D Boss ಸ್ಪೆಷಲ್ ಯಾಕೆ..! : ಅಭಿಮಾನಿಗಳ ʼದಾಸʼ ಕನ್ನಡಿಗರ ಹೃದಯ ʼಸಾರಥಿʼ...!

ಅಭಿಮಾನಿಗಳ ದಾಸ, ಕನ್ನಡಿಗರ ನೆಚ್ಚಿನ ಸಂಗೊಳ್ಳಿರಾಯಣ್ಣ ದರ್ಶನ್‌ ತೂಗುದೀಪ ಅವರ ಸಿನಿಮಾಗಳನ್ನು ನೋಡುತ್ತಾ ಕುಳಿತರೇ ನೋಡುತ್ತಲೇ ಇರಬೇಕು ಅನಿಸುತ್ತೆ. ನನ್ನ ಪ್ರೀತಿಯ ರಾಮು ಅದ್ಭುತ ಸಿನಿಮಾ ಆದ್ರೆ ಯಜಮಾನನ ಫ್ಯಾನ್ಸ್‌ಗಳಿಗೆ ಅದ್ಯಾಕೊ ಇಷ್ಟ ಆಗ್ಲಿಲ್ಲ. ಅದನ್ನು ಬಿಟ್ಟು ಉಳಿದು ಸಿನಿಮಾಗಳು ದರ್ಶನ್‌ ಅವರನ್ನು ಬಾಕ್ಸ್‌ ಆಫೀಸ್‌ ಸುಲ್ತಾನನ್ನಾಗಿ ಮಾಡಿದ್ವು.. ಹಾಗೇ ದರ್ಶನ್‌ ಅವರ ಕುರಿತು ಒಂದು ಇಣುಕುನೋಟ ಇಲ್ಲಿದೆ ನೋಡಿ.

Written by - Krishna N K | Last Updated : Nov 15, 2022, 04:50 PM IST
  • ಅಭಿಮಾನಿಗಳ ʼದಾಸʼ ಕನ್ನಡಿಗರ ಹೃದಯ ʼಸಾರಥಿʼ
  • ನನ್ನ ಪ್ರೀತಿಯ ರಾಮು ಅದ್ಭುತ ಸಿನಿಮಾ
  • ಒಬ್ಬನ ನಟನ ಸಿನಿಮಾವನ್ನು ಅಭಿಮಾನಿಗಳೇ ಪ್ರಚಾರ ಮಾಡುತ್ತಿದ್ದಾರೆ ಅಂದ್ರೆ ಅದು ದರ್ಶನ್‌ ಸಿನಿಮಾ ಮಾತ್ರ
 D Boss ಸ್ಪೆಷಲ್ ಯಾಕೆ..! : ಅಭಿಮಾನಿಗಳ ʼದಾಸʼ ಕನ್ನಡಿಗರ ಹೃದಯ ʼಸಾರಥಿʼ...! title=

ಬೆಂಗಳೂರು : ಅಭಿಮಾನಿಗಳ ದಾಸ, ಕನ್ನಡಿಗರ ನೆಚ್ಚಿನ ಸಂಗೊಳ್ಳಿರಾಯಣ್ಣ ದರ್ಶನ್‌ ತೂಗುದೀಪ ಅವರ ಸಿನಿಮಾಗಳನ್ನು ನೋಡುತ್ತಾ ಕುಳಿತರೇ ನೋಡುತ್ತಲೇ ಇರಬೇಕು ಅನಿಸುತ್ತೆ. ನನ್ನ ಪ್ರೀತಿಯ ರಾಮು ಅದ್ಭುತ ಸಿನಿಮಾ ಆದ್ರೆ ಯಜಮಾನನ ಫ್ಯಾನ್ಸ್‌ಗಳಿಗೆ ಅದ್ಯಾಕೊ ಇಷ್ಟ ಆಗ್ಲಿಲ್ಲ. ಅದನ್ನು ಬಿಟ್ಟು ಉಳಿದು ಸಿನಿಮಾಗಳು ದರ್ಶನ್‌ ಅವರನ್ನು ಬಾಕ್ಸ್‌ ಆಫೀಸ್‌ ಸುಲ್ತಾನನ್ನಾಗಿ ಮಾಡಿದ್ವು.. ಹಾಗೇ ದರ್ಶನ್‌ ಅವರ ಕುರಿತು ಒಂದು ಇಣುಕುನೋಟ ಇಲ್ಲಿದೆ ನೋಡಿ.

