Devil: ಚಾಲೆಂಜಿಂಗ್‌ ಸ್ಟಾರ್‌ ʻಡೆವಿಲ್‌ ದಿ ಹೀರೋʼ ಚಿತ್ರಕ್ಕೆ ನಾಯಕಿ ಯಾರು ಗೊತ್ತೇ??

Devil Update: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ಮಿಲನ ಪ್ರಕಾಶ್‌ ಕಾಂಬಿನೇಷನ್‌ನ ಬಹುನಿರೀಕ್ಷಿತ ʻಡೆವಿಲ್‌ ದಿ ಹೀರೋʼ ಸಿನಿಮಾಗೆ ನಾಯಕಿ ಆಯ್ಕೆಯಾಗಿದ್ದಾರೆ. ಹಾಗಿದ್ರೇ ಈ ಚಿತ್ರದ ನಾಯಕಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : May 18, 2024, 10:46 AM IST
  • ನಟಿ ರಚನಾ ಇದಕ್ಕೂ ಮೊದಲು ಧನ್ವೀರ್ ಗೌಡ ನಟನೆಯ 'ವಾಮನ' ಚಿತ್ರದಲ್ಲಿಯೂ ಕೂಡ ನಟಿಸಿದ್ದಾರೆ.
  • ಡೆವಿಲ್‌ ಚಿತ್ರತಂಡ "ನೆಲದ ಪ್ರತಿಭೆಗೆ ಮನ್ನಣೆ.. ಶುದ್ಧ ಕೌಶಲ್ಯಕ್ಕಾಗಿ ಗುರುತಿಸಲಾಗಿದೆ" ಎಂದು ಸೋಶಿಯಲ್‌ ಮಿಡಿಯಾದಲ್ಲಿ ಬರೆದುಕೊಂಡು ಈ ನಟಿಯನ್ನು ಸ್ವಾಗತಿಸಲಾಗಿದೆ.
  • ರಚನಾ ರೈ ಕಾಲೇಜು ದಿನಗಳಲ್ಲೇ ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಡುವುದರ ಜೊತೆಗೆ ಶ್ವಾನಗಳ ಕುರಿತು 'ಓ ಮೈ ಡಾಗ್' ಎನ್ನುವ ಪುಸ್ತಕ ಬರೆದಿದ್ದಾರೆ.
Devil: ಚಾಲೆಂಜಿಂಗ್‌ ಸ್ಟಾರ್‌ ʻಡೆವಿಲ್‌ ದಿ ಹೀರೋʼ ಚಿತ್ರಕ್ಕೆ ನಾಯಕಿ ಯಾರು ಗೊತ್ತೇ??  title=

ʻDevil The Heroʼ Film Heroine: ಸ್ಯಾಂಡಲ್‌ವುಡ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ʻಡೆವಿಲ್‌ ದಿ ಹೀರೋʼ  ಸಿನಿಮಾಗೆ ನಾಯಕಿ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ನಟ ದರ್ಶನ್‌ಗೆ ಜೋಡಿಯಾಗಿ ಮಂಗಳೂರು ಮೂಲದ ರಚನಾ ರೈ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಈ ನಟಿ ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ರಚನಾ ಇದಕ್ಕೂ ಮೊದಲು ಧನ್ವೀರ್ ಗೌಡ ನಟನೆಯ 'ವಾಮನ' ಚಿತ್ರದಲ್ಲಿಯೂ ಕೂಡ ನಟಿಸಿದ್ದಾರೆ.

