ಟಾಲಿವುಡ್ ಕಿರುತೆರೆಯಲ್ಲಿ ಮಿಂಚು ಹರಿಸುತ್ತಿರುವ ನಟಿ ಸುಶ್ಮೀತಾ ರಾಮ್ ಕಲಾ

ಕನ್ನಡದ ನಟ ನಟಿಯರು ಸದ್ಯ ಪರಭಾಷೆಗಳಲ್ಲಿ ಸಖತ್‌ ಆಗಿ ಮಿಂಚುತ್ತಿದ್ದಾರೆ.ಎಲ್ಲಿ ನೋಡಿದ್ರೂ ಕನ್ನಡಿಗರ ಹವಾ ಜೋರಾಗಿದೆ.ಇದೀಗ ಕನ್ನಡದ ಮತ್ತೊಬ್ಬ ನಟಿ ತೆಲುಗು ಪ್ರೇಕ್ಷಕರನ್ನ ರಂಜಿಸೋಕೆ ಸಿದ್ಧರಾಗಿದ್ದಾರೆ.ಹೌದು,ನಮ್ಮ ಕನ್ನಡದ ಮುದ್ದು ಮುಖದ ಚೆಲುವೆ ಟಾಲಿವುಡ್‌ ಕಿರುತೆರೆಯಲ್ಲಿ ಅಬ್ಬರಿಸೋಕೆ ಹೋಗುತ್ತಿರೋದು ಪ್ರತಿಯೊಬ್ಬರಿಗೂ ಖುಷಿ ಕೊಟ್ಟಿದೆ.

Written by - CHARITHA PATEL | Edited by - Manjunath N | Last Updated : May 28, 2022, 04:06 PM IST
  • ಕನ್ನಡದ ನಟ ನಟಿಯರು ಸದ್ಯ ಪರಭಾಷೆಗಳಲ್ಲಿ ಸಖತ್‌ ಆಗಿ ಮಿಂಚುತ್ತಿದ್ದಾರೆ.ಎಲ್ಲಿ ನೋಡಿದ್ರೂ ಕನ್ನಡಿಗರ ಹವಾ ಜೋರಾಗಿದೆ.
  • ಇದೀಗ ಕನ್ನಡದ ಮತ್ತೊಬ್ಬ ನಟಿ ತೆಲುಗು ಪ್ರೇಕ್ಷಕರನ್ನ ರಂಜಿಸೋಕೆ ಸಿದ್ಧರಾಗಿದ್ದಾರೆ.
  • ಹೌದು,ನಮ್ಮ ಕನ್ನಡದ ಮುದ್ದು ಮುಖದ ಚೆಲುವೆ ಟಾಲಿವುಡ್‌ ಕಿರುತೆರೆಯಲ್ಲಿ ಅಬ್ಬರಿಸೋಕೆ ಹೋಗುತ್ತಿರೋದು ಪ್ರತಿಯೊಬ್ಬರಿಗೂ ಖುಷಿ ಕೊಟ್ಟಿದೆ.
ಟಾಲಿವುಡ್ ಕಿರುತೆರೆಯಲ್ಲಿ ಮಿಂಚು ಹರಿಸುತ್ತಿರುವ ನಟಿ ಸುಶ್ಮೀತಾ ರಾಮ್ ಕಲಾ   title=

ಬೆಂಗಳೂರು: ಕನ್ನಡದ ನಟ ನಟಿಯರು ಸದ್ಯ ಪರಭಾಷೆಗಳಲ್ಲಿ ಸಖತ್‌ ಆಗಿ ಮಿಂಚುತ್ತಿದ್ದಾರೆ.ಎಲ್ಲಿ ನೋಡಿದ್ರೂ ಕನ್ನಡಿಗರ ಹವಾ ಜೋರಾಗಿದೆ.ಇದೀಗ ಕನ್ನಡದ ಮತ್ತೊಬ್ಬ ನಟಿ ತೆಲುಗು ಪ್ರೇಕ್ಷಕರನ್ನ ರಂಜಿಸೋಕೆ ಸಿದ್ಧರಾಗಿದ್ದಾರೆ.ಹೌದು,ನಮ್ಮ ಕನ್ನಡದ ಮುದ್ದು ಮುಖದ ಚೆಲುವೆ ಟಾಲಿವುಡ್‌ ಕಿರುತೆರೆಯಲ್ಲಿ ಅಬ್ಬರಿಸೋಕೆ ಹೋಗುತ್ತಿರೋದು ಪ್ರತಿಯೊಬ್ಬರಿಗೂ ಖುಷಿ ಕೊಟ್ಟಿದೆ.

