SSRajamouli : ಆರ್‌ಆರ್‌ಆರ್ (RRR), ಬಾಹುಬಲಿ, ಮಗಧೀರ ತರಹದ ಸಿನಿಮಾದ ಮೂಲಕ ಭಾರತೀಯ ಸಿನಿಮಾ ರಂಗಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟ ನಿರ್ದೇಶಕ ಎಸ್‌ಎಸ್ ರಾಜಮೌಳಿ ಈಗ ಭಾರತೀಯ ಸಿನಿಮಾದ ಬಯೋಪಿಕ್ ಸಿನಿಮಾವೊಂದನ್ನು ʼಮೇಡ್ ಇನ್ ಇಂಡಿಯಾʼ ದ ಮೂಲಕ ದೇಶದ ಜನರ ಮುಂದಿಡಲು ಹೊರಟಿದ್ದಾರೆ.
ಇಡೀ ಅಭಿಮಾನಿ ವರ್ಗವೇ ಕಂಡಿರುವ ಹಾಗೇ ಎಸ್‌ಎಸ್‌ರಾಜಮೌಳಿ ಅವರು ನಿರ್ದೇಶಿಸಿರುವ ಚಿತ್ರಗಳು ಮಹಾ ಕಾವ್ಯಗಳು, ಹೈ ಬಜೆಟ್ ಸಿನಿಮಾಗಳು ಮತ್ತು ಖ್ಯಾತಿಯನ್ನು ಗಳಿಸಿದ ಚಿತ್ರಗಳೇ ಆಗಿವೆ. ಇದೀಗ ಇನ್ನೊಂದು ಸಿನಿಮಾ ತೆರೆ ಮೇಲೆ ತರಲು ತಯಾರಿ ನಡೆಸಿದ್ದು, ಆ ಕುರಿತು ಮಾಹಿತಿಯನ್ನು ಈಗ X ಖಾತೆಯಲ್ಲಿ ಹರಿಬಿಟ್ಟಿದ್ದಾರೆ.
ಇದನ್ನು ಓದಿ : ಅರಸಯ್ಯನ ಪ್ರೇಮಪ್ರಸಂಗದಲ್ಲಿ ಬಂತು "ಅಯ್ಯಯ್ಯೋ ರಾಮ" ಹಾಡು!!
ಭಾರತೀಯ ಸಿನಿಮಾ ರಂಗದ ಕಥೆಯನ್ನು ಜನರಿಗೆ ತಿಳಿಸುವ ಉದ್ದೇಶದೊಂದಿಗೆ ʼಮೇಡ್ ಇನ್ ಇಂಡಿಯಾʼ ಎಂಬ ಶೀರ್ಷಿಕೆಯ ಮೂಲಕ ಎಸ್‌ಎಸ್ ರಾಜಮೌಳಿ ಅವರ ಪುತ್ರ ಎಸ್‌ಎಸ್ ಕಾರ್ತಿಕೇಯ ಮತ್ತು ವರುಣ್ ಗುಪ್ತಾ ನಿರ್ಮಿಸಿದ್ದಾರೆ. ಚಿತ್ರವನ್ನು ನಿತೀನ್ ಕಕ್ಕರ್ ನಿರ್ದೇಶಿಸಿದ್ದಾರೆ.
When I first heard the narration, it moved me emotionally like nothing else.
Making a biopic is tough in itself, but conceiving one about the FATHER OF INDIAN CINEMA is even more challenging. Our boys are ready and up for it..:)
With immense pride,
Presenting MADE IN INDIA… pic.twitter.com/nsd0F7nHAJ— rajamouli ss (@ssrajamouli) September 19, 2023
ಹೊಸ ಸಿನಿಮಾ ಘೋಷಣೆ ಬಗ್ಗೆ ಸಸ್ಪೆನ್ಸ್ ಮತ್ತು ಹೈಪ್ ಕ್ರಿಯೇಟ್ ಮಾಡಿದ ನಂತರ, ನಿರ್ದೇಶಕ ಎಸ್‌ಎಸ್ ರಾಜಮೌಳಿ ಟ್ವಿಟರ್‌ನಲ್ಲಿ ಶೀರ್ಷಿಕೆ ಟೀಸರ್ ಹಂಚಿಕೊಂಡಿದ್ದಾರೆ. ಬಯೋಪಿಕ್ ಮಾಡುವುದೇ ಒಂದು ಕಠಿಣ. ಆದರ ಜೊತೆಗೆ ಭಾರತೀಯ ಸಿನಿಮಾದ ಪಿತಾಮಹನ ಬಗ್ಗೆ ಕಲ್ಪಿಸಿಕೊಳ್ಳುವುದು ಇನ್ನೂ ಹೆಚ್ಚು ಸವಾಲಿನ ಸಂಗತಿಯಾಗಿದೆ. ಅಪಾರವಾದ ಹೆಮ್ಮೆಯಿಂದ, ಮೇಡ್ ಇನ್ ಇಂಡಿಯಾ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೂ ʼಮೇಡ್ ಇನ್ ಇಂಡಿಯಾʼ ತಾರಾಗಣದ ಕುರಿತು ಯಾವುದೇ ನಿರ್ಧಾರವಾಗಿಲ್ಲ. ಈ ಹಿಂದೆ ಆರ್‌ಆರ್‌ಆರ್(RRR) ಸಿನಿಮಾದಲ್ಲಿ ಲೈನ್ ಪ್ರೊಡ್ಯುಸರ್ ಆಗಿ ಕಾರ್ಯನಿರ್ವಹಿಸಿದ್ದ ಎಸ್‌ಎಸ್ ರಾಜಮೌಳಿ ಅವರ ಮಗ ಎಸ್‌ಎಸ್ ಕಾರ್ತೀಕೇಯ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಮೊದಲ ನಿರ್ಮಾಣದ ಸಿನಿಮಾ ಇದಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.