ನಟಿ ರಚನಾ ಡೆವಿಲ್‌ ಸಿನಿಮಾಗೆ ನಾಯಕಿ ಎಂಬ ಮಾಹಿತಿ ಎರಡು ತಿಂಗಳ ಹಿಂದೆಯೇ  ಹೊರ ಬಂದಿತ್ತು. ಆದರೆ ಚಿತ್ರತಂಡ ಈ ವಿಚಾರ ಸುಳ್ಳು, ಚಿತ್ರದ ಬಗ್ಗೆ ಏನೇ ಅಪ್‌ಡೇಟ್ ಇದ್ದರೂ ನಾವೇ ತಿಳಿಸುತ್ತೇವೆ. ಯಾವುದೇ ವದಂತಿ ನಂಬಬೇಡಿ  ಎಂದು ಹೇಳಿದ್ದರು. ಈದೀಗ ಈ ಸಿನಿತಂಡವೇ ಅಧಿಕೃತವಾಗಿ ಮಾಹಿತಿಯನ್ನು ರಿವೀಲ್‌ ಮಾಡಿದೆ. ಡೆವಿಲ್‌ ಚಿತ್ರತಂಡ "ನೆಲದ ಪ್ರತಿಭೆಗೆ ಮನ್ನಣೆ.. ಶುದ್ಧ ಕೌಶಲ್ಯಕ್ಕಾಗಿ ಗುರುತಿಸಲಾಗಿದೆ" ಎಂದು ಸೋಶಿಯಲ್‌ ಮಿಡಿಯಾದಲ್ಲಿ ಬರೆದುಕೊಂಡು ಈ ನಟಿಯನ್ನು ಸ್ವಾಗತಿಸಲಾಗಿದೆ. 

 
 
 
 

 
 
 
 
 
 
 
 
 
 
 

A post shared by Vaishno Studios (@vaishnostudiosofficial)

ಇದನ್ನೂ ಓದಿ: Anushka Shetty: ಮದುವೆಗೆ ಸಜ್ಜಾಗುತ್ತಿರುವ ನಟಿ ಅನುಷ್ಕಾ ಶೆಟ್ಟಿ ನಿಜವಾದ ವಯಸ್ಸೆಷ್ಟು ಗೊತ್ತೇ !

ರಚನಾ ಡೆವಿಲ್‌ ಸಿನಿಮಾದ ಹೀರೋಯಿನ್‌ ಎಂಬ ವಿಷಯ ಈ ಹಿಂದೆ ಹರಿದಾಡಿದಾಗ ಆಕೆ ಯಾರು? ಹಿನ್ನೆಲೆ ಏನು? ಎಂದು ಡಿಬಾಸ್‌ ಫ್ಯಾನ್ಸ್‌  ಹುಡುಕಾಟ ನಡೆಸಿದ್ದರು. ತದನಂತರ ಈ ನಟಿಯ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗಿತ್ತು. ನಟಿ ರಚನಾ ರೈ ಪುತ್ತೂರಿನ ಹುಡುಗಿಯಾಗಿದ್ದು, ಈಕೆ ತಂದೆ ಪ್ರವೀಣ್ ಮತ್ತು ತಾಯಿ ಹಾರಾಡಿ ಶಾಲಾ ಶಿಕ್ಷಕಿ ಗಂಗಾ ರೈ. ಇನ್ನೂ ಈ ನಟಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದುಕೊಂಡಿದ್ದಾರೆ. 

ರಚನಾ ರೈ ಕಾಲೇಜು ದಿನಗಳಲ್ಲೇ ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಡುವುದರ ಜೊತೆಗೆ ಶ್ವಾನಗಳ ಕುರಿತು 'ಓ ಮೈ ಡಾಗ್' ಎನ್ನುವ ಪುಸ್ತಕ ಬರೆದಿದ್ದಾರೆ. ಅಷ್ಟು ಮಾತ್ರವಲ್ಲದೇ ಈ ನಟಿ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪ್ಲೇಯರ್ ಕೂಡ ಹೌದು. ಇತ್ತೀಚೆಗೆ 'ಡೆವಿಲ್' ಸಿನಿಮಾದ  ಎರಡನೇ ಶೆಡ್ಯೂಲ್ ಚಿತ್ರೀಕರಣ  ಪ್ರಾರಂಭವಾಗಿದ್ದು, ಕಳೆದ ಐದಾರು ದಿನಗಳಿಂದ ಬಾಲಿವುಡ್ ನಟ ಮಹೇಶ್ ಮಂಜ್ರೇಕರ್, ಅಚ್ಯುತ್‌ ಕುಮಾರ್ ಸೇರಿದಂತೆ ಒಂದಷ್ಟು ಕಲಾವಿದರು ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

 

Trending News