ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯು ಮೇ 28ರಂದು ನಡೆದಿದ್ದು, ಫಲಿತಾಂಶ ಇದೀಗ ಹೊರಬಿದ್ದಿದೆ. ಈ ಚುನಾವಣೆಯಲ್ಲಿ ನಿರ್ಮಾಪಕ ಭಾ.ಮಾ ಹರೀಶ್ ಗೆಲುವು ಸಾಧಿಸಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ಫಿಲ್ಮ್ ಚೇಂಬರ್‌ನ ಅಧ್ಯಕ್ಷ ಸ್ಥಾನಕ್ಕೆ ಭಾ.ಮಾ ಹರೀಶ್ ಹಾಗೂ ಸಾ. ರಾ ಗೋವಿಂದು ಸ್ಪರ್ಧಿಸಿದ್ದರು. ಇನ್ನು ಈ ಚುನಾವಣೆಯಲ್ಲಿ 400 ಮತಗಳ ಅಂತರದಿಂದ  ಭಾ.ಮಾ ಹರೀಶ್ ಸೋಲಿಸಿ, ಗೆಲುವಿನ ಪತಾಕೆ ಹಾರಿಸಿದ್ದಾರೆ. 796 ನಿರ್ಮಾಪಕರು, 301 ವಿತರಕರು, 679 ಪ್ರದರ್ಶಕರು ಮತದಾನದಲ್ಲಿ ಪಾಲ್ಗೊಂಡಿದ್ದರು. 


ಇದನ್ನು ಓದಿ: ಟಾಲಿವುಡ್ ಕಿರುತೆರೆಯಲ್ಲಿ ಮಿಂಚು ಹರಿಸುತ್ತಿರುವ ನಟಿ ಸುಶ್ಮೀತಾ ರಾಮ್ ಕಲಾ


ಒಟ್ಟು 1,176 ಮತದಾನವಾಗಿದ್ದು, ಅದರಲ್ಲಿ 781 ಮತಗಳು ಭಾ.ಮಾ ಹರೀಶ್‌ ಕಡೆಗೆ ಮುಖ ಮಾಡಿದೆ. ಇನ್ನು ಸಾ.ರಾ.ಗೋವಿಂದು ಅವರಿಗೆ ಕೇವಲ 378 ಮತಗಳು ಬಿದ್ದಿವೆ. ಈ ಮೂಲಕ ಭಾಮಾ ಹರೀಶ್‌ ಇನ್ನು ಮುಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.  


ಇನ್ನು ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷರಾಗಿ ಜೈ ಜಗದೀಶ್ ಗೆಲುವು ಸಾಧಿಸಿದ್ದಾರೆ. ಅಷ್ಟೇ ಅಲ್ಲದೆ, ನಿರ್ಮಾಪಕರ‌ ವಲಯದಿಂದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಟ ನಿರ್ಮಾಪಕ ಸುಂದರ್ ರಾಜ್ ಆಯ್ಕೆಯಾಗಿದ್ದಾರೆ. 


ಯಾರಗೆ ಎಷ್ಟು ಮತ? ಇಲ್ಲಿದೆ ವಿವರ: 
ಭಾ.ಮಾ ಹರೀಶ್‌ 781
ಸಾ.ರಾ ಗೋವಿಂದು 378


ಜೈಜಗದೀಶ್‌ 673
ಕರಿ ಸುಬ್ಬು 428


ಶಿಲ್ಪಾ ಶ್ರೀನಿವಾಸ್‌ 651
ಜ್ಞಾನೇಶ್ವರ್‌ ಇಯ್ತಾಲ್‌ 431


ಸುಂದರ್‌ ರಾಜ್‌ 480
ರಾಜೇಶ್‌ ಬ್ರಹ್ಮಾವರ 235
ವೀರೇಶ್‌ 455


ಪಾರ್ಥಸಾರಥಿ 429
ವೆಂಕಟೇಶ್‌ 200
ಕುಮಾರ್‌ 455


ಹನುಮಂತಪ್ಪ -299
ಕುಶಾಲ್‌ 741


ಸಿದ್ದರಾಜು 612
ಜಯಸಿಂಹ 489


ಇದನ್ನು ಓದಿ: ಮತ್ತೊಂದು ದಾಖಲೆ ಬರೆದ KGF 2.. ಬಾಹುಬಲಿ 2 ದಾಖಲೆ ಪುಡಿ ಪುಡಿ!!


ಈ ಬಳಿಕ ಮಾತನಾಡಿದ ಫಿಲ್ಮ್‌ ಚೇಂಬರ್‌ನ ನೂತನ ಅಧ್ಯಕ್ಷ ಭಾ.ಮಾ ಹರೀಶ್, "ಈ ಗೆಲುವನ್ನು ಪ್ರತಿಯೊಬ್ಬ ಚಿತ್ರರಂಗದವರಿಗೆ ಅರ್ಪಿಸುತ್ತೇನೆ. ಗೆಲುವು ಖುಷಿ‌ ಕೊಟ್ಟಿದೆ. ರಾಜ್ ಕುಮಾರ್ ಕುಟುಂಬ, ಮು‌ನಿರತ್ನ, ರಾಕ್ ಲೈನ್ ವೆಂಕಟೇಶ್, ಜಯಮಾಲ ಸೇರಿ ಅನೇಕರು ಬೆಂಬಲ ಕೊಟ್ಟಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ" ಎಂದಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.