Bhoomi Shetty : ಮೆಕಾನಿಕಲ್ ಇಂಜಿನಿಯರಿಂಗ್ ಓದಲು ಬೆಂಗಳೂರಿಗೆ ಬಂದ ನಟಿ ಭೂಮಿ ಶೆಟ್ಟಿ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಸಣ್ಣ ವಯಸ್ಸಿನಲ್ಲೇ ಭರತನಾಟ್ಯ ಮತ್ತು ಯಕ್ಷಗಾನದಲ್ಲಿ ಪರಿಣಿತಿ ಪಡೆದರು. ಹಲವು ನೃತ್ಯ ಕಾರ್ಯಕ್ರಮವನ್ನು ನೀಡಿದ್ದರು. ಸದ್ಯ ಭೂಮಿ ಶೆಟ್ಟಿ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಕಿನ್ನರಿ ಧಾರಾವಾಹಿಯಲ್ಲಿನ ಮಣಿ ಪಾತ್ರದ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಇವರು ತೆಲು ಸಿರೀಯಲ್ ಗಳಲ್ಲಿಯೂ ನಟಿಸಿದ್ದರು. ಆನಿಮೇಷನ್‌ ಶೀಕ್ಷಣ ಪಡೆದ ಇವರು ಹಲವಾರು ಕನ್ನಡ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಭೂಮಿಶೆಟ್ಟಿ ಲಂಭೋದರ ಸಿನಿಮಾದ ಮೂಲಕ ಚಂದನವನ ಪ್ರವೇಶಿಸಿದರು. 


ಬಳಿಕ ನಟಿ ಭೂಮಿ ಶೆಟ್ಟಿ ಕೋವಿಡ್‌ ಸಂದರ್ಭದಲ್ಲಿ ಇಕ್ಕಟ್‌ ಸಿನಿಮಾದಲ್ಲಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಜೊತೆಗೆ ಬಿಕ್‌ ಬಾಸ್‌ 7 ಸೀಸನ್‌ನಲ್ಲಿ 9ನೇ ಸ್ಪರ್ಧಿಯಾಗಿ ಭಾಗವಹಿಸಿದ್ದರು. ನಂತರ ಮಜಾಭಾರತ ಕಾಮಿಡಿ ಶೋ ನಿರೂಪಣೆಯನ್ನು ಮಾಡಿದ್ದರು. 


ಇದನ್ನೂ ಓದಿ-ಹೀಗೆ ಸಾಗಿತ್ತು ವಿಜಯ ರಾಘವೇಂದ್ರ - ಸ್ಪಂದನಾ ಬಾಳ ನೌಕೆ ! ಕ್ರೂರ ವಿಧಿ ಹೀಗಾಡಬಾರದಿತ್ತು


ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಕೊಡುವ ನಟಿ ತಮ್ಮ ಪ್ರಾಜೆಕ್ಟ್‌ ಬಗ್ಗೆ ಯಾವ ವಿಚಾರವನ್ನು ರಿವೀಲ್‌ ಮಾಡಿರಲಿಲ್ಲ. ಇದೀಗ ಅವರು ಯಾವ ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವುದು ಹೊರಬಿದ್ದಿದೆ. ವೈಟ್ ಲಿಫ್ಟ್ ಸೇರಿದಂತೆ ಜಿಮ್‌ನಲ್ಲಿ ಸಕತ್ ವರ್ಕೌಟ್ ಜೊತೆಗೆ ಭೂಮಿ ಬೈಕ್ ರೈಡ್ ಕೂಡ ಮಾಡುತ್ತಿದ್ದರು. ಸದ್ಯ ಫ್ಯಾನ್ಸ್‌ ಗೆಸ್‌ ಕೂಡಾ ಸರಿಯಾಗಿಯೇ ಇದೆ. ಅವರು ತಮ್ಮ ಮುಂದಿನ ಸಿನಿಮಾ ತಯಾರಿಯಲ್ಲಿದ್ದಾರೆ.


ಹೌದು ನಟಿ ಭೂಮಿ ಶೆಟ್ಟಿ ಮಾಲಾಶ್ರೀ ಕಮ್‌ ಬ್ಯಾಕ್‌ ಮಾಡಿದ ಚಿತ್ರದಲ್ಲಿ ಭೂಮಿ ಶೆಟ್ಟಿ ಕೂಡ ಬಣ್ಣ ಹಚ್ಚಿದ್ದಾರೆ. ಕಾದಂಬರಿ ಆಧಾರಿತ ಚಿತ್ರವಾದ 'ಕೆಂಡದ ಸೆರಗು' ಚಿತ್ರದಲ್ಲಿನ ಕುಸ್ತಿಪಟು ಪಾತ್ರಕ್ಕೆ ಭೂಮಿ ಜೀವ ತುಂಬಿದ್ದಾರೆ. ಸದ್ಯ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ರಿಲೀಸ್‌ ಆಗಲಿದೆ. ಕುಸ್ತಿಪಟು ಪಾತ್ರದಲ್ಲಿ ಭೂಮಿ ಖಡಕ್‌ ಆಗಿ ಕಾಣಿಸಿಕೊಂಡಿದ್ದು, ಈ ಚಿತ್ರ ಎಲ್ಲರ ಮನಸ್ಸನ್ನು ಗೆಲ್ಲೋದು ಕನ್ಫರ್ಮ್.‌ 


ಇದನ್ನೂ ಓದಿ-ಚಿನ್ನಾರಿ ಮುತ್ತನ ಮುತ್ತಿನಂತಾ ಮಡದಿ "ಸ್ಪಂದನಾ"


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.