ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪವಿತ್ರಾಗೌಡ ಈಗ ೬ ತಿಂಗಳ ನಂತರ ಜೈಲಿನಿಂದ ಹೊರ ಬಂದಿದ್ದಾರೆ.ಮಾಜಿ ಪತ್ನಿ ಜೈಲಿನಿಂದ ಹೊರಬರುತ್ತಿದ್ದಂತೆ ಈಗ ಮಾಜಿ ಪತಿ ಸಂಜಯ್ ಕೂಡ ಬೆಂಗಳೂರಿಗೆ ಧಾವಿಸಿ ಬಂದಿದ್ದಾರೆ.


COMMERCIAL BREAK
SCROLL TO CONTINUE READING

2007ರಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಪವಿತ್ರಾಗೌಡ -ಸಂಜಯ್ ಸಿಂಗ್ ಐದು ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿದ್ದರು.ತದನಂತರ ಇಬ್ಬರು ವಿಚ್ಛೇದನ ಪಡೆದಿದ್ದರು.ಇದಾದ ನಂತರ ಇಬ್ಬರು ಒಮ್ಮೆಯೂ ಭೇಟಿಯಾಗಿಲ್ಲ ಎನ್ನಲಾಗಿದೆ.ಈಗ ಮಾಜಿ ಪತ್ನಿಯನ್ನು ಅರಸಿ ಬೆಂಗಳೂರಿಗೆ ಬಂದಿರುವ ಸಂಜಯ್ ಸಿಂಗ್ ಮಾಧ್ಯಮಗಳ ಜೊತೆ ಮಾತನಾಡುತ್ತಾ  ಸ್ನೇಹಿತರನ್ನು ಭೇಟಿ ಮಾಡಲು ಬಂದಿರುವುದಾಗಿ ಹೇಳಿದ್ದಾರೆ.


ಇದನ್ನೂ ಓದಿ: ಬಿಗ್ ಬಾಸ್‌ನಿಂದ ಹೊರಬರಲು ಇದೇ ಮುಖ್ಯ ಕಾರಣ: ಜೀ ಕನ್ನಡ ನ್ಯೂಸ್‌ಗೆ ಗೋಲ್ಡ್ ಸುರೇಶ್ ಸ್ಪಷ್ಟನೆ


ಅಚ್ಚರಿ ಏನೆಂದರೆ ಪವಿತ್ರಾ ಗೌಡ-ಸಂಜಯ್ ಸಿಂಗ್ ಬೇರೆಯಾಗಿ ೧೨ ವರ್ಷಗಳಾದರೂ ಇನ್ನೊಂದು ಮದುವೆಯಾಗದೇ ಒಂಟಿ ಜೀವನ ನಡೆಸುತ್ತಿದ್ದಾರೆ.ಇದನ್ನು ನೋಡುತ್ತಿದ್ದರೆ ಮಾಜಿ ಪತ್ನಿಯ ಮೇಲಿನ ಪ್ರೀತಿ ಇನ್ನೂ ಕಡಿಮೆಯಾಗಿಲ್ಲ,ಮಗಳ ಜೊತೆ ಆಗಾಗ ಮಾತನಾಡಿದ್ದನ್ನು ಬಿಟ್ಟರೆ ಪವಿತ್ರಾ ಗೌಡ ಜೊತೆ ಒಮ್ಮೆಯೂ ಕೂಡ ಪೋನ್ ನಲ್ಲಿ ಮಾತನಾಡಿಲ್ಲ.ಮಾಜಿ ಪತ್ನಿಯನ್ನು ನೋಡಬೇಕೆಂದಾಗ ಯುಟೂಬ್ ನಲ್ಲಿ ನೋಡುತ್ತಿದ್ದೆ ಎಂದು ಹೇಳಿದ್ದಾರೆ.ಈಗ ಅವರು ಈ ಹಿಂದಿನಂತೆ ಎಲ್ಲವನ್ನೂ ಮರೆತು ಮಗಳಿಗಾಗಿ ಸಂಜಯ್ ಸಿಂಗ್-ಪವಿತ್ರಾ ಗೌಡ ಒಂದಾಗುತ್ತಾರಾ ಎನ್ನುವುದಕ್ಕೆ ಕಾಲವೇ ಉತ್ತರ ಕೊಡಬೇಕಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.