Chukki Thare: ಕಿರುತೆರೆಗೆ ಪದಾರ್ಪಣೆ ಮಾಡಿದ ಕನ್ನಡದ ಖ್ಯಾತ ಗಾಯಕ ನವೀನ್‌ ಸಜ್ಜು!

Naveen Sajju: ಕನ್ನಡದ ಹಿನ್ನೆಲೆ ಗಾಯಕ ನವೀನ್‌ ಸಜ್ಜು ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಬರುತ್ತಿರುವ 'ಚುಕ್ಕಿ ತಾರೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್‌ನ ಪ್ರೋಮೋ ಈಗಾಗಲೇ ರಿಲೀಸ್‌ ಆಗಿದ್ದು, ಇದರಲ್ಲಿ ಈ ಗಾಯಕ ಕಾಣಿಸಿಕೊಂಡಿದ್ದಾರೆ.  

Written by - Zee Kannada News Desk | Last Updated : Feb 15, 2024, 04:34 PM IST
  • 'ಕರಿಮಣಿ' ಧಾರಾವಾಹಿ ಜೊತೆಗೆ ಮತ್ತೊಂದು ಹೊಸ ಸೀರಿಯಲ್‌ ಅನೌನ್ಸ್ ಆಗಿದೆ
  • 'ಚುಕ್ಕಿ ತಾರೆ' ಧಾರಾವಾಹಿಯ ಪ್ರೋಮೋದಲ್ಲಿ ಕನ್ನಡದ ಹೆಮ್ಮೆಯ ಗಾಯಕ ನವೀನ್‌ ಸಜ್ಜು
  • ಪ್ರತಿಯೊಬ್ಬರಿಗೂ ನವೀನ್ ಸಜ್ಜು ಪಾತ್ರ ಏನಿರಬಹುದೆಂಬ ಕ್ಯೂರಿಯಾಸಿಟಿ ಮೂಡಿದೆ
Chukki Thare: ಕಿರುತೆರೆಗೆ ಪದಾರ್ಪಣೆ ಮಾಡಿದ ಕನ್ನಡದ ಖ್ಯಾತ ಗಾಯಕ ನವೀನ್‌ ಸಜ್ಜು! title=
ʼಚುಕ್ಕಿತಾರೆʼಯಲ್ಲಿ ನವೀನ್‌ ಸಜ್ಜು

 Naveen Sajju In Chukki Thare: ಕಲರ್ಸ್ ಕನ್ನಡ ವಾಹಿನಿಯಲ್ಲಿ  ಒಂದೊಂದೇ ಧಾರಾವಾಹಿಗಳ ಆಗಮನವಾಗುತ್ತಿದ್ದು, ವಿಭಿನ್ನ ಕಥೆಗಳನ್ನು ಹೊಂದಿರುತ್ತದೆ. ಈ ಚಾನೆಲ್‌ನಲ್ಲಿ ಹೆಚ್ಚು ಸೀರಿಯಲ್‌ಗಳನ್ನೇ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಟ್ರೆಂಡಿಂಗ್‌ನಲ್ಲಿರುವ ಹೆಸರಿನಲ್ಲೇ ಧಾರಾವಾಹಿಯೊಂದು ಸಿದ್ಧವಾಗಿದೆ. ಈಗಾಗಲೇ 'ಕರಿಮಣಿ' ಧಾರಾವಾಹಿ ಪ್ರೋಮೋದಲ್ಲಿಯೇ ಕುತೂಹಲವನ್ನು ಬಿತ್ತಿದ್ದು, ಇದರ ಜೊತೆಗೆ  ಮತ್ತೊಂದು ಹೊಸ ಸೀರಿಯಲ್‌ ಅನೌನ್ಸ್ ಆಗಿದೆ. ಅದೇ 'ಚುಕ್ಕಿ ತಾರೆ', ಇದರಲ್ಲಿ ನವೀನ್‌ ಸಜ್ಜು ಅಭಿನಯಿಸಲಿದ್ದಾರೆ.

ಹೌದು..  'ಚುಕ್ಕಿ ತಾರೆ' ಧಾರಾವಾಹಿಯ ಪ್ರೋಮೋವನ್ನು ವಾಹಿನಿಯವರು ಬಿಡುಗಡೆ ಮಾಡಿದ್ದಾರೆ. ಅದರದಲ್ಲಿ ಕನ್ನಡದ ಹೆಮ್ಮೆಯ ಗಾಯಕ ನವೀನ್‌ ಸಜ್ಜು ಕಾಣಿಸಿಕೊಂಡಿದ್ದು ವಿಶೇಷವಾಗಿದೆ. ಈ ಪ್ರೋಮೋದಲ್ಲಿ ಧೂಳು ಹಿಡಿದ ಹಳೆ ಕಾರು ನಿಂತಿದೆ. ಕಾರಿನ ಮುಂದೆ ಇಬ್ಬರು ಹುಡುಗಿಯರು ನಿಂತು, ತಮ್ಮಿಷ್ಟದ ಹೆಸರುಗಳನ್ನು ಬರೆದು ಸಂತೋಷವಾಗಿ ಕುಣಿದಿದ್ದಾರೆ. ಅದೇ ಸಮಯಕ್ಕೆ ನವೀನ್ ಸಜ್ಜು ಕಲರ್ ಫುಲ್ ಬಲೂನ್‌ಗಳನ್ನು ತಂದಾಗ ಮಕ್ಕಳು ಅಲ್ಲಿಂದ ಓಡಿದ್ದಾರೆ. ನವೀನ್ ಸಜ್ಜು ಕಾರಿನ ಮೇಲೆ 'ಚುಕ್ಕಿತಾರೆ' ಎಂಬ ಪದವನ್ನು ಬರೆದು, ನಗುತ್ತಾ ಮುಂದೆ ಸಾಗಿದ್ದಾರೆ'. 

