Bhagyalakshmi Kannada Serial Update: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ತಾಂಡವ್‌ ತನ್ನ ಹೆಂಡತಿ ಭಾಗ್ಯಾಳಿಗೆ ನೀನು ಮನೆ ಬಿಟ್ಟು ಹೋದರೆ ಎಲ್ಲವೂ ಸರಿ ಆಗಲಿದೆ. ನಿನ್ನಿಂದಲೇ ನಾನು ತಂದೆ ತಾಯಿಂದ ದೂರ ಇದ್ದೇನೆ, ನಿನ್ನ ಕಾರಣಕ್ಕೆ ಮಕ್ಕಳ ಪ್ರೀತಿ ಕಳೆದುಕೊಂಡೆ. ನನಗೆ ನೀನು ಇಷ್ಟವಿಲ್ಲ, ಇಷ್ಟು ವರ್ಷಗಳ ಕಾಲ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದೆ, ದಯವಿಟ್ಟು ನನಗೆ ಡಿವೋರ್ಸ್‌ ಕೊಡು ಎಂದು ಮನವಿ ಮಾಡುತ್ತಾನೆ.


COMMERCIAL BREAK
SCROLL TO CONTINUE READING

ತಾಂಡವ್‌ನ ಖಡಕ್‌ ಮಾತನ್ನು ಕೇಳಿದ ಭಾಗ್ಯಾ ಶಾಕ್‌ ಆಗಿ, ಅದೇ ಸಂದರ್ಭದಲ್ಲಿ, ತಾಂಡವ್‌ಗೆ ಭಾಗ್ಯ ಮನೆಯನ್ನು ನಿಭಾಯಿಸಬೇಕು ಎಂಬ ಕಂಡಿಷನ್‌ ಮೇರೆಗೆ  ಡಿವೋರ್ಸ್‌ ಕೊಡಲು ಒಪ್ಪಿಕೊಳ್ಳುತ್ತಾಳೆ. ಆಗ ಭಾಗ್ಯಾಳ ಮಾತು ಕೇಳಿದ ತಾಂಡವ್‌ ಖುಷಿಯಾದನು. ಅದೇ ವೇಳೆ ತಾಂಡವ್‌ ಹೊರಡುತ್ತಿದ್ದಂತೆ ಭಾಗ್ಯಾ ದೇವರಿಗೆ ಪೂಜೆ ಮಾಡಿ ಆರ್ಶಿವಾದ ಪಡೆಯುತ್ತಾಳೆ. ಭಾಗ್ಯ ದೇವರ ಮುಂದೆ "ನನಗೆ ನನ್ನ ಗಂಡ, ಅತ್ತೆ, ಮಾವ ಮಕ್ಕಳೊಂದಿಗೆ ಖುಷಿಯಿಂದ ಬದುಕಬೇಕೆಂಬ ಆಸೆ ಇದೆ. ಅದಕ್ಕೆ ನೀನು ಅವಕಾಶ ಮಾಡಿಕೊಡು. ಬದುಕಿರೋವರೆಗೂ ಗಂಡನ ಮನೆಯಲ್ಲಿದ್ದು ಸತ್ತ ನಂತರ ಮಾತ್ರ ನಮ್ಮ ಹೆಣ ಹೊರಗೆ ಬರಬೇಕು. ನಮ್ಮ ಅಪ್ಪ ಅಮ್ಮ ಕೂಡಾ ಇದನ್ನೇ ಹೇಳಿಕೊಟ್ಟಿರುವುದು, ಇದನ್ನೇ ನಿಜ ಎಂದು ನಾನೂ ನಂಬಿ ಬದುಕುತ್ತಿದ್ದೇನೆ. ಗಂಡ, ಮನೆ, ಮಕ್ಕಳನ್ನು ಹೊರತುಪಡಿಸಿಯೂ ಒಂದು ಜೀವನ ಇದೆ ಎಂದು ನನಗೆ ಗೊತ್ತಿಲ್ಲ, ಅದು ಇದ್ದರೂ ನನಗೆ ಆ ಜೀವನ ನೋಡಲು ಇಷ್ಟವಿಲ್ಲ, ನನ್ನ ಮನೆಯಲ್ಲಿ ನಾನು ನನ್ನ ಗಂಡ ಮಕ್ಕಳ ಜೊತೆ ಇರುವುದು ನನ್ನ ಹಕ್ಕು. ಎಲ್ಲರನ್ನೂ ಉಳಿಸಿಕೊಡು, ಈ ಸವಾಲಿನಲ್ಲಿ ನಾನು ಗೆಲ್ಲುವಂತೆ ಮಾಡಿ ನನ್ನ ನಂಬಿಕೆಯನ್ನು ಉಳಿಸಿಕೋ" ಎಂದು ಪ್ರಾರ್ಥಿಸುತ್ತಾಳೆ.


ಇದನ್ನೂ ಓದಿ: Chukki Thare: ಕಿರುತೆರೆಗೆ ಪದಾರ್ಪಣೆ ಮಾಡಿದ ಕನ್ನಡದ ಗಾಯಕ ನವೀನ್‌ ಸಜ್ಜು!


