Money Laundering Case: ಮಲಯಾಳಂ ನಟ ಮೋಹನ್ ಲಾಲ್‍ಗೆ ಇಡಿ ಸಮನ್ಸ್
ಅಕ್ರಮ ಹಣ ವರ್ಗಾವಣೆ ಪ್ರಕರಣ ಹಿನ್ನೆಲೆ ಮೋಹನ್‌ಲಾಲ್‌ಗೆ ಮುಂದಿನ ವಾರ ಕೊಚ್ಚಿಯ ತಮ್ಮ ಕಚೇರಿಯಲ್ಲಿ ಇಡಿ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.
ತಿರುವನಂತಪುರಂ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಮಾಲಿವುಡ್ ಖ್ಯಾತ ನಟ ಮೋಹನ್ ಲಾಲ್‍ಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಹಿನ್ನೆಲೆ ಮೋಹನ್‌ಲಾಲ್‌ಗೆ ಮುಂದಿನ ವಾರ ಕೊಚ್ಚಿಯ ತಮ್ಮ ಕಚೇರಿಯಲ್ಲಿ ಇಡಿ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಪುರಾತನ ವಸ್ತುಗಳ ಡೀಲರ್ ಮತ್ತು ವಂಚಕ ಮಾನ್ಸನ್ ಮಾವುಂಕಲ್‍ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ತನಿಖೆಯ ಕಾರಣ ಅಧಿಕಾರಿಗಳು ಅವರನ್ನು ಪ್ರಶ್ನಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಎದುರು ಪ್ರಶ್ನೆ ಪತ್ರಿಕೆ ಇಟ್ಟ ತೆಲಂಗಾಣ ಸಚಿವ..!
ಪುರಾತನ ವಸ್ತುಗಳ ಹೆಸರಿನಲ್ಲಿ ಕೇರಳದ ವ್ಯಾಪಾರಿ ಮಾನ್ಸನ್ ಮಾವುಂಕಲ್ ಅನೇಕರಿಗೆ ವಂಚಿಸಿದ್ದಾನೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆತನ ವಿರುದ್ಧ ತನಿಖೆ ನಡೆಯುತ್ತಿದೆ. ಇದೇ ಪ್ರಕರಣ ಸಂಬಂಧ ಮೋಹನ್ ಲಾಲ್‍ಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಪುರಾತನ ಮತ್ತು ಅಪರೂಪದ ವಸ್ತುಗಳನ್ನು ಹೊಂದಿದ್ದೇನೆಂದು ಮಾನ್ಸನ್ ಮಾವುಂಕಲ್ ಅನೇಕರಿಗೆ ವಂಚಿಸಿದ್ದಾನೆ. ಆತನ ವಿರುದ್ಧ ಈಗಾಗಲೇ ಅನೇಕ ದೂರುಗಳು ದಾಖಲಾಗಿವೆ. 2021ರ ಸೆಪ್ಟೆಂಬರ್‌ನಲ್ಲಿ 10 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಕೇರಳದ ಕ್ರೈಂ ಬ್ರ್ಯಾಂಚ್ ಪೊಲೀಸರು ಮಾವುಂಕಲ್‍ನನ್ನು ಬಂಧಿಸಿದ್ದರು. ನಟ ಮೋಹನ್ ಲಾಲ್ ಅವರು ಈತನ ಕೇರಳ ನಿವಾಸಕ್ಕೆ ಒಮ್ಮೆ ಭೇಟಿ ನೀಡಿದ್ದರು ಎಂದು ಹೇಳಲಾಗಿದೆ.ಆದರೆ, ಅವರ ಭೇಟಿಯ ಉದ್ದೇಶವೇನು ಎಂಬುದು ತಿಳಿದುಬಂದಿರಲಿಲ್ಲ. ಇದು ಈಗ ಮಲಯಾಳಂ ನಟನಿಗೆ ಸಂಕಷ್ಟ ತಂದೊಡ್ಡಿದೆ.
ಇದನ್ನೂ ಓದಿ: ಹಿಂದಿ ಭಾಷೆಯ ಪರವಾಗಿ ಬ್ಯಾಟ್ ಬೀಸಿದ ಶಿವಸೇನಾ..!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.