ಮುಟ್ಟಾದ ಮಹಿಳೆಯರು ʼಆದಿಪುರುಷ್ʼ ಸಿನಿಮಾ ನೋಡಬಹುದಾ? ಬಾಬು ಗೊಗಿನೇನಿ ವ್ಯಂಗ್ಯ
Adipurush : ಓಂ ರಾವುತ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ʼಆದಿಪುರುಷ್ʼ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗುತ್ತಿದೆ. ಟೀಸರ್ನಿಂದ ಹಿಡಿದು ಚಿತ್ರಬಿಡುಗಡೆಯಾದರೂ ಸಹ ಸಂಕಷ್ಟಗಳು ಈ ಸಿನಿಮಾವನ್ನು ಬೆಂಬಿಡದೇ ಕಾಡುತ್ತಿವೆ.
Babu Gogineni : ಸಿನಿಮಾ ಎಲ್ಲ ಟೀಕೆಗಳನ್ನು ಸವಾಲುಗಳನ್ನು ಮೀರಿ ಬಿಡುಗಡೆಗೆ ರೆಡಿಯಾಯಿತು ಎನ್ನುವಷ್ಟರಲ್ಲಿ ನಿರ್ದೇಶಕ ಓಂ ರಾವುತ್ ಎಡವಟ್ಟು ಮಾಡಿ ಇನ್ನಷ್ಟು ಚರ್ಚೆಗಳಿಗೆ ಎಡೆಮಾಡಿಕೊಟ್ಟರು. ತಿರುಪತಿ ದೇವಸ್ಥಾನದ ಆವರಣದಲ್ಲಿ ನಟಿ ಕೃತಿ ಸಾನೋನ್‌ಗೆ ಮುತ್ತು ಕೊಟ್ಟು ಅಪ್ಪಿಕೊಂಡು ಸುದ್ದಿಯಲ್ಲಿದ್ದರು.
ಮುಂದಿನ ಶುಕ್ರವಾರ ಈ ʼಆದಿಪುರುಷ್ʼ ಸಿನಿಮಾ ವಿಶ್ವದಾದ್ಯಂತ 5 ಭಾಷೆಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ. 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ನಿರೀಕ್ಷೆಯನ್ನು ಚಿತ್ರತಂಡ ಹೊಂದಿದ್ದು, ಸಿನಿಮಾದಲ್ಲಿ ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದು, ಸೀತೆಯಾಗಿ ಕೃತಿ ಸಾನೋನ್ ಕಾಣಿಸಿಕೊಂಡಿದ್ದಾರೆ. ರಾವಣನಾಗಿ ಸೈಫ್ ಅಲಿಖಾನ್, ಲಕ್ಷ್ಮಣನಾಗಿ ಸನ್ನಿಸಿಂಗ್, ಹನುಮಂತನಾಗಿ ದೇವದತ್ತ ಅವರು ಪಾತ್ರಗಳಿಗೆ ಜೀವತುಂಬಿದ್ದಾರೆ.
ಆದಿಪುರುಷ್ ಸಿನಿಮಾ ಬಿಡುಗಡೆಯಾಗುವ ಪ್ರತಿ ಥಿಯೇಟರ್‌ನಲ್ಲಿಯೂ ಒಂದು ಸೀಟ್‌ನ್ನು ಹನುಮಂತನಿಗಾಗಿ ಮೀಸಲಿಡಲು ಸಿನಿತಂಡ ನಿರ್ಧರಿಸಿದೆ. ಈ ವಿಚಾರ ಕೆಲವು ದಿನಗಳಿಂದಲೂ ಭಾರೀ ಸದ್ದು ಮಾಡುತ್ತಿದೆ. ರಾಮಾಯಣ ಪಾರಾಯಣ ಮಾಡುವ ಸ್ಥಳಕ್ಕೆ ಹನುಮಂತ ಬರುತ್ತಾನೆ ಎನ್ನುವದು ನಂಬಿಕೆ. ಈ ನಂಬಿಕೆಗೆ ಗೌರವ ನೀಡುತ್ತಾ ಆದಿಪುರುಷ್ ಸಿನಿಮಾ ತೆರೆಕಾಣುವ ಪ್ರತಿ ಚಿತ್ರಮಂದಿರಗಳಲ್ಲಿಯೂ ಹನುಮಂತನಿಗಾಗಿ ಸ್ಥಳ ಖಾಲಿ ಬಿಡಲು ನಿರ್ಧರಿಸಿದ್ದೇವೆ ಎಂದು ಓಂ ರಾವುತ್ ಅವರು ಪ್ರಿ ರಿಲೀಸ್ ಈವೆಂಟ್ ನಲ್ಲಿ ತಿಳಿಸಿದ್ದರು.
ಇದನ್ನೂ ಓದಿ-ಇಂಟರ್‌ನೆಟ್‌ನಲ್ಲಿ ಅಬ್ಬರಿಸುತ್ತಿದೆ ನಟಸಿಂಹ ಬಾಲಕೃಷ್ಣ ʼಭಗವಂತ್ ಕೇಸರಿʼ ಟೀಸರ್..!
ಹನುಮಂತನಿಗೆ ಸೀಟ್ ಖಾಲಿ ಬಿಡುವುದನ್ನು ನಿರ್ಧರಿಸಿರುವ ಚಿತ್ರತಂಡಕ್ಕೆ ಕೆಲವು ವ್ಯಂಗ್ಯವಾಡಿದರು. ಅದು ಮೂಢನಂಬಿಕೆ ಎಂದಿದ್ದರು. ಇದೇ ವಿಚಾರವಾಗಿ ಮಾನವತಾವಾದಿ, ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಬಾಬು ಗೊಗಿನೇನಿ ವ್ಯಂಗ್ಯವಾಡಿ ಒಂದು ಪೋಸ್ಟ್‌ನ್ನು ಶೇರ್ ಮಾಡಿದ್ದಾರೆ. ಅದು ಇದೀಗ ಸಖತ್ ವೈರಲ್ ಆಗಿದೆ.