ತದನಂತರ ಭಾಗ್ಯಾ ಮನೆಗೆ ಬಂದ ತಕ್ಷಣವೇ ತನ್ನ ಬಟ್ಟೆಗಳನ್ನೆಲ್ಲಾ ಪ್ಯಾಕ್‌ ಮಾಡುತ್ತಾಳೆ. ಅದೇ ಸಮಯದಲ್ಲಿ ವಿಚಾರವನ್ನು ತಿಳಿದ ಸುನಂದಾ ಗಾಬರಿಯಾಗುತ್ತಾಳೆ. ನೀನು ಗಂಡನ ಮನೆ ಬಿಟ್ಟು ಎಲ್ಲಾದರೂ ಹೋಗು, ಆದರೆ ನಮ್ಮ ಮನೆಯಲ್ಲಿ ಮಾತ್ರ ಜಾಗವಿಲ್ಲ ಎಂದು  ಕಡ್ಡಿ ತುಂಡು ಮಾಡಿದಂತೆ ಹೇಳಿ ಬಿಡುತ್ತಾಳೆ. ಆಗ ಭಾಗ್ಯ "ನಾನು ಮನೆ ಬಿಟ್ಟು ಬರುತ್ತಿರುವುದು ನನ್ನ ಗಂಡನನ್ನು ಉಳಿಸಿಕೊಳ್ಳೋಕೆ, ಗಂಡ ಮನೆಯನ್ನು ಬಿಡಲು ನನಗೂ ಇಷ್ಟವಿಲ್ಲ, ನನಗೂ ಡಿವೋರ್ಸ್‌ ಕೊಡಲು ಇಷ್ಟವಿಲ್ಲ. ಒಂದೇ ಒಂದು ವಾರ ಮನೆಯಲ್ಲಿ ಇರಲು ಅವಕಾಶ ಕೊಡು, ನಾನು ಏನೋ ಮಾಡಲು ಹೊರಟಿದ್ದೇನೆ. ದಯವಿಟ್ಟು ಅದರ ಬಗ್ಗೆ ಏನೂ ಕೇಳಬೇಡ ಎಂದು ತನ್ನ ಅಮ್ಮನ  ಹತ್ತಿರ ಕೈ ಮುಗಿದು ಬೇಡಿಕೊಳ್ಳುತ್ತಾಳೆ.


ಭಾಗ್ಯ ಯಾವಾಗ ತಾನು ಡಿವೋರ್ಸ್‌ ಕೊಡಲು ರೆಡಿ ಎಂದು ಹೇಳುತ್ತಿದ್ದಂತೆ, ತಾಂಡವ್‌ ಖುಷಿಯಾಗಿ ಶ್ರೇಷ್ಠಾಗೆ ಕರೆ ಮಾಡುತ್ತಾನೆ. ತಾಂಡವ್‌ ಶ್ರೇಷ್ಠಾಗೆ "ನಿನಗೆ ಒಂದು ಗುಡ್‌ ನ್ಯೂಸ್. ಐಸ್‌ಕ್ರೀಮ್‌ ತಿನ್ನುತ್ತಾ ಆ ಗುಡ್‌ ನ್ಯೂಸ್‌ ಏನೆಂದು ಹೇಳುತ್ತೇನೆ, ಹಾಗೇ ಶಾಪಿಂಗ್‌ ಕೂಡಾ ಮಾಡಬೇಕು ಬಾ" ಎಂದು ಫೋನ್‌ ಕರೆಯಲ್ಲಿ ಹೇಳುತ್ತಾನೆ. ಇತ್ತ ಶ್ರೇಷ್ಠ ಶಾಪಿಂಗ್‌, ಗುಡ್‌ ನ್ಯೂಸ್‌ ಎಂಬ ಪದ ಕೇಳಿ ಸಂತೋಷ ಪಡುತ್ತಾಳೆ. ಬಳಿಕ ತಾಂಡವ್‌ ಜೊತೆಗೆ ಶ್ರೇಷ್ಠ ಶಾಪಿಂಗ್‌ಗೆ ಹೋದಾಗ, ಆತ ಗೊಂಬೆಗಳನ್ನು ಕೊಂಡುಕೊಳ್ಳುವುದನ್ನು ನೋಡಿ ಗೊಂದಲಗೊಳ್ಳುತ್ತಾಳೆ. ಆಗ ಶ್ರೇಷ್ಠ ತಾಂಡವ್‌ ಶಾಪಿಂಗ್‌ ಮಾಡುತ್ತಿರುವುದು ತನಗಾಗಿ ಅಲ್ಲ ಅವನ ಮಕ್ಕಳಿಗಾಗಿ ಎಂದು ತಿಳಿದು ಶ್ರೇಷ್ಠಾ ಬೇಸರ ಪಡುತ್ತಾಳೆ. ಹಾಗೆಯೇ ತಾಂಡವ್‌ ತನ್ನ ಮನೆಗೆ ವಾಪಸ್‌ ಹೋಗುತ್ತಿರುವ ವಿಷಯ ಗೊತ್ತಾದ ಮೇಲೆ ಶಾಕ್‌ ಆಗುತ್ತಾಳೆ. ಭಾಗ್ಯ ತನ್‌ ಅಮ್ಮನ ಮನಸ್ಸು ಬದಲಿಸಿ ತವರು ಮನೆಗೆ ಹೋಗಿ  ಅಲ್ಲಿ ಇರುತ್ತಾಳ? ಇನ್ನೊಂದೆಡೆ ತಾಂಡವ್‌ ಮಕ್ಕಳಿಗೆ ಗೊಂಬೆಗಳನ್ನು ಕೊಟ್ಟು ಒಲಿಸಿಕೊಳ್ಳುತ್ತಾನೆಂಬುದನ್ನು ಮುಂಬರುವ ಸಂಚಿಕೆಗಳನ್ನು ನೋಡಿದರೆ ತಿಳಿಯುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.