ಇದನ್ನೂ ಓದಿ: Shakhahari: ರಂಗಾಯಣ ರಘು ಅಭಿನಯದ 'ಶಾಖಾಹಾರಿ' ರಿಲೀಸ್‌ಗೆ ಮುಹೂರ್ತ ಫಿಕ್ಸ್‌!

 
 
 
 
 

ಈ ಪ್ರೋಮೋ ನೋಡಿದಾಗ ಇದೊಂದು ಅಕ್ಕ-ತಂಗಿಯರ ಬಂಧವನ್ನು ಬೆಸೆಯುವಂತ ಧಾರಾವಾಹಿ ಎಂಬುದು ಅರ್ಥವಾಗುತ್ತದೆ. ಜೊತೆಗೆ ನವೀನ್ ಸಜ್ಜು ಕಾಣಿಸಿಕೊಂಡಿರುವ ಕಾರಣ ಕುತೂಹಲ ಮತ್ತಷ್ಟು ಹೆಚ್ಚಿದೆ. ಈತನ ಪಾತ್ರ ಏನಿರಬಹುದೆಂಬ ಕ್ಯೂರಿಯಾಸಿಟಿ ಎಲ್ಲರನ್ನೂ ಕಾಡುತ್ತಿದೆ. ಗಾಯಕನಾಗಿದ್ದ ನವೀನ್‌ ಸಜ್ಜುವಿನ ಪಾತ್ರವೇನು ಅನ್ನೋದು ನೆಟಿಜನ್ಸ್‌ಗೆ ದೊಡ್ಡ ಪ್ರಶ್ನೆಯಾಗಿದೆ.  ಚುಕ್ಕಿ ಹಾಗೂ ತಾರೆ ಎರಡು ಪದ ಒಂದೇ ಅಲ್ಲವಾ? ಎಂದು ಕೇಳುತ್ತಿದ್ದಾರೆ. ಕಥೆಗಾರರಿಗೂ ಈ ಎರಡು ಪದ ಒಂದೇ ಎನಿಸದೇ ಇರಲು ಸಾಧ್ಯವೇ ಇಲ್ಲ. ಸದ್ಯ ʼಚುಕ್ಕಿತಾರೆʼ ಒಂದೇ ಪದದಲ್ಲೂ ಏನೋ ಕಥೆಯನ್ನು ಹೆಣೆದಿರಬಹುದು.

ಇನ್ನೂ ನವೀನ್‌ ಸಜ್ಜು ಈ ಧಾರವಾಹಿಯ ಪ್ರೋಮೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿದ್ದು, ಕಾಮೆಂಟ್‌ ವಿಭಾಗದಲ್ಲಿ ಅನೇಕರು ಶುಭಾಶಯ ತಿಳಿಸಿದ್ದಾರೆ. ಈ ಪೈಕಿ ಒಬ್ಬರು ʼಶುಭಾಶಯಗಳು ಗೆಳೆಯ ಒಳ್ಳೆಯದಾಗಲಿ. ವಿಶೇಷವಾಗಿ ಸೂಪರ್ ಹಿಟ್ ಆಗಲಿʼ  ಎಂದು ಬರೆದರೆ, ಮತ್ತೊಬ್ಬರು ʼನವೀನ್ ಸಜ್ಜು ಅವ್ರೆ ನಿಮಗೆ ಒಳ್ಳೆದಾಗಲಿ, ಇನ್ನು ಹೆಚ್ಚೆಚ್ಚು ಅವಕಾಶಗಳು ಸಿಗ್ಲಿ, ಆಲ್ ದ ಬೆಸ್ಟ್ʼ ಅಂತಾ ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ʼನಿಮ್ಮ ಹೊಸ ಪ್ರಯತ್ನಕ್ಕೆ ಶುಭಾಶಯಗಳುʼ ಅಂತಾ ಹಾರೈಸಿದ್ದಾರೆ.

ಇದನ್ನೂ ಓದಿ: Sai Pallavi: ಅಮಿರ್​ ಖಾನ್ ಪುತ್ರನ ಜತೆ ಸಾಯಿ ಪಲ್ಲವಿ ಸುತ್ತಾಟ, ಫೋಟೋ ವೈರಲ್​

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

  

Trending News