ಈ ಕುರಿತು ಬಾಬು ಗೊಗಿನೇನಿ ಅವರು "ಸಿನಿಮಾ ಹಾಲ್ ಅನ್ನು ದೇವಸ್ಥಾನವನ್ನಾಗಿ ಪರಿವರ್ತಿಸಲು ಅನುಮತಿ ಇದೆಯೇ? ಅಲ್ಲಿ ಭಕ್ತಾದಿಗಳಿಗೆ ತೆಂಗಿನಕಾಯಿ ಒಡೆಯುವ ಸೌಲಭ್ಯ ಕಲ್ಪಿಸಿದ್ದಾರಾ?, ಶೋರೂಮ್ ದೇವಸ್ಥಾನವಾದರೆ, ಭಕ್ತರಿಗೆ ಪೂಜೆ ಮಾಡಲು ಕಂಚಿನ ಗಂಟೆಗಳು, ಭಕ್ತರಿಗೆ ಆಶೀರ್ವಾದ ಪಡೆಯಲು ದೇಸಿ ಹಸು, ಬಲ ಜಾತಿಯ ಪೂಜಾರಿ, ಒಡಲಲ್ಲಿ ನಿತ್ಯ ಅನ್ನದಾನಕ್ಕೆ ಹುಂಡಿ ಇರಬೇಕೆ?.
ನೀವು ಚಲನಚಿತ್ರವನ್ನು ವೀಕ್ಷಿಸಲು ಬಯಸಿದರೆ, ನೀವು ಟಿಕೆಟ್ ಖರೀದಿಸುವ ಮೊದಲು ರಿಜಿಸ್ಟರ್‌ನಲ್ಲಿ ಸೈನ್ ಇನ್ ಮಾಡಬೇಕೇ? ರಿಜಿಸ್ಟರ್‌ಗಳನ್ನು ಹಾಕಲಾಗಿದೆಯೇ?, ಅಲ್ಲದೆ, ಥಿಯೇಟರ್ ಪಾಶ್ಚಿಮಾತ್ಯ ಯುರೋಪಿಯನ್ ಚಿಪ್ಸ್, ಮೆಕ್ಸಿಕನ್ ಪಾಪ್ಕಾರ್ನ್, ಅಮೇರಿಕನ್ ಬರ್ಗರ್ಸ್ ಮತ್ತು ಕೋಕ್ ಅನ್ನು ಮಾರಾಟ ಮಾಡಬಹುದೇ? ಮಾರುವವರ ಧರ್ಮ, ಜಾತಿ ಗೊತ್ತೇ?.
ಇದನ್ನೂ ಓದಿ-ಅಖಂಡ ಕರ್ನಾಟಕಕ್ಕೆ ʼಆದಿಪುರುಷʼನ ದರ್ಶನ ಮಾಡಿಸಲು ʼಕೆ.ಆರ್.ಜಿ ಸ್ಟುಡಿಯೋಸ್ʼ ರೆಡಿ..!
ವಾಸ್ತವವಾಗಿ, ನಿರ್ಮಾಪಕರು ಪ್ರಸಾದವನ್ನು ಉಚಿತವಾಗಿ ನೀಡಲು ವ್ಯವಸ್ಥೆ ಮಾಡಬೇಕು ಅಲ್ಲವೇ? ನೀವು ಅದನ್ನು ಮಾಡುತ್ತಿದ್ದೀರಾ?, ಮುಟ್ಟಾಗಿರುವ ಮಹಿಳೆಯರು ಬ್ರಹ್ಮಚಾರಿಗಳು ಇರುವ ಚಿತ್ರಮಂದಿರಗಳಿಗೆ ಅಥವಾ ಚಲನಚಿತ್ರಗಳು ಪ್ರದರ್ಶನಗೊಳ್ಳುವ ದೇವಾಲಯಗಳಿಗೆ ಪ್ರವೇಶಿಸಬಹುದೇ? ಅದೇನೇ ಇರಲಿ, ಗಂಡಸರು ಶರ್ಟ್ ಹಾಕಿಕೊಂಡು ಒಳಗೆ ಹೋಗಬೇಕು, ಯಾರೂ ತೊಗಲು ಸಾಮಾನು, ಲೆದರ್ ಬೆಲ್ಟ್, ಚಪ್ಪಲಿ ತರಬಾರದು ಅಂತ ನಿಯಮವೇ?.
ರಾಹುಕಾಲದಲ್ಲಿ ಪೂಜೆ ಇದ್ದರೆ ಏನು ಮಾಡಬೇಕು? ಹಲ್ಲು ವಾಸ್ತು ಪ್ರಕಾರ ಇಲ್ಲದಿದ್ದರೆ ಯಾರು ಪರಿಹಾರ ನೀಡಬೇಕು? ಪ್ರತಿ ಸಭಾಂಗಣದಲ್ಲಿ ಯಾವ ಬದಿಯಲ್ಲಿ ನಮಸ್ಕರಿಸಬೇಕೆಂದು ತೋರಿಸುವ ಫಲಕವಿದೆಯೇ?" ಎಂದು ಪೋಸ್ಟ್ ಶೇರ್ ಮಾಡಿದ್ದಾರೆ. ಇದಕ್ಕೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.