Bengaluru International Film Festival - ಸಿನಿ ಪ್ರೇಮಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಅದರಲ್ಲೂ ಸಿಲಿಕಾನ್‌ ಸಿಟಿಯಲ್ಲಿರುವ ಸಿನಿಮಾ ಪ್ರೇಮಿಗಳಿಗೆ ಡಬಲ್‌ ಧಮಾಕ..! ಏನಪ್ಪ ಅಂದ್ರೆ 13ನೇ ಬೆಂಗಳೂರು (Bengaluru) ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ಸಿಕ್ಕಿದ್ದು ಜಗತ್ತಿನ ಮೂಲೆ ಮೂಲೆಯಲ್ಲಿ ಸದ್ದು ಮಾಡುತ್ತಿರುವ ಸಿನಿಮಾಗಳು ಈಗ ಬೆಂಗಳೂರಿನಲ್ಲೂ ಪ್ರದರ್ಶನಗೊಳ್ಳಲಿವೆ.


COMMERCIAL BREAK
SCROLL TO CONTINUE READING

ಮಾರ್ಚ್‌ 10ರವರೆಗೂ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ಈ ಬಾರಿ 55  ರಾಷ್ಟ್ರಗಳ 200 ಚಲನಚಿತ್ರಗಳು ತೆರೆಯ ಮೇಲೆ ಅಬ್ಬರಿಸಲಿವೆ. ಪ್ರಾದೇಶಿಕ (Regional Award),  ರಾಷ್ಟ್ರೀಯ (National Award) ಹಾಗೂ ಅಂತಾರಾಷ್ಟ್ರೀಯ (International Award) ಪ್ರಶಸ್ತಿ ವಿಜೇತ ಚಿತ್ರಗಳನ್ನು ಸೆಲೆಕ್ಟ್‌ ಮಾಡಲಾಗಿದೆ. ಇದಕ್ಕೋಸ್ಕರ ಒರಾಯನ್ ಮಾಲ್‌ನಲ್ಲಿ 11 ಸ್ಕ್ರೀನ್‌ಗಳನ್ನು ಮೀಸಲಿಡಲಾಗಿದೆ.


ಇದನ್ನೂ ಓದಿ-ಕನ್ನಡದಲ್ಲೂ ಮಿಂಚಿದ 'ವಿಕ್ರಾಂತ್ ರೋಣ'..! ಕಿಚ್ಚ ಸುದೀಪ್‌ ಎಂಟ್ರಿ ಹೇಗಿದೆ ಗೊತ್ತಾ..?


ಹಲವೆಡೆ ವ್ಯವಸ್ಥೆ (Sandalwood News)
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೇವಲ ಸಿನಿಮಾ ಪ್ರದರ್ಶನ ಮಾತ್ರವಲ್ಲದೆ, ನಿರ್ದೇಶಕರು, ಕಲಾವಿದರು, ತಂತ್ರಜ್ಞರೊಂದಿಗೆ ಸಂವಾದ, ಸಂದರ್ಶನ ನಡೆಯಲಿದೆ. ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಡಾ.ರಾಜ್ ಭವನ ಮತ್ತು ಸುಚಿತ್ರಾ ಫಿಲಂ ಸೊಸೈಟಿಯಲ್ಲೂ ಸಿನಿಮಾಗಳು ಸದ್ದು ಮಾಡಲಿವೆ.


ಇದನ್ನೂ ಓದಿ-Rishab Shetty: ನಟ ರಿಷಬ್ ಶೆಟ್ಟಿ ಮನೆಗೆ ಕಾಲಿಟ್ಟ ಮುದ್ದಾದ ಪುಟಾಣಿ 'ಲಕ್ಷ್ಮೀ'


ಒಟ್ಟಾರೆ ಹೇಳೋದಾದರೆ ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಲವು ವಿಶೇಷತೆಗಳನ್ನ ಹೊಂದಿದ್ದು, ಸಾಧ್ಯವಾದರೆ ತಪ್ಪದೇ ಒಮ್ಮೆ ವಿಸಿಟ್‌ ಕೊಟ್ಟು ಒಳ್ಳೆ ಒಳ್ಳೆ ಸಿನಿಮಾಗಳನ್ನ ಕಣ್ತುಂಬಿಕೊಳ್ಳಿ.


ಇದನ್ನೂ ಓದಿ-Kajol And Kareena Kapoor: ನಡುರಸ್ತೆಯಲ್ಲಿಯೇ ಮುಖಾಮುಖಿಯಾದ ಕಾಜೋಲ್-ಕರೀನಾ, ಮುಂದೇನಾಯ್ತು ತಿಳಿಯಲು WATCH VIDEO


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.