ಕುಡಿದು ಮತ್ತಿನಲ್ಲಿ ಮಧ್ಯದ ಬೆರಳು ತೋರಿಸಿ ಆಶಿಕಾ ರಂಪಾಟ : ವಿಡಿಯೋ ನೋಡಿ..!

ಮುದ್ದು ಗೊಂಬೆ, ಕನ್ನಡತಿ ನಟಿ ಆಶಿಕಾ ರಂಗನಾಥ್ ಅವರ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ಸಿಕ್ಕ ಸಿಕ್ಕವರಿಗೆ ಆವಾಜ್‌ ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿ. ಅಲ್ಲದೆ, ಅಸಭ್ಯವಾಗಿ ಮಧ್ಯದ ಬೆರಳನ್ನು ತೋರಿಸಿದ್ದಾರೆ.

Written by - Krishna N K | Last Updated : Nov 18, 2022, 02:18 PM IST
  • ಕುಡಿದು ಮತ್ತಿನಲ್ಲಿ ಮಧ್ಯದ ಬೆರಳು ತೋರಿಸಿ ಆಶಿಕಾ ರಂಪಾಟ
  • ನಟಿ ಆಶಿಕಾ ರಂಗನಾಥ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
  • ಇದನ್ನು ನಂಬೋಕೆ ಸಾಧ್ಯವೇ ಇಲ್ಲ ಎಂದು ವಾದಿಸುತ್ತಿದ್ದಾರೆ ಆಶಿಕಾ ಫ್ಯಾನ್ಸ್‌
ಕುಡಿದು ಮತ್ತಿನಲ್ಲಿ ಮಧ್ಯದ ಬೆರಳು ತೋರಿಸಿ ಆಶಿಕಾ ರಂಪಾಟ : ವಿಡಿಯೋ ನೋಡಿ..! title=

Ashika Ranganath : ಮುದ್ದು ಗೊಂಬೆ, ಕನ್ನಡತಿ ನಟಿ ಆಶಿಕಾ ರಂಗನಾಥ್ ಅವರ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ಸಿಕ್ಕ ಸಿಕ್ಕವರಿಗೆ ಆವಾಜ್‌ ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿ. ಅಲ್ಲದೆ, ಅಸಭ್ಯವಾಗಿ ಮಧ್ಯದ ಬೆರಳನ್ನು ತೋರಿಸಿದ್ದಾರೆ.

ಆದ್ರೆ ಈ ವಿಡಿಯೋ ನೋಡಿದ ಅವರ ಅಭಿಮಾನಿಗಳು ಇದನ್ನು ನಂಬೋಕೆ ಸಾಧ್ಯವೇ ಇಲ್ಲ ಎಂದು ವಾದಿಸುತ್ತಿದ್ದಾರೆ. ಸೌಮ್ಯ ಸ್ವಭಾವದರಾದ ಆಶಿಕಾ ರಂಗನಾಥ್‌ ಈ ರೀತಿ ಮಾಡುವುದಿಲ್ಲ ಎಂದು ಅವರ ಫ್ಯಾನ್ಸ್‌ ಹೇಳುತ್ತಿದ್ದಾರೆ. ಹಾಗಾದ್ರೆ ವಿಡಿಯೋದಲ್ಲಿ ಸ್ವತಃ ಆಶಿಕಾ ಅವರೇ ಇದ್ದಾರೆ. ಇದೆಲ್ಲ ಕ್ಯಾಮೆರಾದಲ್ಲಿ ದಾಖಲಾಗಿದೆ ಆಗಿದ್ರೆ ಇದು ಸುಳ್ಳಾ ಎಂದು ಎಲ್ಲರಿಗೂ ಅನಿಸುತ್ತಿದೆ. ಹೌದು.. ಇದು ಶುದ್ಧ ಸುಳ್ಳು ಏಕೆಂದರೆ ವೈರಲ್‌ ಆದ ವಿಡಿಯೋ ʼರೇಮೊʼ ಚಿತ್ರದ ಶೂಟಿಂಗ್​ ಸಮಯ ತೆಗೆದ ಒಂದು ದೃಶ್ಯದ ತುಣುಕು.

ಇದನ್ನೂ ಓದಿ: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ "ಅಬ್ಬರ" ಇವತ್ತಿಂದ ಶುರು..!

 

ಈಗಾಗಲೇ ರೆಮೋ ಟ್ರೈಲರ್ ಸಿನಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಚಿತ್ರಕ್ಕೆ ಪವನ್ ಒಡೆಯರ್ ಆಕ್ಷನ್‌ ಕಟ್‌ ಹೇಳಿದ್ದಾರೆ. ರೆಮೋ ಪಕ್ಕಾ ಮ್ಯೂಸಿಕಲ್ ಲವ್ ಸ್ಟೋರಿಯಾಗಿದ್ದು, ರೋಗ್ ಸಿನಿಮಾ ಖ್ಯಾತಿಯ ಇಶಾನ್ ರೆಮೋ ಜೊತೆಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ರೆಮೋ ಶೂಟಿಂಗ್‌ನ ಭಾಗವಾಗಿ ಆಶಿಕಾ ಎಣ್ಣೆ ಮತ್ತಲ್ಲಿ ರೋಡ್‌ನಲ್ಲಿ ರಂಪಾಟ ಮಾಡಿರುವ ತುಣುಕು ಒಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.

ಸ್ಯಾಂಡಲ್‌ವುಡ್ ನಟಿಯಾಗಿ ಸೈ ಎನಿಸಿಕೊಂಡಿರುವ ಆಶಿಕಾ ರಂಗನಾಥ್‌ ಇದೀಗ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇತ್ತೀಚೆಗಷ್ಟೇ ತಮಿಳಿನ ನಟ ಸಿದ್ಧಾರ್ಥ್ ಜೊತೆ ಹೊಸ ಚಿತ್ರ ಅನೌನ್ಸ್ ಮಾಡಿದ್ದರು. ಇದೀಗ ತೆಲುಗಿನ ನಟ ಕಲ್ಯಾಣ್ ರಾಮ್ ಜೊತೆ ಡ್ಯುಯೇಟ್ ಹಾಡಲು ನಟಿ ಸಜ್ಜಾಗಿದ್ದಾರೆ. ಅಲ್ಲದೆ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಕ್ಯೂಟ್‌ ಹುಡುಗಿ ಬ್ಯುಸಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News