ಬೆಂಗಳೂರು: ‘ದಲಿತ ಮುಖ್ಯಮಂತ್ರಿ ಎಂಬ ಪದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕನಸಿಗೆ ಭಂಗ ತರುತ್ತಿದೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ. #ದಲಿತವಿರೋಧಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಸಿ ಬಿಜೆಪಿ ಗುರುವಾರ ಸರಣಿ ಟ್ವೀಟ್ ಮಾಡಿದೆ.
‘ಕಾಂಗ್ರೆಸ್ ಪಕ್ಷ ಪದೇ ಪದೇ ದಲಿತ ನಾಯಕರಿಗೆ ಅನ್ಯಾಯ ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷರಾದವರು ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗುವುದು ಅಲಿಖಿತ ನಿಯಮವಾಗಿತ್ತು. 2013ರಲ್ಲಿ ದಲಿತ ಸಮುದಾಯದ ಪ್ರಬಲ ನಾಯಕ ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಕುತಂತ್ರವೇ ನಡೆದು ಹೋಯಿತು!’ ಎಂದು ಟೀಕಿಸಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಶಾಸಕರ ಕಚೇರಿ ಬಳಿ ವೃದ್ಧನ ಭೀಕರ ಹತ್ಯೆ!
‘ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗುತ್ತಾರೆ ಎಂದರಿತ ಸಿದ್ದರಾಮಯ್ಯ, ಕುತಂತ್ರದಿಂದ ದಲಿತ ನಾಯಕನನ್ನು ಸೋಲಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಈಗ ದಲಿತ ಸಿಎಂ ವಾದ ಮತ್ತೆ ಮುನ್ನೆಲೆಗೆ ಬಂದಿದೆ. 2013ರ ಇತಿಹಾಸ 2023ರಲ್ಲೂ ಮರುಕಳಿಸುವ ಸೂಚನೆ ಲಭಿಸಿದೆ, ಪರಮೇಶ್ವರ್ ಅವರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಪರಮೇಶ್ವರ್ ಮುಖ್ಯಮಂತ್ರಿಯಾಗುತ್ತಾರೆ ಎಂದರಿತ @siddaramaiah, ಕುತಂತ್ರದಿಂದ ದಲಿತ ನಾಯಕನನ್ನು ಸೋಲಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಈಗ ದಲಿತ ಸಿಎಂ ವಾದ ಮತ್ತೆ ಮುನ್ನೆಲೆಗೆ ಬಂದಿದೆ.
2013 ರ ಇತಿಹಾಸ 2023 ರಲ್ಲೂ ಮರುಕಳಿಸುವ ಸೂಚನೆ ಲಭಿಸಿದೆ, ಪರಮೇಶ್ವರ್ ಅವರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ.#ದಲಿತವಿರೋಧಿಕಾಂಗ್ರೆಸ್
— BJP Karnataka (@BJP4Karnataka) May 26, 2022
‘ದಲಿತ ನಾಯಕ ಡಾ.ಜಿ.ಪರಮೇಶ್ವರ್ ಅವರನ್ನು 2013ರಲ್ಲಿ ಸೋಲಿಸಲು ಸಿದ್ದರಾಮಯ್ಯ ಒಬ್ಬರೇ ಶ್ರಮಿಸಿದ್ದರು. ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಕೈ ಜೋಡಿಸುತ್ತಿದ್ದಾರೆ. ಇವರಿಬ್ಬರೂ ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ. ದಲಿತರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇಷ್ಟೊಂದು ಅಸಹನೆ ಏಕೆ?’ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದಲ್ಲಿ ಬೆಳಗಾವಿಯ ‘ಲಕ್ಷ್ಮಿ’ಗೆ ಮಾತ್ರ ಗೌರವ: ಬಿಜೆಪಿ ಟೀಕೆ
ದಲಿತರ ಬಗ್ಗೆ ಭಾಷಣ ಬಿಗಿಯುವ ಸಿದ್ದರಾಮಯ್ಯ ಅವರೇ,
ಪರಮೇಶ್ವರ್, ಖರ್ಗೆ ಅವರಂತಹ ದಲಿತ ನಾಯಕರಿಗೆ ನೀವು ಅವಕಾಶ ವಂಚಿಸಿದ್ದನ್ನು ರಾಜ್ಯದ ಜನತೆ ಮರೆತಿಲ್ಲ.
