ಚಿನ್ನಾರಿ ಮುತ್ತನ ಮುತ್ತಿನಂತಾ ಮಡದಿ "ಸ್ಪಂದನಾ"

                                

Actor Vijay Raghavendra's Wife Spandana No More: ಸ್ಯಾಂಡಲ್ವುಡ್ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನಾ ವಿದೇಶ ಪ್ರವಾಸಕ್ಕೆ ತೆರಳಿದ್ದ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /12

ಚಂದನವನದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ಹೃದಯಾಘಾತದಿಂದಾಗಿ ಇಹಲೋಕ ತ್ಯಜಿಸಿದ್ದಾರೆ. 2007 ಆಗಸ್ಟ್‌ 26ರಂದು ವಿಜಯ್ ಕೈ ಹಿಡಿದಿದ್ದ ಸ್ಪಂದನಾ ತಮ್ಮ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಇನ್ನೂ ಕೇವಲ 19ದಿನಗಳು ಬಾಕಿ ಇರುವಾಗಲೇ ಅವರನ್ನಗಲಿದ್ದಾರೆ.  Photo Credit: Instagram@raagu.vijay

2 /12

ಮೊದಲಿಗೆ 2004ರಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಾಫಿ ಡೇನಲ್ಲಿ ಬಿ.ಕೆ. ಶಿವರಾಮ್ ಪುತ್ರಿ ಸ್ಪಂದನಾ ಅವರನ್ನು ಭೇಟಿಯಾಗಿದ್ದ ವಿಜಯ್ ರಾಘವೇಂದ್ರ ಮೊದಲ ಭೇಟಿಯಲ್ಲೇ ಫಿದಾ ಆಗಿದ್ರಂತೆ.  Photo Credit: Instagram@raagu.vijay

3 /12

ಮೂರು ವರ್ಷಗಳ ಬಳಿಕ ಮತ್ತೆ ಅದೇ ಕಾಫಿ ಡೇನಲ್ಲಿ ಸ್ಪಂದನಾ ಅವರನ್ನು ಭೇಟಿಯಾದಾಗ ಈ ಚಾನ್ಸ್ ಮಿಸ್ ಮಾಡಬಾರದೆಂದು ಧೈರ್ಯವಾಗಿ ಹೋಗಿ ಮಾತನಾಡಿಸಿದ್ದರಂತೆ ಚಿನ್ನಾರಿ ಮುತ್ತ. ಅಂದಿನಿಂದ ಒಳ್ಳೆಯ ಸ್ನೇಹಿತರಾಗಿದ್ದ ಇಬ್ಬರ ನಡುವೆ ಬಳಿಕ ಪ್ರೇಮಾಂಕುರವಾಗಿತ್ತು. ತಮ್ಮ ಪ್ರೀತಿಯ ವಿಚಾರವನ್ನು ಮನೆಯವರಿಗೆ ತಿಳಿಸಿ ಮನೆಯವರನ್ನೂ ಒಪ್ಪಿಸಿದ್ದರು.   Photo Credit: Instagram@raagu.vijay

4 /12

ಈ ಜೋಡಿ 2007ರ ಏಪ್ರಿಲ್ 20ರಂದು ನಿಶ್ಚಿತಾರ್ಥವಾಗಿತ್ತು.  ಅದೇ ವರ್ಷ 2007 ಆಗಸ್ಟ್‌ 26ರಂದು ವಿಜಯ್ ರಾಘವೇಂದ್ರ- ಸ್ಪಂದನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  Photo Credit: Instagram@raagu.vijay

5 /12

ಕಳೆದ ವರ್ಷ ತಮ್ಮ ನಿಶ್ಚಿತಾರ್ಥದ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಮ್ಮ ENGAGEMENT ಆದ ದಿನ… ಇಂದಿಗೆ ಹದಿನೈದು ವರ್ಷಗಳು ಎಂದು ಬರೆದು "ಬೇರೆ ಎಉ ಬೇಕು ನೀನು ಇರುವಾಗ" ಎಂದು  ವಿಜಯ್ ರಾಘವೇಂದ್ರ  ಈ ಫೋಟೋ ಶೇರ್ ಮಾಡಿದ್ದರು.  Photo Credit: Instagram@raagu.vijay

6 /12

ಈ ಜೋಡಿಗೆ ಶೌರ್ಯ ಎಂಬ ಮುದ್ದಾದ ಮಗನೂ ಇದ್ದಾನೆ.  Photo Credit: Instagram@raagu.vijay

7 /12

ಚಿನ್ನಾರಿ ಮುತ್ತನ ಮುತ್ತಿನಂತಾ ಮಡದಿ "ಸ್ಪಂದನಾ"  Photo Credit: Instagram@raagu.vijay

8 /12

ತಮ್ಮ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಇನ್ನೂ ಕೇವಲ 19ದಿನಗಳು ಬಾಕಿ ಇರುವಾಗಲೇ ಚಿನ್ನಾರಿ ಮುತ್ತನ ಮುತ್ತಿನಂತಾ ಮಡದಿ "ಸ್ಪಂದನಾ"  ಅವರನ್ನು ಅಗಲಿದ್ದಾರೆ.  Photo Credit: Instagram@raagu.vijay

9 /12

ನನ್ನ ಬದುಕಿಗೆ ನಿನ್ನ ನಗೆಯೇ ಭೂಷಣ… ಚಿನ್ನ… ನೀನನ್ನ ನಗುವಿಗೆ ಕಾರಣ 😍❤️😇 HAPPY WEDDING ANNIVERSARY… I LOVE YOU CHINNA!  ಎಂದು ವಿಜಯ್ ರಾಘವೇಂದ್ರ ಆಗಸ್ಟ್  26, 2021ರಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಈ ಫೋಟೋ ಹಂಚಿಕೊಂಡಿದ್ದರು.  Photo Credit: Instagram@raagu.vijay

10 /12

ಹಲವು ಸಂದರ್ಶನಗಳಲ್ಲಿ ತಮ್ಮ ಪತ್ನಿ ಸ್ಪಂದನಾ ಬಗ್ಗೆ ಹೇಳಿಕೊಂಡಿದ್ದ ವಿಜಯ್ ಅವರು ತುಂಬಾ ಸೌಮ್ಯ ಸ್ವಭಾವದವರು ಎಂದಿದ್ದರು.    Photo Credit: Instagram@raagu.vijay

11 /12

ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ವಿಜಯ ರಾಘವೇಂದ್ರ ಆ ಸಂದರ್ಭದಲ್ಲಿ  ತಮ್ಮ ಪತ್ನಿ ಸ್ಪಂದನಾ ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದರು ಎಂಬ ಬಗ್ಗೆ ಇಡೀ ಕರುನಾಡಿಗೆ ತಿಳಿದಿತ್ತು.   Photo Credit: Instagram@raagu.vijay

12 /12

ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ ಜೀವನ... ಸಾಗದು..! ಎನ್ನುತ್ತಿದ್ದ ಜೋಡಿಯ ಜೀವನದಲ್ಲಿ ವಿಧಿ ಬೇರೆಯದ್ದೇ ಆಟವಾಡಿದೆ. ಮುದ್ದಿನ ಮಡದಿ ಸ್ಪಂದನಾ ಅವರ ಆಗಳಿಕೆಯನ್ನು ಭರಿಸುವ ಶಕ್ತಿಯನ್ನು ಆ ದೇವರು ವಿಜಯ್ ರಾಘವೇಂದ್ರ ಮತ್ತು ಅವರ ಕುಟುಂಬಕ್ಕೆ ನೀಡಲಿ.  Photo Credit: Instagram@raagu.vijay