Kiccha Sudeep : ಕೋಟಿಗೊಬ್ಬ-3 ಸಿನಿಮಾ ಪ್ರದರ್ಶನ ಲೇಟ್ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಕಿಚ್ಚ ಸುದೀಪ್

ಈ ಸಮಸ್ಯೆಗೆ ಕಾರಣೀಕರ್ತರಾದವರ ಪರವಾಗಿ ನಾನಕ್ ವೈಯಕ್ತಿಕವಾಗಿ ಕ್ಷಮೆ ಯಾಚಿಸುತ್ತೇನೆ. ಇದರಲ್ಲಿ ಚಿತ್ರದ ಮಂದಿರ(Cinema Theatre)ಗಳಿಂದ ಯಾವುದೇ ತಪ್ಪು ನಡೆದಿಲ್ಲ.

Written by - Channabasava A Kashinakunti | Last Updated : Oct 14, 2021, 01:41 PM IST
  • ಇಂದು ಕಿಚ್ಚ ಸುದೀಪ್ ನಟಿಸಿರುವ ಕೋಟಿಗೊಬ್ಬ-3 ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ.
  • ಸಿನಿಮಾ ನೋಡಲು ಥೇಟರ್ ಗೆ ಬಂದಿದ್ದ ಮತ್ತು ಬರುತ್ತಿರುವ ಅಭಿಮಾನಿಗಳಿಗೆ ಭಾರೀ ನಿರಾಶೆ
  • ಈ ಕುರಿತು ಕಿಚ್ಚ ಸುದೀಪ್ ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರತಿಕ್ರಯಿಸಿದ್ದು
Kiccha Sudeep : ಕೋಟಿಗೊಬ್ಬ-3 ಸಿನಿಮಾ ಪ್ರದರ್ಶನ ಲೇಟ್ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಕಿಚ್ಚ ಸುದೀಪ್ title=

ಬೆಂಗಳೂರು : ಇಂದು ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಕೋಟಿಗೊಬ್ಬ-3 ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಆದ್ರೆ, ಸಿನಿಮಾ ನೋಡಲು ಥೇಟರ್ ಗೆ ಬಂದಿದ್ದ ಮತ್ತು ಬರುತ್ತಿರುವ ಅಭಿಮಾನಿಗಳಿಗೆ ಭಾರೀ ನಿರಾಶೆ ಉಂಟಾಗಿದೆ.

ಹೌದು, ಕೋಟಿಗೊಬ್ಬ-3 ಸಿನಿಮಾ(Kotigobba-3 Movie)ದ ತಾಂತ್ರಿಕ ಕಾರಣದಿಂದಾಗಿ ಥೇಟರ್ ನಲ್ಲಿ ಪ್ರದರ್ಶನ ಮಾಡಲಾಗಿಲ್ಲ. ಹೀಗಾಗಿ ಅಭಿಮಾನಿಗಳು ರಾಜ್ಯದ  ಕೆಲ ಕಡೆ ಗಲಾಟೆ ಕೂಡ ಮಾಡಿದ್ದಾರೆ. 

ಇದನ್ನೂ ಓದಿ : Money Laundering Case : ₹200 ಕೋಟಿ ಹಣ ವರ್ಗಾವಣೆ ಪ್ರಕರಣದಲ್ಲಿ ನೋರಾ ಫತೇಹಿ ಹೆಸರು : ನಟಿ ವಿಚಾರಣೆ ನಡೆಸುತ್ತಿರುವ ED

ಈ ಕುರಿತು ಕಿಚ್ಚ ಸುದೀಪ್(Kiccha Sudeep) ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರತಿಕ್ರಯಿಸಿದ್ದು, ಕೋಟಿಗೊಬ್ಬ-3 ವೀಕ್ಷಿಸಲು ಚಿತ್ರಮಂದಿರಗಳಿಗೆ ಬಂದಿರುವವರಿಗೆ, ಬರುತ್ತಿರುವವರಿಗೆ ಚಿತ್ರ ಪ್ರದರ್ಶನ ತಡವಾಗುತ್ತಿರುವ ಬಗ್ಗೆ ತಿಳಿಸಲು ವಿಷಾದಿಸುತ್ತೇನೆ.

ಈ ಸಮಸ್ಯೆಗೆ ಕಾರಣೀಕರ್ತರಾದವರ ಪರವಾಗಿ ನಾನಕ್ ವೈಯಕ್ತಿಕವಾಗಿ ಕ್ಷಮೆ ಯಾಚಿಸುತ್ತೇನೆ. ಇದರಲ್ಲಿ ಚಿತ್ರದ ಮಂದಿರ(Cinema Theatre)ಗಳಿಂದ ಯಾವುದೇ ತಪ್ಪು ನಡೆದಿಲ್ಲ.

ನಾನು ಕೂಡ ನನ್ನ ಚಿತ್ರ(Cinema)ವೊಂದು ಎರಡು ವರ್ಷಗಳ ನಂತರ ಬಿಡುಗಡೆ ಆಗುತ್ತಿರುವ ಬಗ್ಗೆ, ನಿಮ್ಮಷ್ಟೇ ಉತ್ಸುಕನಾಗಿದ್ದೆ. ನಿಮ್ಮೆಲ್ಲರ ಪ್ರೀತಿ ಹಾಗೂ ತಾಳ್ಮೆಯೇ ನನ್ನ ಅತೀ ದೊಡ್ಡ ಶಕ್ತಿ.ಆದಷ್ಟು ಬೇಗ ಚಿತ್ರ ಪ್ರದರ್ಶನದ ಬಗ್ಗೆ ಮಾಹಿತಿ ಕೊಡುತ್ತಾನೆ ಹಾಗೂ ಮುಂದಿನ ನನ್ನ ಚಿತ್ರಗಳಿಗೆ ಹೀಗಾಗದ ಹಾಗೆ ನೋಡಿಕೊಳ್ಳುತ್ತೇನೆ. ಅಲ್ಲಿಯವರೆಗೆ ಯಾವುದೇ ರೀತಿಯ ಹಾನಿಗೆ ಕಾರಣರಾಗದೆ, ಶಾಂತಿಯನ್ನ ಕಾಪಾಡಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಇಂತಿ ನಿಮ್ಮ ಕಿಚ್ಚ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Shah Rukh Khan Viral Video : ಆರ್ಯನ್ ಖಾನ್ ಜೈಲಿಗೆ ಹೋದ ನಂತರ ಶಾರುಖ್ ಖಾನ್ ಭಾವನಾತ್ಮಕ Video Viral : ಇಲ್ಲಿದೆ ನೋಡಿ ವಿಡಿಯೋ
 
ಇಂದು ದುನಿಯಾ ವಿಜಯ(Duniya Vijay) ಮತ್ತೆ ದಾಳಿ ಧನಂಜಯ ನಟನೆಯ ಸಲಗ ಸಿನಿಮಾ ಮೇಯೆ ಕಿಚ್ಚ ಸುದೀಪ್ ಅಭಿನಯದ ಕೊಟ್ಟಿಗೊಬ್ಬ-3 ಈ ಎರಡು ಸಿನಿಮಾ ಒಟ್ಟಿಗೆ ಚಿತ್ರ ಮಂದಿರಗಳಿಗೆ ಲಗ್ಗೆ ಇಟ್ಟಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News