ಇದನ್ನೂ ಓದಿ : ಖ್ಯಾತ ನಿರೂಪಕಿಗೆ ಸಂಕಷ್ಟ ತಂದ ʼಗಡ್ಡʼ: ಅಪಹಾಸ್ಯ ಮಾಡಿದಕ್ಕೆ ದಾಖಲಾಯ್ತು FIR!

ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಾಯಿರುವ ಪಾರು ಸೀರಿಯಲ್‌ ಬಗ್ಗೆ ನಿಮಗೆಲ್ಲಾ ಗೊತ್ತೆಯಿದೆ.. ಆ ಧಾರವಾಹಿಯಲ್ಲಿ ಈ ಮುಂಚೆ ಯಾಮಿನ ಪಾತ್ರ ಒಂದು ಪಾರು ಹಾಗೂ ಆದಿಯನ್ನ ದೂರಾ ಮಾಡೋಕೆ ಹರಸಾಹಸ ಪಟ್ಟು ಕೊನೆಯಲ್ಲಿ ಜೈಲಿಗೆ ಹೋದ್ರು.. ಬಳಿಕ ಯಾಮಿನಿ ಪಾತ್ರವನ್ನು ಪ್ರೇಕ್ಷಕರು ನೋಡ್ಲೇಯಿಲ್ಲಾ.. ಯಾಮಿನಿ ಪಾತ್ರ ಸ್ವಲ್ಪ ದಿನ ಬಂದ್ರು ಸಹಿತ ಆ ಪಾತ್ರ ಪ್ರೇಕ್ಷಕರ ಮನಸಿಗ್ಗೆ ಹತ್ತಿರವಾಗಿದೆ..ಇದೀಗ ಯಾಮಿನಿ ಪಾತ್ರ ಮಾಡ್ತಾಯಿದ್ದ ನಟಿ ಸುಶ್ಮಿತಾ ಸದ್ಯ ತೆಲುಗು ಇಂಡಸ್ಟ್ರಿಯಲ್ಲಿ ಸದ್ದು ಮಾಡೊಕೆ ರೆಡಿಯಾಗಿದ್ದಾರೆ.. ಹೌದು, ಪಾರು ಧಾರವಾಹಿಯ ಬಳಿಕ ಸಾಕಷ್ಟು ಆಫರ್‌ಗಳು ಸುಶ್ಮಿತಾ ಅವ್ರಿಗೆ ಬಂದಿದ್ದು, ಸದ್ಯ ತೆಲುಗಿನ ಜೀನಲ್ಲಿ ಪ್ರಸಾರವಾಗ್ತಾಯಿರುವ ಗುಂಡಮ್ಮ ಕಥಾ  ಧಾರವಾಹಿಯಲ್ಲಿ ಸುಶ್ಮಿತ ಪ್ರಮುಖ ರೋಲ್‌ನಲ್ಲಿ ಮಿಂಚಲಿದ್ದಾರೆ..ಇನ್ನೂ ಈ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಿರುವ ನಟಿ ಸುಶ್ಮಿತಾ.. ಪಾರೂ ಧಾರವಾಹಿಯಲ್ಲಿ ನೆಗೆಟಿವ್‌ ಶೇಡ್‌ಯಿದ್ರೂ ಜನ ಆ ಪಾತ್ರವನ್ನು ಮೆಚ್ಚಿದ್ರೂ.. ಪಾರು ಸೀರಿಯಲ್‌ ಬಳಿಕ ನನಗೆ ಒಂದಿಷ್ಟು ಆಫ್‌ಗಳು ಬಂದವು..ಆದ್ರೆ ನನಗೆ ಗುಂಡ್ಡಮ್ಮ ಕಥಾ ಧಾರವಾಹಿಯ ಪಾತ್ರ ಇಷ್ಟವಾಯ್ತು.. ಜೋತೆಗೆ ವಿಭಿನ್ನ ರೋಲ್‌ನಲ್ಲಿ ಕಾಣಿಸಿಕೊಳ್ತೀನಿ.ಮತ್ತೊಂದು ವಿಚಾರ ಅಂದ್ರೆ ಗುಂಡಮ್ಮ ಕಥಾ ಧಾರವಾಹಿ ಸದ್ಯ ಸೂಪರ್‌ ಹಿಟ್‌ ಸೀರಿಯಲ್‌ ಹಾಗಾಗಿ ಒಪ್ಪಿಕೊಂಡೆ' ಎಂದಿದ್ದಾರೆ.No description available.

ಇದನ್ನೂ ಓದಿ: ಸಿನಿಮಾರಂಗದ ಕಹಿ ಸತ್ಯ ಬಿಚ್ಚಿಟ್ಟ ಸ್ಯಾಂಡಲ್‌ವುಡ್‌ ತಾರೆ ರಮ್ಯಾ!!

