`ತಲೈವಾ`ಗೆ ಗೋಲ್ಡನ್ ಟಿಕೆಟ್ ನೀಡಿದ ಜೈಷಾ..! ODI ವಿಶ್ವಕಪ್ ನೋಡುವಂತೆ ರಜನಿಗೆ ಆಹ್ವಾನ
ODI World cup 2023 : ಮೈದಾನಕ್ಕೆ ಬಂದು ODI ವಿಶ್ವಕಪ್ ನೋಡುವಂತೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗೋಲ್ಡನ್ ಟಿಕೆಟ್‌ಗಳನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ಜಯ್ ಶಾ ರಜನಿಕಾಂತ್ ಅವರಿಗೂ ಈ ಟಿಕೆಟ್ ನೀಡಿದರು.
ODI World cup 2023 golden ticket : ಮುಂದಿನ ತಿಂಗಳು 5 ರಿಂದ ಭಾರತದಲ್ಲಿ ನಡೆಯಲಿರುವ ODI ವಿಶ್ವಕಪ್‌ನ ಪಂದ್ಯಗಳನ್ನು ವೀಕ್ಷಿಸಲು ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ 'ಗೋಲ್ಡನ್ ಟಿಕೆಟ್' ನೀಡಲಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ರಜಿನಿಕಾಂತ್ ಅವರೇ ಚೆನ್ನೈನಲ್ಲಿರುವ ರಜನಿ ಮನೆಗೆ ತೆರಳಿ ಈ ಗೋಲ್ಡನ್ ಟಿಕೆಟ್ ಹಸ್ತಾಂತರಿಸಿದ್ದಾರೆ.
ವಿಶ್ವಕಪ್ ಅನ್ನು ಜನಸಾಮಾನ್ಯರಿಗೂ ತಲುಪಿಸಲು ಮತ್ತು ಈ ಮೆಗಾ ಈವೆಂಟ್ ಅನ್ನು ಅದ್ಧೂರಿಯಾಗಿ ನಡೆಸಲು ಬಿಸಿಸಿಐ ಮತ್ತು ಐಸಿಸಿ ವಿನೂತನ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಇದರ ಭಾಗವಾಗಿ ಈಗಾಗಲೇ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಜೈ ಶಾ ಈ ಗೋಲ್ಡನ್ ಟಿಕೆಟ್‌ಗಳನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ಜಯ್ ಶಾ ರಜನಿಕಾಂತ್‌ಗೆ ಈ ಟಿಕೆಟ್ ನೀಡಿದ್ದರು.
ಇದನ್ನೂ ಓದಿ: ಮತ್ತೆ ಹಾಟ್ ಅವತಾರದಲ್ಲಿ ಕಿರುತೆರೆ ಗ್ಲಾಮರ್ ಗೊಂಬೆ...ಪೋಟೋಸ್ ನೋಡಿ
ಈ ಗೋಲ್ಡನ್ ಟಿಕೆಟ್ ಪಡೆದ ಸೆಲೆಬ್ರಿಟಿಗಳು ವಿಐಪಿ ಲಾಂಜ್‌ನಲ್ಲಿ ಸಂಪೂರ್ಣ ಉಚಿತವಾಗಿ ಕುಳಿತು ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಬಹುದು. ರಜನಿಕಾಂತ್‌ಗೆ ಗೋಲ್ಡನ್ ಟಿಕೆಟ್ ನೀಡಿದ ನಂತರ, ಬಿಸಿಸಿಐ ಮತ್ತು ಜಯ್ ಶಾ ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕ್ರಿಕೆಟ್ ಅಭಿಮಾನಿಯಾಗಿರುವ ತಲೈವಾ ಅವರನ್ನು ಏಕದಿನ ವಿಶ್ವಕಪ್ ವೀಕ್ಷಿಸಲು ಸ್ವಾಗತಿಸಲಾಯಿತು ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
ಭಾರತೀಯ ಸಿನಿಮಾದ ಬಯೋಪಿಕ್ ʼಮೇಡ್ ಇನ್ ಇಂಡಿಯಾʼ ಘೋಷಿಸಿದ ಎಸ್‌ಎಸ್ ರಾಜಮೌಳಿ
ಇದಕ್ಕೆ ಪ್ರತಿಕ್ರಿಯಿಸಿದ ಗವಾಸ್ಕರ್.. 'ಬಿಸಿಸಿಐ (ಚಿನ್ನದ ಟಿಕೆಟ್) ತೆಗೆದುಕೊಂಡಿರುವ ಈ ನಿರ್ಧಾರ ಬಹಳ ಶ್ರೇಷ್ಠವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಹೆಸರುವಾಸಿಯಾದವರಿಗೆ ಗೊಲ್ಡನ್ ಟಿಕೆಟ್ ನೀಡಿ ಗೌರವಿಸುವುದು ಉತ್ತಮ ವಿಚಾರ. ಇಲ್ಲಿಯವರೆಗೆ ಅಮಿತಾಭ್ ಬಚ್ಚನ್ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೆ ಗೋಲ್ಡನ್ ಟಿಕೆಟ್ ನೀಡಲಾಗಿದೆ. ಅಲ್ಲದೆ ಟೀಂ ಇಂಡಿಯಾಗೆ ಏಕದಿನ ವಿಶ್ವಕಪ್ ನೀಡಿದ ಕಪಿಲ್ ದೇವ್ ಮತ್ತು ಧೋನಿಗೂ ಇವುಗಳನ್ನು ನೀಡಬೇಕು. ಇದಲ್ಲದೆ, ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮತ್ತು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರಿಗೂ ಸಹ ಈ ಗೌರವ ಸಂದಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.