Bhagyalakshmi Serial: ಹೆಂಡತಿ SSLC ಪಾಸಾಗಿದ್ದನ್ನು ಕೇಳಿ ಉರ್ಕೊಂಡ ತಾಂಡವ್: ಅತ್ತೆಗೆ ಕ್ರೆಡಿಟ್ ಕೊಟ್ಟ ಭಾಗ್ಯಾ!!
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಭಾಗ್ಯಾ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದರಿಂದ ತಾಂಡವ್ ಹೊಟ್ಟೆ ಉರ್ಕೊಂಡಿದ್ದಾನೆ ಹಾಗೂ ಭಾಗ್ಯಾ ತನ್ನ ಯಶಸ್ಸಿನ ಕ್ರೆಡಿಟ್ ಅನ್ನು ಅತ್ತೆ ಕುಸುಮಾಗೆ ಕೊಟ್ಟಿದ್ದಾಳೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Bhagya Passed In SSLC Exam: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಭಾಗ್ಯಾ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಭಾಗ್ಯಾ ಮನೆಯಲ್ಲಿರುವ ಮನಸ್ತಾಪಗಳ ಮಧ್ಯೆಯೂ ಓದು ಮುಂದುವರೆಸುವುದಕ್ಕೆ ನಿರ್ಧಾರ ಮಾಡಿದ್ದಳು. ಆದರೆ ತಾಂಡವ್ ಯಾವಾಗಲೂ ತನ್ನ ಹೆಂಡತಿಯನ್ನು ಶತ ದಡ್ಡಿ ಶತ ದಡ್ಡಿಯೆಂದೇ ಆಡಿಕೊಳ್ಳುತ್ತಾ ನಿಂದಿಸುತ್ತಿದ್ದ. ಆದರೆ ಕುಸುಮಾಗೆ ಭಾಗ್ಯಾ ತಾನು ತಂದಿರುವ ಸೊಸೆಯಾಗಿದ್ದರಿಂದ ಆಕೆಗೆ ಮರಿಯಾದೆ ಪ್ರಶ್ನೆಯಾಗಿತ್ತು. ಆದರಿಂದ ಕುಸುಮಾ ಭಾಗ್ಯಾಳನ್ನು ಎಸ್ಎಸ್ಎಲ್ಸಿ ಪಾಸ್ ಮಾಡಿಸಲೇಬೇಕೆಂದು ನಿರ್ಧರಿಸಿದಳು.
ಭಾಗ್ಯಾಗೆ ಓದು ಮುಂದುವರೆಸುವ ದಾರಿಯು ಸುಲಭವಾಗಿರಲಿಲ್ಲ. ತಾಂಡವ್ ತನ್ನ ಹೆಂಡತಿ ಓದುವುದು ಇಷ್ಟವಿರಲಿಲ್ಲ. ಈಕೆಗೆ ಗಂಡನ ಕೋಪ ಜೊತೆಗೆ ಮಗಳ ಮುನಿಸು ಕೂಡ ಜೋರಾಗಿಯೆ ಇತ್ತು. ಆದರೆ ಇದೆಲ್ಲದರ ನಡುವೆಯೇ ಭಾಗ್ಯಾಗೆ ಅತ್ತೆಯ ಬೆಂಬಲ ಬಹಳ ಸ್ಟ್ರಾಂಗ್ ಆಗಿತ್ತು. ಸದ್ಯ ಭಾಗ್ಯಾ ಕೊನೆಗೂ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಬರೆದಳು. ಈ ಹೊತ್ತಿಗೆ ತನ್ವಿಗೆ ಅಮ್ಮನ ಬೆಲೆ ಗೊತ್ತಾಗಿ, ಅಪ್ಪನ ದುರ್ಬುದ್ದಿಗೆ ವಿರೋಧ ವ್ಯಕ್ತಪಡಿಸಿದ್ದಳು. ಇದೀಗ ತಾಯಿ ಮಗಳು ಇಬ್ಬರು ಎಗ್ಜಾಮ್ನಲ್ಲಿ ಪಾಸ್ ಆಗಿದ್ದಾರೆ. ಈ ವಿಚಾರದಿಂದ ತಾಂಡವ್ ಹೊಟ್ಟೆ ಉರ್ಕೊಂಡಿದ್ದಾನೆ.