ಪದೇ ಪದೇ ದಲಿತ ಸಮುದಾಯದ ನಂಬಿಕೆಗೆ ದ್ರೋಹ ಬಗೆಯುವ ನಿಮ್ಮನ್ನು ರಾಜ್ಯದ ದಲಿತ ಸಮುದಾಯವೆಂದಿಗೂ ಕ್ಷಮಿಸದು.#ದಲಿತವಿರೋಧಿಕಾಂಗ್ರೆಸ್
— BJP Karnataka (@BJP4Karnataka) May 26, 2022
‘ನನಗಿಂತ ದೊಡ್ಡ ದಲಿತ ಯಾರಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪಕ್ಷ ಸಂಘಟಿಸಿದ್ದು ನಾನು, ಅಧಿಕಾರ ಬೇರೆಯವರಿಗೆ ಏಕೆ ಬಿಟ್ಟುಕೊಡಬೇಕು ಎಂದು ಡಿಕೆಶಿ ಹೇಳಿದ್ದಾರೆ. ಸಿಎಂ ಪದವಿ ಕನಸು ಕಾಣುತ್ತಿರುವ ಇಬ್ಬರು ನಾಯಕರು ಪರಮೇಶ್ವರ್ ಅವರನ್ನು ಗೆಲ್ಲಲು ಬಿಡುತ್ತಾರೆಯೇ? ಪರಮೇಶ್ವರ್ ಅವರೇ 2023ರಲ್ಲೂ ನಿಮ್ಮ ಸೋಲು ನಿಶ್ಚಿತ!’ವೆಂದು ಬಿಜೆಪಿ ಎಚ್ಚರಿಕೆ ನೀಡಿದೆ.
‘ದಲಿತರ ಬಗ್ಗೆ ಭಾಷಣ ಬಿಗಿಯುವ ಸಿದ್ದರಾಮಯ್ಯ ಅವರೇ, ಪರಮೇಶ್ವರ್, ಖರ್ಗೆ ಅವರಂತಹ ದಲಿತ ನಾಯಕರಿಗೆ ನೀವು ಅವಕಾಶ ವಂಚಿಸಿದ್ದನ್ನು ರಾಜ್ಯದ ಜನತೆ ಮರೆತಿಲ್ಲ. ಪದೇ ಪದೇ ದಲಿತ ಸಮುದಾಯದ ನಂಬಿಕೆಗೆ ದ್ರೋಹ ಬಗೆಯುವ ನಿಮ್ಮನ್ನು ರಾಜ್ಯದ ದಲಿತ ಸಮುದಾಯವೆಂದಿಗೂ ಕ್ಷಮಿಸದು. ಚುನಾವಣೆ ಹತ್ತಿರ ಬರುತ್ತಿದ್ದಂತೆ ದಲಿತರ ಪರ ಒಲವು ತೋರಿಸುತ್ತಿರುವ ಸಿದ್ದರಾಮಯ್ಯನವರೇ, 2023ರಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಣೆ ಮಾಡುವ ತಾಕತ್ತು ಇದೆಯೇ? ದಲಿತ ಮುಖ್ಯಮಂತ್ರಿ ಎಂಬ ಪದ ಡಿಕೆಶಿ ಮತ್ತು ಸಿದ್ದರಾಮಯ್ಯರ ಕನಸಿಗೆ ಭಂಗ ತರುತ್ತಿದೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.