David Warner say sorry to Rashmika : ಆಸ್ಟ್ರೇಲಿಯಾದ ಕ್ರಿಕೆಟರ್ ಡೇವಿಡ್ ವಾರ್ನರ್ ಅವರನ್ನು ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ವಾರ್ನರ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿದ್ದು ನೆಟ್ಟಿಗರನ್ನು ಇಂಪ್ರೆಸ್ ಮಾಡ್ತಾನೆ ಇರುತ್ತಾರೆ. ವಾರ್ನರ್ ಸೆಲೆಬ್ರಿಟಿಗಳ ಮುಖವನ್ನು ತಮ್ಮ ಮುಖದೊಂದಿಗೆ ಮಾರ್ಫಿಂಗ್ ಮಾಡಿದ ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಟಾಲಿವುಡ್ ಸೆಲೆಬ್ರಿಟಿಗಳ ವಿಡಿಯೋವನ್ನು ಶೇರ್ ಮಾಡುವ ವಾರ್ನರ್, ಇತ್ತೀಚೆಗಷ್ಟೇ ಇಂಟರೆಸ್ಟಿಂಗ್ ವಿಡಿಯೋವೊಂದನ್ನು ಪೋಸ್ಟ್ ಮಾಡಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಸೊ ಸಾರಿ.. ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇದುವರೆಗೆ ಬಾಲಿವುಡ್, ಟಾಲಿವುಡ್ ನಟರ ವಿಡಿಯೋಗಳನ್ನು ಮಾತ್ರ ಮಾರ್ಫಿಂಗ್ ಮಾಡುತ್ತಿದ್ದ ವಾರ್ನರ್, ಈಗ ಸಿನಿಮಾ ನಟಿಯರ ಫೇಸ್ ಮಾರ್ಫಿಂಗ್ ಮಾಡಿದ್ದಾರೆ. 


ಇದನ್ನೂ ಓದಿ : D Boss ಸ್ಪೆಷಲ್ ಯಾಕೆ..! : ಅಭಿಮಾನಿಗಳ ʼದಾಸʼ ಕನ್ನಡಿಗರ ಹೃದಯ ʼಸಾರಥಿʼ...!


ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಫೇಸ್ ಮಾರ್ಫಿಂಗ್ ಮಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ರೀ ಫೇಸ್ ಆಪ್ ಕ್ರೀಟ್ ಮಾಡಿರುವ ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ರಶ್ಮಿಕಾ ಮತ್ತು ನಿತಿನ್ ಅಭಿನಯದ ಭೀಷ್ಮ ಚಿತ್ರದಲ್ಲಿನ 'ವಾಟೆ ಬ್ಯೂಟಿ' ಹಾಡಿಗೆ ವಾರ್ನರ್ ರಶ್ಮಿಕಾ ಫೇಸ್ ಎಡಿಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.


ವಾರ್ನರ್ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಶೇರ್ ಮಾಡಿಕೊಂಡು 'ಸೊ..... ಸಾರಿ ಫಾರ್ ದಿಸ್ ಒನ್' ಎಂದು ಬರೆದುಕೊಂಡಿದ್ದಾರೆ. ಆದರೆ ಈ ವಿಡಿಯೋಗೆ ರಶ್ಮಿಕಾ ಹೇಗೆ ಪ್ರತಿಕ್ರಿಯಿಸುತ್ತಾರೋ ಎಂದು ಕಾಡು ನೋಡಬೇಕಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 65 ಲಕ್ಷ ಜನ ಲೈಕ್‌ ಮಾಡಿದ್ದಾರೆ ಜೊತೆಗೆ 16 ಸಾವಿರಕ್ಕೂ ಹೆಚ್ಚು ಜನ ಕಾಮೆಂಟ್‌ ಮಾಡಿದ್ದಾರೆ. 



ಇನ್ನು ಈ ಬಗ್ಗೆ ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್, ನೀನು ಚೆನ್ನಾಗಿ ಕಾಣುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರಿಗೂ ಎದ್ದು ಬಿದ್ದು ನಗುತ್ತಿದ್ದಾರೆ.


ಇದನ್ನೂ ಓದಿ : ಸಾರಾ ಜೊತೆಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಶುಭಮನ್ ಗಿಲ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.