ಇದನ್ನೂ ಓದಿ: Devil: ಚಾಲೆಂಜಿಂಗ್ ಸ್ಟಾರ್ ʻಡೆವಿಲ್ ದಿ ಹೀರೋʼ ಚಿತ್ರಕ್ಕೆ ನಾಯಕಿ ಯಾರು ಗೊತ್ತೇ??
ಭಾಗ್ಯಾ-ತನ್ವಿ ಇಬ್ಬರೂ ಪರೀಕ್ಷೆಯಲ್ಲಿ ಪಾಸ್ ಆಗಿದ್ದರಿಂದ ಕುಸುಮಾ ಮನೆಯಲ್ಲಿ ಸಂಭ್ರಮ ಜೋರಾಗಿಯೇ ಇತ್ತು. ಕುಸುಮಾ ಮಾಡಿದ ನಿರ್ಧಾರಗಳು ಮತ್ತು ಪರಿಶ್ರಮ ಇಂದು ಸಾರ್ಥಕವಾಗಿದೆ. ಆಕೆಗೆ ತನ್ನ ಸೊಸೆಯಿಂದಲೇ ಬೆಸ್ಟ್ ಗಿಫ್ಟ್ ಸಿಕ್ಕಿದೆ. ತನ್ವಿ ಯಾವಾಗಲೂ ಯಾವ ಪರೀಕ್ಷೆಯಲ್ಲೂ ಸರಿಯಾದ ಮಾರ್ಕ್ಸ್ ತೆಗೆಯುತ್ತಿರಲಿಲ್ಲ. ಆದರೆ ಈ ಬಾರಿ ಅಮ್ಮನ ಹಠಕ್ಕೆ ಓದಿ ಒಳ್ಳೆ ಅಂಕವನ್ನೇ ಪಡೆದುಕೊಂಡಿದ್ದಾಳೆ. ಭಾಗ್ಯಾ ಫಸ್ಟ್ ಕ್ಲಾಸ್ ಬಂದರೇ ಅದೇ ರೀತಿ ತನ್ವಿ ಕೂಡ ಶಾಲೆಗೆ ಫಸ್ಟ್ ಕ್ಲಾಸ್ ಬಂದಿದ್ದಾಳೆ.
ಕುಸುಮಾ ಭಾಗ್ಯಾಳನ್ನು ಓದಿಸಲೇಬೇಕೆಂದು ಹಠ ಮಾಡಿದ್ದರಿಂದ ಸೊಸೆ ವಿದ್ಯಾವಂತಳಾಗಿದ್ದಾಳೆ. ಆದರಿಂದ ಕುಸುಮಾ ಮನೆಯವರಿಗೆಲ್ಲಾ ಸಿಹಿ ಕೊಡಲು ಹೇಳುವಾಗ, ಅದರಲ್ಲೂ ಮೊದಲು ತಾಂಡವ್ಗೂ ಸಿಹಿ ನೀಡಬೇಕೆಂದು ಹೇಳಿದಳು. ಆದರೆ ಅವಾಗ ಭಾಗ್ಯಾ ತಾಂಡವ್ನನ್ನು ಕಡೆಗಣಿಸಿದ್ದಾಳೆ. ಆಕೆಯ ಈ ಯಶಸ್ಸಿನ ಕಾರಣ ಅತ್ತೆ ಕುಸುಮಾ ಆದರಿಂದ ನನ್ನ ಅತ್ತೆಗೆ ಈ ಕ್ರೆಡಿಟ್ ಎಲ್ಲಾ ಹೋಗಬೇಕು ಅಂತ, ಅತ್ತೆಗೆ ಸಿಹಿ ತಿನ್ನಿಸಿ, ಆಶೀರ್ವಾದ ಪಡೆದಿದ್ದಾಳೆ. ಇದರಿಂದ ಕುಸುಮಾಳಿಗೆ ಮತ್ತಷ್ಟು ಖುಷಿಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.