ಆಕ್ಷನ್ ಹೀರೋನ `ಜಾಧಾ ನಶಾ` ಸಾಂಗ್ ಔಟ್ : ಮತ್ತೆ ಮೋಡಿ ಮಾಡಿತು ನೋರಾ ಡಾನ್ಸ್..!
ಆಯುಷ್ಮಾನ್ ಖುರಾನಾ ಬಾಲಿವುಡ್ ಸ್ಟಾರ್ ನಟರಲ್ಲಿ ಒಬ್ಬರು. ಆಯುಷ್ಮಾನ್ ತನ್ನ ಚಲನಚಿತ್ರಗಳಲ್ಲಿ ಪವರ್-ಪ್ಯಾಕ್ಡ್ ಪ್ರದರ್ಶನ ನೀಡಲು ಶ್ರಮವಹಿಸುವ ನಟ. ಪ್ರಸ್ತುತ ತಮ್ಮ ಮುಂಬರುವ ಚಿತ್ರ `ಆನ್ ಆಕ್ಷನ್ ಹೀರೋ`ದ ಪ್ರಚಾರ ಮಾಡುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 2 ರಂದು ಥಿಯೇಟರ್‌ಗಳಿಗೆ ಬರಲಿದೆ. ಇದೀಗ ಚಿತ್ರತಂಡ `ಜಾಧಾ ನಶಾ` ಎಂಬ ಸಾಂಗ್ ಅನ್ನು ಬಿಡುಗಡೆ ಮಾಡಿದ್ದಾರೆ.
ಹೊಸದಿಲ್ಲಿ : ಆಯುಷ್ಮಾನ್ ಖುರಾನಾ ಬಾಲಿವುಡ್ ಸ್ಟಾರ್ ನಟರಲ್ಲಿ ಒಬ್ಬರು. ಆಯುಷ್ಮಾನ್ ತನ್ನ ಚಲನಚಿತ್ರಗಳಲ್ಲಿ ಪವರ್-ಪ್ಯಾಕ್ಡ್ ಪ್ರದರ್ಶನ ನೀಡಲು ಶ್ರಮವಹಿಸುವ ನಟ. ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ಆನ್ ಆಕ್ಷನ್ ಹೀರೋ'ದ ಪ್ರಚಾರ ಮಾಡುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 2 ರಂದು ಥಿಯೇಟರ್‌ಗಳಿಗೆ ಬರಲಿದೆ. ಇದೀಗ ಚಿತ್ರತಂಡ 'ಜಾಧಾ ನಶಾ' ಎಂಬ ಸಾಂಗ್ ಅನ್ನು ಬಿಡುಗಡೆ ಮಾಡಿದ್ದಾರೆ.
ಜಾಧಾ ನಶಾ ಹಾಡಿನಲ್ಲಿ ಆಯುಷ್ಮಾನ್ ಮತ್ತು ನೋರಾ ಫತೇಹಿ ಮಿಂಚಿದ್ದಾರೆ. ಈ ಹಾಡಿಗೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಕೇಳಿ ಬರುತ್ತಿವೆ. ಈ ವಿಡಿಯೋವನ್ನು ಇದುವರೆಗೆ 11 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಹಾಡಿನಲ್ಲಿ ಆಯುಷ್ಮಾನ್ ಮತ್ತು ನೋರಾ ಫತೇಹಿ ಸಿಜ್ಲಿಂಗ್ ಕೆಮಿಸ್ಟ್ರಿ ಸೂಪರ್ ಆಗಿ ವರ್ಕೌಟ್ ಆಗಿದೆ. ನೋರಾ ತಮ್ಮ ಡಾನ್ಸ್ ವೈಖರಿಯ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ.
ಇದನ್ನೂ ಓದಿ: BBK9 : ಬಿಗ್‌ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಮಾಟ ಮಂತ್ರ..!
ಅನಿರುದ್ಧ್ ಅಯ್ಯರ್ ನಿರ್ದೇಶನದ, ಆಕ್ಷನ್ ಹೀರೋ ಚಿತ್ರವನ್ನು ಭೂಷಣ್ ಕುಮಾರ್, ಕ್ರಿಶನ್ ಕುಮಾರ್ ಮತ್ತು ಆನಂದ್ ಎಲ್ ರೈ ನಿರ್ಮಾಣ ಮಾಡಿದ್ದಾರೆ. ಚಿತ್ರ ಡಿಸೆಂಬರ್ 2 ರಂದು ಥಿಯೇಟರ್‌ಗೆ ಬರಲಿದೆ. ಇತ್ತೀಚಿಗೆ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಸದ್ಯ ಜಾಧಾ ನಶಾ ಹಾಡನ್ನು ಟಿ ಸೀರಿಸ್‌ನ ವೆಬ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಟ್ರೆಂಡಿಂಗ್ ಕ್ರಿಯೇಟ್ ಮಾಡುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.