ದುಬೈ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ `ಚಿಣ್ಣರ ಚಂದ್ರ` ಚಿತ್ರಕ್ಕೆ ಉತ್ತಮ ಮಕ್ಕಳ ಚಿತ್ರ ಪ್ರಶಸ್ತಿ
ಶ್ರೀ ಜಿ.ಎನ್. ಗೋವಿಂದರಾಜು (ರಾಜಶೇಖರ್) ನಿರ್ಮಾಣ ಮಾಡಿ, ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಚಿಣ್ಣರ ಚಂದ್ರ’ ಸಿನಿಮಾವು ದುಬೈ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.
ಇದನ್ನೂ ಓದಿ: ಪಾಕಿಸ್ತಾನ್ ಜಿಂದಾಬಾದ್ ಘೋಷಣೆಕೊರರನ್ನು ಮೊದಲು ಒದ್ದು ಒಳಗೆ ಹಾಕಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹ
ಆಕ್ಷಾಂಕ್ಷ್ ಬರಗೂರ್ (ಬರಗೂರರ ಮೊಮ್ಮಗ) ಈ ಚಿತ್ರದಲ್ಲಿ ಪ್ರಮುಖ ಪ್ರಾತ್ರಧಾರಿಯಾಗಿದ್ದು, ದುಬೈ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ ಬಾಲನಟ ಪ್ರಶಸ್ತಿ ಲಭ್ಯವಾಗಿದೆ. ಈ ಮುಂಚೆ ಆಕಾಂಕ್ಷ್ ಬರಗೂರ್, ಬಯಲಾಟದ ಭೀಮಣ್ಣ, ಭಾಗೀರಥಿ ಮತ್ತು ತಾಯಿ ಕಸ್ತೂರ್ ಗಾಂಧಿ ಚಿತ್ರಗಳಲ್ಲಿ ಅಭಿನಯಿಸಿದ್ದನ್ನು ಇಲ್ಲಿ ನೆನೆಯಬಹುದು.
‘ಚಿಣ್ಣರ ಚಂದ್ರ’ ಚಿತ್ರವು ಬರಗೂರರ ‘ಅಡಗೊಲಜ್ಜಿ’ ಎಂಬ ಕಾದಂಬರಿಯನ್ನು ಆಧರಿಸಿದೆ. ಬರಗೂರು ರಾಮಚಂದ್ರಪ್ಪ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: ಎನ್.ಜಿ.ಓಗಳ ಅಧಿಕಾರೇತರ ಸದಸ್ಯ ನೇಮಕಾತಿಗಾಗಿ ಅರ್ಜಿ ಆಹ್ವಾನ
ಈ ಚಿತ್ರವು ಅಲಹಾಬಾದ್ ಮತ್ತು ಮೇಲ್ಬೋರ್ನ್ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೂ ಆಯ್ಕೆಯಾಗಿತ್ತು. ಇದು ಶಿಕ್ಷಣದ ಮಹತ್ವವನ್ನು ಸಾದರಪಡಿಸುವ ಚಿತ್ರವಾಗಿದ್ದು, ಮಕ್ಕಳ ಮೂಲಕವೇ ಈ ಆಶಯವನ್ನು ಅಭಿವ್ಯಕ್ತಿಸಲಾಗಿದೆ. ಜೊತೆಗೆ ಸಮಾಜದಲ್ಲಿ ಸಮಾನತೆ, ಸೌಹಾರ್ದತೆಗಳು ನೆಲೆಸಬೇಕೆಂಬ ಸಂದೇಶವನ್ನು ನೀಡುತ್ತದೆ. ಅಡಗೊಲಜ್ಜಿಯ ಮೂಲಕ ಜನಪದ ಕತೆಗಳನ್ನು ಕೇಳುವ ಮಕ್ಕಳು ಸದಭಿರುಚಿ ಸಿನಿಮಾಗಳ ಅಗತ್ಯಕ್ಕಾಗಿ ಹಕ್ಕೊತ್ತಾಯ ಮಂಡಿಸುವ ವಿಶೇಷ ಪ್ರಸಂಗವನ್ನೂ ಈ ಚಿತ್ರವು ಒಳಗೊಂಡಿದೆ.
ತಾರಾಗಣದಲ್ಲಿ ಆಕಾಂಕ್ಷ್ ಬರಗೂರ್, ನಿಕ್ಷೇಪ್, ಷಡ್ಜ, ಈಶಾನ್, ಅಭಿನವ್‌ನಾಗ್, ಸುಂದರರಾಜು, ರೇಖಾ, ವತ್ಸಾಲಾ ಮೋಹನ್, ರಾಧಾ ರಾಮಚಂದ್ರ, ಸುಂದರರಾಜ ಅರಸು, ರಾಘವ್, ರಾಜಪ್ಪ ದಳವಾಯಿ, ಹಂಸ, ವೆಂಕಟರಾಜು, ಮೈಸೂರು ಮಂಜುಳ ಮುಂತಾದವರು ಇದ್ದಾರೆ. ನಾಗರಾಜ ಆದವಾನಿ ಛಾಯಾಗ್ರಹಣ, ಸುರೇಶ್ ಅರಸು ಸಂಕಲನ , ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಹಾಗೂ ನಟ್ರಾಜ ಶಿವು ಮತ್ತು ಪ್ರವೀಣ್ ಅವರ ಸಹ ನಿರ್ದೇಶನ "ಚಿಣ್ಣರ ಚಂದ್ರ" ಚಿತ್ರಕ್ಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.