90ರ ದಶಕದಿಂದ ಹಿಡಿದು ಹಿಂದಿಗೂ ಕನ್ನಡಿಗರ ಹೃದಯಸಾಮ್ರಾಟನಾಗಿ ದರ್ಶನ್‌ ಮೆರೆಯುತ್ತಿದ್ದಾರೆ. ʼಕರಿಯʼ ನಿಂದ ಹಿಡಿದು ʼಕ್ರಾಂತಿʼ ವರೆಗೂ ದರ್ಶನ ಹಿಂಬಾಲಿಸಿದ ಅಭಿಮಾನಿಗಳು ಅವರ ಕೈ ಬಿಟ್ಟಿಲ್ಲ. ಅವರ ಮೇಲೆ ಅದೇಷ್ಟೋ ವಾದ ವಿವಾದಗಳು ಕೇಳಿ ಬಂದ್ರೂ ಸಹ ಅವರು ಕಿವಿಗೆ ಹಾಕಿಕೊಳ್ಳದೆ ತಮ್ಮ ನೆಚ್ಚಿನ ನಟನನ್ನು ಬೆಂಬಲಿಸುತ್ತಲೇ ಇದ್ದಾರೆ. ಒಬ್ಬನ ನಟನ ಸಿನಿಮಾವನ್ನು ಅಭಿಮಾನಿಗಳೇ ಪ್ರಚಾರ ಮಾಡುತ್ತಿದ್ದಾರೆ ಅಂದ್ರೆ ಅದು ದರ್ಶನ್‌ ಅಭಿಮಾನಿಗಳು ಮಾತ್ರ. ಇಂತಹ ಘಟನೆಗಳು ಹಿಂದೆಂದೂ ನಡೆದಿಲ್ಲ ಮುಂದೆಯೂ ನಡೆಯಲ್ಲ ಅನಿಸುತ್ತದೆ.

ಇದನ್ನೂ ಓದಿ: ಸಾರಾ ಜೊತೆಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಶುಭಮನ್ ಗಿಲ್!

ಅದ್ಭುತ ನಟ ದರ್ಶನ್‌ ಸದಾ ಕಷ್ಟಗಳಿಗೆ ಮಿಡಿಯುವ ಜೀವ. ಕಷ್ಟ ಅಂತ ಬಂದವರಿಗೆ ಕೈ ಎತ್ತಿ ಕೊಡುವ ʼಯಜಮಾನʼ ಈ ದರ್ಶನ್‌. ಅಭಿಮಾನಿಗಳು ಪ್ರೀತಿಯಿಂದ ಇವರನ್ನು D Boss ಅಂತಾರೆ. ದರ್ಶನ್ ಜ. 16 ಫೆಬ್ರವರಿ 1977 ಜನಿಸಿದರು. ನಟ ತೂಗುದೀಪ ಶ್ರೀನಿವಾಸ್ ಅವರ ಮಗ ಎಂಬುದು ಹೇಳಬೇಕಾಗಿಲ್ಲ. ಕಿರುತೆರೆ ಧಾರಾವಾಹಿಯೊಂದರ ಮೂಲಕ ಅಭಿನಯ ಪ್ರಾರಂಭಿಸಿದ ʼನಮ್ಮ ಪ್ರೀತಿಯ ರಾಮುʼ, ಇಂದು ಬಾಕ್ಸ್‌ ಆಫೀಸ್‌ ಸುಲ್ತಾನನಾಗಿ ರಾರಾಜಿಸುತ್ತಿದ್ದಾರೆ.

2001 ರಲ್ಲಿ ಬಿಡುಗಡೆಯಾದ ʼಮೆಜೆಸ್ಟಿಕ್ʼ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು. ಕರಿಯಾ (2003), ನಮ್ಮ ಪ್ರೀತಿಯ ರಾಮು (2003), ಕಲಾಸಿಪಾಳ್ಯ (2005), ಗಜ (2008), ಸಾರಥಿ (2011) ಮತ್ತು ಬುಲ್ ಬುಲ್ (2013) ಸಾರಥಿ ಮತ್ತು ಸಂಗೊಳ್ಳಿ ರಾಯಣ್ಣ  (2012) ಹೇಳುತ್ತಾ ಹೊದ್ರೆ ಹಲವಾರು ಇವೆ. ಇನ್ನು ಸಂಗೊಳ್ಳಿ ರಾಯಣ್ಣ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ʼಶಾಸ್ತಿʼ ಪಡೆದಿದ್ದಾರೆ. ದರ್ಶನ್ ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿದ್ದಾರೆ. ಅವರು 2006 ರಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News