ಯಂಗ್ ಟೈಗರ್ ಬರ್ತ್ ಡೇಗೆ ಡಬ್ಬಲ್ ಧಮಾಕಾ, ತಾರಕ್ ಹುಟ್ಟುಹಬ್ಬದ ದಿನವೇ ಜೀ5 OTTಗೆ RRR ಎಂಟ್ರಿ

ಕನ್ನಡ, ತಮಿಳು, ಹಿಂದಿ,‌ ಮಲಯಾಳಂ, ಮರಾಠಿ, ಗುಜರಾತಿ, ಬೆಂಗಾಲಿ ಹೀಗೆ ನಾನಾ ಭಾಷೆಗಳ‌, ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳನ್ನು ಚಿತ್ರಪ್ರೇಮಿಗಳ  ಹಾಕುತ್ತಿರುವ ಪ್ರತಿಷ್ಠಿತ ಒಟಿಟಿ ಸಂಸ್ಥೆ ಜೀ5 ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ RRR ಚಿತ್ರವನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸುತ್ತಿದೆ.

Written by - Chetana Devarmani | Last Updated : May 13, 2022, 04:21 PM IST
  • ಯಂಗ್ ಟೈಗರ್ ಬರ್ತ್ ಡೇಗೆ ಡಬ್ಬಲ್ ಧಮಾಕಾ
  • ತಾರಕ್ ಹುಟ್ಟುಹಬ್ಬದ ದಿನವೇ ಜೀ5 OTTಗೆ RRR ಎಂಟ್ರಿ
  • RRR ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವುದು ತಾರಕ್ ಫ್ಯಾನ್ಸ್ ಗೆ ಡಬ್ಬಲ್ ಖುಷಿ
ಯಂಗ್ ಟೈಗರ್ ಬರ್ತ್ ಡೇಗೆ ಡಬ್ಬಲ್ ಧಮಾಕಾ, ತಾರಕ್ ಹುಟ್ಟುಹಬ್ಬದ ದಿನವೇ ಜೀ5 OTTಗೆ RRR ಎಂಟ್ರಿ   title=
ತ್ರಿಬಲ್ ಆರ್ ಸಿನಿಮಾ

ಕನ್ನಡ, ತಮಿಳು, ಹಿಂದಿ,‌ ಮಲಯಾಳಂ, ಮರಾಠಿ, ಗುಜರಾತಿ, ಬೆಂಗಾಲಿ ಹೀಗೆ ನಾನಾ ಭಾಷೆಗಳ‌, ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳನ್ನು ಚಿತ್ರಪ್ರೇಮಿಗಳ ಮಡಿಲಿಗೆ ಹಾಕುತ್ತಿರುವ ಪ್ರತಿಷ್ಠಿತ ಒಟಿಟಿ ಸಂಸ್ಥೆ ಜೀ5 ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ RRR ಚಿತ್ರವನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸುತ್ತಿದೆ.

ಇದನ್ನೂ ಓದಿ: ದಕ್ಷಿಣದ ಈ ನಟಿಗಾಗಿ ಸಿನಿಮಾ ನಿರ್ಮಿಸಲಿದ್ದಾರೆ ಎಂ.ಎಸ್‌.ಧೋನಿ!

ತಾರಕ್ ಬರ್ತ್ ಡೇಗೆ RRR: 

ಎಸ್.ಎಸ್.ರಾಜಮೌಳಿ, ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ಮೆಗಾ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಆರ್‌ಆರ್‌ಆರ್ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದು, 1100 ಕೋಟಿ ಹಣ ಲೂಟಿ ಮಾಡಿತ್ತು. ರಾಮ್-ಭೀಮ್ ಪವರ್‌ಫುಲ್ ಆಕ್ಟಿಂಗ್‌ಗೆ ಸಿನಿ ಪ್ರೇಕ್ಷಕರು ಜೈಕಾರ ಹಾಕಿದ್ದರು. ಮಾರ್ಚ್ 24ರಂದು ವರ್ಲ್ಡ್ ವೈಡ್ ರಿಲೀಸ್ ಆಗಿದ್ದ ರೌದ್ರ, ರಣ, ರುಧೀರ ಸಿನಿಮಾ ಬೆಳ್ಳಿ ತೆರೆಯಲ್ಲಿ ಅಬ್ಬರಿಸಿ, ಬೊಬ್ಬಿರಿದಿತ್ತು. ಈಗ ಈ ಸಿನಿಮಾ ಜೀ5 ಒಟಿಟಿಗೆ ಎಂಟ್ರಿ ಕೊಡ್ತಿದೆ. ವಿಶೇಷ ಅಂದ್ರೆ ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬದ ದಿನವೇ ಅಂದ್ರೆ ಮೇ 20ಕ್ಕೆ ತ್ರಿಬಲ್ ಆರ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವುದು ತಾರಕ್ ಫ್ಯಾನ್ಸ್‌ಗೆ ಡಬ್ಬಲ್ ಖುಷಿ ಕೊಟ್ಟಿದೆ.

ಹೊಸ ಟ್ರೇಲರ್ ರಿಲೀಸ್: ತ್ರಿಬಲ್ ಆರ್ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ಸ್ವತಃ ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ಡಬ್ ಮಾಡಿದ್ದರು. ಇದೀಗ ಜೀ5 ಒಟಿಟಿಗೆ ಎಂಟ್ರಿ ಕೊಡ್ತಿರುವ ಹಿನ್ನೆಲೆ ಆರ್ ಆರ್ ಆರ್ ಸಿನಿಮಾದ ನಯಾ ಟ್ರೇಲರ್ ನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅನಾವರಣ ಮಾಡಿದ್ದಾರೆ.

ಇದನ್ನೂ ಓದಿ: ಸಿನಿಪ್ರಿಯರೇ... ನಿಮ್ಮ ಫೇವರೇಟ್‌ ʼPVRʼ ಬಗ್ಗೆ ಇಲ್ಲಿದೆ ನೋಡಿ ಸ್ಪೆಷಲ್‌ ವರದಿ

ಆರ್ ಆರ್ ಆರ್ ಸಿನಿಮಾ ಯಶಸ್ವಿಯಾಗಿ ಐವತ್ತು ದಿನ ಕಂಪ್ಲೀಟ್ ಮಾಡಿದ್ದು, ಇದೇ‌ ಖುಷಿಯಲ್ಲಿರುವ ಚಿತ್ರತಂಡ ಒಟಿಟಿ ಬಿಡುಗಡೆ ದಿನಾಂಕ ರಿವೀಲ್ ಮಾಡಿದೆ. ಮೇ20 ರಿಂದ, ಜೀ5ನಲ್ಲಿ RRR ಸಿನಿಮಾ ಪ್ರೀಮಿಯರ್ ಆಗ್ತಿದೆ. 4k ಕ್ವಾಲಿಟಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. 

RRR ಸಿನಿಮಾವನ್ನು ಮನೆ ಮನಗಳಿಗೆ ತಲುಪಿಸುವ ಮೂಲಕ ಜೀ5 ಮತ್ತೊಮ್ಮೆ ಮನರಂಜನೆಯ ರಸದೌತಣವನ್ನು ಪ್ರೇಕ್ಷಕರಿಗೆ ನೀಡ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News