೂ ಕಾಳಜಿ ಇಲ್ಲ ಕೇಡಿಯ ರೀತಿ ಮಾಡ್ತಾನೆ ಅಂದ್ರು.
ಇನ್ನು ಕಾವ್ಯಾಶ್ರಿ ಗೌಡ ಮಾತ್ರ ಕಾಳಜಿ ಪಟ್ಟಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡರು. ಅಲ್ಲದೆ ಸಂಬರ್ಗಿಯವರು ಕಾವ್ಯಾಶ್ರಿ ಅವರ ಸಹಾಯ ನೆನೆದು ಕಣ್ಣೀರಿಟ್ಟರು. ದೀಪಿಕಾ ದಾಸ್, ರಾಕೇಶ್ ಅಡಿಗ, ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ ಕೂಡ ಸ್ವಾರ್ಥಿಗಳ ಪಟ್ಟಿಯಲ್ಲಿ ಕಂಡುಬಂದ್ರು. ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಗುರೂಜಿ ಸ್ವಾರ್ಥಿಗಳ ಪಟ್ಟಿಯಲ್ಲಿಯೇ ಹೆಚ್ಚಾಗಿ ಗುರುತಿಸಿಕೊಂಡರು. ಒಟ್ಟಿನಲ್ಲಿ ಎಷ್ಟು ಜನರು ಸ್ವಾರ್ಥಿಗಳಾದ್ರು, ನಿಸ್ವಾರ್ಥಿಗಳಾದ್ರು ಅಂತ ತಿಳ್ಕೋಬೇಕು ಅಂದ್ರೆ ಇಂದಿನ ಸಂಚಿಕೆ ನೋಡಿ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.