Bad Manners Rights Sold: ಸ್ಯಾಂಡಲ್‌ವುಡ್‌ನ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯನ ಎರಡನೇ ಸಿನಿಮಾ ʼಬ್ಯಾಡ್‌ ಮ್ಯಾನರ್ಸ್‌ʼ ಸುಮಾರು ಎರಡು ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಚಿತ್ರ ಇದೇ ನೆವೆಂಬರ್‌ 24ಕ್ಕೆ ರಿಲೀಸ್ ಮಾಡೋಕೆ ದುನಿಯಾ ಸುರಿ ನಿರ್ಧರಿಸಿದ್ದಾರೆ. ಸದ್ಯ ಸುಧೀರ್ ಕೆ ಎಂ ನಿರ್ಮಾಣದ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಮಧ್ಯೆ ಇದೇ ಚಿತ್ರದ ವ್ಯವಹಾರದ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ದೊಡ್ಡ ಮಾತುಗಳು ಕೇಳಿ ಬರುತ್ತಿವೆ. 


COMMERCIAL BREAK
SCROLL TO CONTINUE READING

ಇತ್ತೀಚೆಗೆ 'ಬ್ಯಾಡ್ ಮ್ಯಾನರ್ಸ್' ತಂಡ ಹೊಸ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದ್ದು, ಅದರಲ್ಲಿ ಜಯಣ್ಣ ಫಿಲ್ಮ್ಸ್‌ಗೆ ಮಾರಾಟ ಮಾಡಿರುವ ಎಲ್ಲಾ ಹಕ್ಕುಗಳನ್ನು ಪಟ್ಟಿಯನ್ನೇ ರಿವೀಲ್ ಮಾಡಲಾಗಿದೆ. ಇದರಲ್ಲಿ ವರ್ಲ್ಡ್‌ವೈಡ್ ನೆಗೆಟಿವ್, ಡಬ್ಬಿಂಗ್, ಟಿವಿ ಮತ್ತು ಡಿಜಿಟಲ್ ರೈಟ್ಸ್ ಹಾಗೂ ವಿತರಣೆ ಹಕ್ಕ ಜಯಣ್ಣ ಫಿಲ್ಮ್ಸ್ ಪಾಲಾಗಿದ್ದನ್ನು ನಮೂದಿಸಲಾಗಿದೆ. ನಿರ್ಮಾಪಕ ಸುಧೀರ್ ಕೆ ಎಂ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ನಿರ್ಮಾಣ ಮಾಡಿದ್ದರೂ, ಸದ್ಯ ಜಯಣ್ಣ ಹಾಗೂ ಆಪ್ತರು ನೆರವಿಗೆ ಬಂದಿದ್ದು, ಎಲ್ಲಾರೂ ಕೂತು ನಡೆಸಿದ ಮಾತುಕತೆಯಲ್ಲಿ ದೊಡ್ಡ ಮೊತ್ತಕ್ಕೆ ಎಲ್ಲಾ ಹಕ್ಕುಗಳನ್ನು ಖರೀದಿ ಮಾಡಲು ಜಯಣ್ಣ ಒಪ್ಪಿದ್ದಾರೆ. 


ಇದನ್ನು ಓದಿ: ʼಶಿವಾಜಿ ಬಹದ್ದೂರ್ʼ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಆಪ್ತಮಿತ್ರ ರಾಜ್ ಬಹದ್ದೂರ್..!


ವಿಶ್ವದಾದ್ಯಂತ 'ಬ್ಯಾಡ್ ಮ್ಯಾನರ್ಸ್' ನೆಗೆಟಿವ್ ರೈಟ್ಸ್ ಜಯಣ್ಣಗೆ ಸೇರಿದ್ದು, ಹಾಗೇ ಬೇರೆ ಬೇರೆ ಭಾಷೆಗಳಿಗೆ ಡಬ್ಬಿಂಗ್ ಹಕ್ಕನ್ನು, ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕನ್ನು ಎಷ್ಟು ಮೊತ್ತಕ್ಕೆ ಬೇಕಾದರೂ ಇವರಿಗೆ ಮಾರಾಟ ಮಾಡಿಕೊಳ್ಳಬಹುದು. ಇದರೊಂದಿಗೆ ವಿತರಣೆ ಮಾಡುವ ಹಕ್ಕು ಇವರ ಪಾಲಿಗೆ ಬಂದಿದ್ದು, ಇವೆಲ್ಲವನ್ನೂ ಸೇರಿ ಸುಮಾರು 35 ಕೋಟಿ ರೂಪಾಯಿಗೆ 'ಬ್ಯಾಡ್ ಮ್ಯಾನರ್ಸ್' ಡೀಲ್ ಆಗಿದೆ ಎಂದು ಮೂಲಗಳಿಂದ ತಿಳಿದು ಬಂದಿದ್ದು, ಈ ಬಗ್ಗೆ ಜಯಣ್ಣ ಹಾಗೂ ಚಿತ್ರತಂಡ ಅಧಿಕೃತ ಮಾಹಿತಿ ನೀಡಬೇಕಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm 
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.