ಡೆತ್‌ನೋಟ್ ಬರೆದಿಟ್ಟು ಯುವ ನಟಿ ಆತ್ಮಹತ್ಯೆ..!
ಬಂಗಾಳಿ ಮಾಡೆಲ್ ಕಮ್ ನಟಿ ಬಿದಿಶಾ ಡಿ. ಮಜುಂದಾರ್ ಕೋಲ್ಕತ್ತಾದ ದಮ್‌ಡಮ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕೋಲ್ಕತ್ತಾ: ಬಂಗಾಳಿ ಮಾಡೆಲ್ ಕಮ್ ನಟಿ ಬಿದಿಶಾ ಡಿ. ಮಜುಂದಾರ್ ಕೋಲ್ಕತ್ತಾದ ದಮ್‌ಡಮ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಾಗರ್‌ಬಜಾರ್ ಪೊಲೀಸರು ಫ್ಲ್ಯಾಟ್‌ನ ಮುರಿದು ನೋಡಿದಾಗ ಬಿದಿಶಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೇ 25ರ ಬುಧವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು 21 ವರ್ಷ ವಯಸ್ಸಿನ ಬಿದಿಶಾ ಕಳೆದ 4 ತಿಂಗಳಿನಿಂದ ಈ ಬಾಡಿಗೆ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Shocking News: ನಟಿಯನ್ನು ಗುಂಡಿಕ್ಕಿ ಕೊಂದ ಉಗ್ರರು..!
ಸದ್ಯ ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ಬ್ಯಾರಕ್‌ಪುರ ಪೊಲೀಸರು, ಬಿದಿಶಾ ಮೃತದೇಹವನ್ನು ಪೋಸ್ಟ್‌ಮಾರ್ಟಂಗಾಗಿ ಆರ್‌ಜಿ ಕೇರ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇನ್ನು ಇದೇ ವೇಳೆ ನಟಿ ಫ್ಲ್ಯಾಟ್ ಶೋಧ ನಡೆಸಿದ ಪೊಲೀಸರಿಗೆ ಬಿದಿಶಾ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್ ಕೂಡ ಸಿಕ್ಕಿದೆ ಎನ್ನಲಾಗಿದೆ.
ನಟಿ ಅನುಭಾಬ್ ಬೇರಾ ಎಂಬುವವರೊಂದಿಗೆ ರಿಲೇಶನ್‌ಶಿಪ್‌ನಲ್ಲಿದ್ದರಂತೆ. ಆತನ ಜೊತೆಗಿನ ಸಂಬಂಧದಿಂದಾಗಿ ಆಕೆ ಖಿನ್ನತೆಗೆ ಒಳಗಾಗಿದ್ದಳು. ಇದರಿಂದಾಗಿ ಹೀಗೆ ಮಾಡಿಕೊಂಡಿರಬೇಕು ಎಂದು ಆಕೆಯ ಸ್ನೇಹಿತರು ಹೇಳಿಕೊಂಡಿದ್ದಾರೆ.
ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ನಟಿ ಬಿದಿಶಾ ಡಿ. ಮಜುಂದಾರ್, 2021ರಲ್ಲಿ ಅನಿರ್ಬೇಡ್ ಚಟ್ಟೋಪಾಧ್ಯಾಯ ನಿರ್ದೇಶನದ ಬಾರ್-ದಿ ಕ್ಲೌನ್ ಎಂಬ ಕಿರುಚಿತ್ರದ ಮೂಲಕ ಚಿತ್ರರಂಗದ ಪ್ರಯಾಣ ಆರಂಭಿಸಿದ್ದರು. ಅಲ್ಲದೇ ಜನಪ್ರಿಯ ನಟ ದೇಬ್ರಾಜ್ ಮುಖರ್ಜಿ ಅವರ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಮಿಂಚಿದ್ದರು. ಆದ್ರೆ ನಿನ್ನೆ ಸಂಜೆ ಯುವ ನಟಿ ಬಿದಿಶಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರೋದು ಬಂಗಾಳಿ ಚಿತ್ರರಂಗಕ್ಕೆ ಶಾಕ್ ನೀಡಿದಂತಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಮತ್ತು ಡಿಕೆಶಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ: ಬಿಜೆಪಿ ಟೀಕೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.