ಇನ್ನೂ ಈ ಸೀರಿಯಲ್‌ನಲ್ಲಿ ಲೋಕೇಶ್ವರಿ ಪಾತ್ರದಲ್ಲಿ ಕಾಣಿಸಿಕೊಳ್ತಾಯಿದ್ದೀನಿ.. ಲೋಕೇಶ್ವರಿ ಎಂಬುವುದು ನೆಗೆಟಿವ್‌ ಶೇಡ್‌..ಅವ್ಳು ಚಿಕ್ಕ ವಯಸ್ಸಿನಲ್ಲಿ ಯುಎಸ್‌ಎ ಗೆ ಹೋಗಿರ್ತಾಳೆ.. ಇಂಡಿಯಾಗೆ ಬಂದಾಗ ಅವ್ಳು ಏನ್‌ ಮಾಡ್ತಾಳೆ.. ಕಥೆಯಲ್ಲಿ ಅವಳಿಂದ ಯಾವ ರೀತಿ ಟ್ವಿಸ್ಟ್‌ ಸಿಗತ್ತೆ ಅನ್ನೊದೆ ಕಥೆ.. ಗುಂಡಮ್ಮ ಹಾಗೂ ಲೋಕೇಶ್ವರಿ ಅಕ್ಕ ತಂಗಿ ಸದ್ಯ ಗುಂಡಮ್ಮ ಪಾತ್ರ ಸಖತ್‌ ಹಿಟ್‌ ಆಗಿದೆ..ನನ್ನ ರೋಲ್‌ ಕೂಡಾ ಹಿಟ್‌ ಆಗಬಹುದು ಎಂಬ ನಿರೀಕ್ಷೆಯಿದೆ' ಎಂದಿದ್ದಾರೆ.

ಇನ್ನೂ ಈ ಮುಂಚೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ಇಂಚರ ಪಾತ್ರದ ಮೂಲಕ ಕನ್ನಡಿಗರ ಮನೆ ಮನ ಗೆದ್ದಿರುವವರು ನಟಿ ಕೌಸ್ತುಭ ಮಣಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ..ಈ  ಸುದ್ದಿ ಅಭಿಮಾನಿಗಳಿಗೆ ಇನ್ನೂ ಖುಷಿ ನೀಡಿದೆ. ಜೊತೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನೇತ್ರಾವತಿ ಧಾರಾವಾಹಿ ಖ್ಯಾತಿಯ ದುರ್ಗಶ್ರೀ.ಈ ನಟಿ ತೆಲುಗಿಗೆ ಎಂಟ್ರಿ ಕೊಟ್ಟಿದ್ದು ಪ್ರತಿಯೊಬ್ಬರಿಗೂ ಖುಷಿ ನೀಡಿದೆ.ಈ ಇಬ್ಬರೂ ನಟಿಯರು ಜೀ ತೆಲುಗಿನಲ್ಲಿ ಲಾಂಚ್‌ ಆಗಲಿರುವ  ಕೋಡಲು ಮೀಕು ಜೋರ್ಹಲು ಎಂಬ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.ವಿಶೇಷ ಅಂದ್ರೆ ಈ ಧಾರಾವಾಹಿಯಲ್ಲಿ ಇಬ್ಬರು ನಾಯಕಿಯರಿದ್ದು, ಇದು ಸೊಸೆಯರ ಸುತ್ತ ಹೆಣೆದಿರುವ ಕಥೆಯಾಗಿದೆ. ಇನ್ನು ಒಂದೇ ಧಾರಾವಾಹಿಯಲ್ಲಿ ಕನ್ನಡದ ಇಬ್ಬರು ನಟಿಯರು ಕಾಣಿಸಿಕೊಳ್ಳುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

No description available.

ಇದನ್ನೂ ಓದಿ: 777 Charlie New Record : ಹೊಸ ರೆಕಾರ್ಡ್‌ ಕ್ರಿಯೇಟ್‌ ಮಾಡಿದ '777 ಚಾರ್ಲಿ'..!

ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಕನ್ನಡದ ನಟಿಯರು ತೆಲುಗು ಇಂಡಸ್ಟ್ರಿಗೆ ಲಗ್ಗೆ ಇಡ್ತಾಯಿರೊದು ಖುಷಿಯ ವಿಚಾರ..ತೆಲುಗು ನಾಡಿನಲ್ಲಿ ಕನ್ನಡಿಗರು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂಬುದು ಪ್ರತಿಯೊಬ್ಬರ ಹಾರೈಕೆಯಾಗಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News