ನವದೆಹಲಿ : ರಾಕಿಂಗ್ ಸ್ಟಾರ್ ಯಶ್ (Rocking star Yash) ರೀಲ್ ನಲ್ಲಿ ಮಾತ್ರವಲ್ಲ, ರಿಯಲ್ ನಲ್ಲೂ ಸೂಪರ್ ಸ್ಟಾರ್. ತನ್ನ ನಟನೆಯಿಂದ ಅದೆಷ್ಟೋ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ ಯಶ್.  'KGF' ನಂತರ KGF ಚಾಪ್ಟರ್ 2 ಗಾಗಿ ಅಭಿಮಾನಿಗಳು ಕಾತರಿಂದ ಕಾಯುತ್ತಿದ್ದಾರೆ. ಈ ಮಧ್ಯೆ, ಯಶ್ ಸಾಮಾಜಿಕ ಮಾಧ್ಯಮದಲ್ಲಿ (Social media) ಹಂಚಿಕೊಂಡಿರುವ ವಿಡಿಯೋ ಅಭಿಮಾನಿಗಳನ್ನು ಬೆರಗುಗೊಳಿಸಿದೆ. ಸದಾ ಹೊಸತನಕ್ಕೆ ಹೆಸರಾಗಿರುವ ಯಶ್ (Yash) ಈ ವಿಡಿಯೋದಲ್ಲಿ ತನ್ನ ಅಭಿಮಾನಿಗಳಿಗೆ ತನ್ನೊಳಗಿನ ಅಸಲಿ ಹೀರೋವನ್ನು ಪರಿಚಯಿಸಿದ್ದಾರೆ.    


COMMERCIAL BREAK
SCROLL TO CONTINUE READING

ಸಿಂಹಕ್ಕೆ ಆಹಾರ ನೀಡುತ್ತಿರುವ ರಾಕಿ ಭಾಯಿ :
ಯಶ್ (Yash) ತನ್ನ ಇನ್‌ಸ್ಟಾಗ್ರಾಮ್ ವಾಲ್‌ನಲ್ಲಿ ವಿಡಿಯೋವೊಂದನ್ನು  ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನಂತರ ಅಭಿಮಾನಿಗಳು ಯಶ್ (Rocking star yash) ಧೈರ್ಯವನ್ನು ಕೊಂಡಾಡುತ್ತಿದ್ದಾರೆ. ಯಶ್ ಅತ್ಯಂತ ಆತ್ಮವಿಶ್ವಾಸದಿಂದ ಆಹಾರ  ನೀಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಯಶ್ ಹಂಚಿಕೊಂಡಿರುವ ವೀಡಿಯೋದಲ್ಲಿ, ಅವರು ಪ್ರಿಂಟೆಡ್ ಕೆಂಪು ಶರ್ಟ್ ಧರಿಸಿದ್ದಾರೆ. 


 

 

 

 



 

 

 

 

 

 

 

 

 

 

 

A post shared by Yash (@thenameisyash)


 


ಇದನ್ನೂ ಓದಿ : Kiccha Sudeep : ಕೋಟಿಗೊಬ್ಬ-3 ಸಿನಿಮಾ ಪ್ರದರ್ಶನ ಲೇಟ್ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಕಿಚ್ಚ ಸುದೀಪ್


ಅಭಿಮಾನಿಗಳಿಂದ ಸಿಕ್ಕಿದೆ ಅದ್ಭುತ ಪ್ರತಿಕ್ರಿಯೆ :  
ಯಶ್ ಅವರ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗುತ್ತಿದೆ. ಆದರೆ ವಿಡಿಯೋಕ್ಕಿಂತ, ಅದರ ಮೇಲೆ ಬರುವ ಕಮೆಂಟ್‌ಗಳು ಜನರ ಗಮನ ಸೆಳೆಯುತ್ತಿವೆ. ಒಂದು ಸಿಂಹದೊಂದಿಗೆ ಮತ್ತೊಂದು ಸಿಂಹ,  ರಾಕಿ ಭಾಯ್ ಕಾ ಜಲ್ವಾ, ಸಲಾಮ್ ರಾಕಿ ಭಾಯ್ ಮುಂತಾದ ಕಾಮೆಂಟ್‌ಗಳನ್ನು ಇಲ್ಲಿ ಕಾಣಬಹುದು.  


ಯಾವಾಗ ತೆರೆಗೆ ಬರಲಿದೆ 'ಕೆಜಿಎಫ್  ಚಾಪ್ಟರ್ 2: 
ಕೆಜಿಎಫ್  ಚಾಪ್ಟರ್ 2 (KGF 2 ) ಬಿಡುಗಡೆಯ ಬಗ್ಗೆ ಬಹಳ ದಿನಗಳಿಂದ ಸುದ್ದಿ ಇದೆ.  ಕೆಜಿಎಫ್ ಸ್ಯಾಟಲೈಟ್ ರೈಟ್ಸ್ ಜೀ ಕನ್ನಡ, ಜೀ ತೆಲುಗು, ಜೀ ತಮಿಳು ಮತ್ತು ಮಲಯಾಳಂಗಳಿಗೆ ಮಾರಾಟ ಮಾಡಲಾಗಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮತ್ತು ಪ್ರಕಾಶ್ ರಾಜ್ ನಟಿಸಿರುವ ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. 


ಇದನ್ನೂ ಓದಿ : Money Laundering Case : ₹200 ಕೋಟಿ ಹಣ ವರ್ಗಾವಣೆ ಪ್ರಕರಣದಲ್ಲಿ ನೋರಾ ಫತೇಹಿ ಹೆಸರು : ನಟಿ ವಿಚಾರಣೆ ನಡೆಸುತ್ತಿರುವ ED


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