ಮುಂಬೈ: Bigg Boss 13 winner Siddharth Shukla- ಕಿರುತೆರೆಯ ಪ್ರಸಿದ್ಧ ನಟ ಮತ್ತು ಬಿಗ್ ಬಾಸ್ 13 ರ ವಿಜೇತ ಸಿದ್ಧಾರ್ಥ್ ಶುಕ್ಲಾ (Siddharth Shukla) ತಮ್ಮ 40ನೇ ವಯಸ್ಸಿನಲ್ಲಿಯೇ ವಿಧಿವಶರಾಗಿದ್ದಾರೆ. ದೂರದರ್ಶನ ಮತ್ತು ಚಲನಚಿತ್ರ ನಟ ಸಿದ್ಧಾರ್ಥ್ ಶುಕ್ಲಾ , ದೀರ್ಘಾವಧಿಯ ಟಿವಿ ಕಾರ್ಯಕ್ರಮ ಬಾಲಿಕಾ ವಧು ಮತ್ತು ಬಿಗ್ ಬಾಸ್ 13 ರ ವಿಜೇತರಾಗಿ ಹೆಸರುವಾಸಿಯಾಗಿದ್ದು, ಗುರುವಾರ ನಿಧನರಾದರು ಎಂದು ಇಲ್ಲಿನ ಕೂಪರ್ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 


Siddharth Shukla) ಅವರು ಬೆಳಿಗ್ಗೆ ಭಾರೀ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು ಎಂದು ಕೂಪರ್ ಆಸ್ಪತ್ರೆಯ ಹಿರಿಯ ಅಧಿಕಾರಿ ಪಿಟಿಐಗೆ ತಿಳಿಸಿದರು. ಮೃತ ಸಿದ್ಧಾರ್ಥ್ ಶುಕ್ಲಾ ಅವರು ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ- Viral Video : ಹೀಗೂ ಇದಾವ ಡೆನಿಮ್ ಜಾಕೆಟ್ : ಇದು ಬಾಲಿವುಡ್ ನಟಿ ಉರ್ಫಿ ಜಾವೇದ್ ಫ್ಯಾಷನ್ 


ಮಾಡೆಲಿಂಗ್‌ನೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿದರು, ಬಾಲಿವುಡ್‌ನಲ್ಲಿಯೂ ಪ್ರಾಬಲ್ಯ ಸಾಧಿಸಿದರು:
12 ಡಿಸೆಂಬರ್ 1980 ರಂದು ಮುಂಬೈನಲ್ಲಿ (Mumbai) ಜನಿಸಿದ ಸಿದ್ಧಾರ್ಥ್ ಶುಕ್ಲಾ ಮಾಡೆಲ್ (Model) ಆಗಿ ವೃತ್ತಿ ಆರಂಭಿಸಿದರು. ಸಿದ್ಧಾರ್ಥ್ ಶುಕ್ಲಾ 2008 ರ ಬಾಬುಲ್ ಕಾ ಆಂಗನ್ ಚೂಟೇ ನಾ ಕಾರ್ಯಕ್ರಮದ ಪ್ರಮುಖ ಪಾತ್ರದೊಂದಿಗೆ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ರಿಯಾಲಿಟಿ ಶೋಗಳಾದ ಬಿಗ್ ಬಾಸ್ 13 (Bigg Boss-13) ಮತ್ತು ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 7ರ ವಿಜೇತರಾಗಿ ಹೊರಹೊಮ್ಮಿದರು. ಅದಾಗ್ಯೂ ಬಾಲಿಕಾ ವಧು ಧಾರಾವಾಹಿಯಿಂದ ಅವರು ಮನೆ ಮಾತಾಗಿದ್ದರು.


ಇದನ್ನೂ ಓದಿ- Drugs Case: Arman Kohliಗೆ 14 ನ್ಯಾಯಾಂಗ ಬಂಧನ, ನಿವಾಸದಲ್ಲಿ ಕೊಕೇನ್ ಪತ್ತೆಯಾಗಿತ್ತು


ಟಿವಿ ಉದ್ಯಮದ ಯಶಸ್ಸಿನ ಬಳಿಕ ಸಿದ್ಧಾರ್ಥ್ ಶುಕ್ಲಾ ಬಾಲಿವುಡ್ ಕಡೆಗೆ ಮನೆ ಮಾಡಿದ್ದರು. ಅವರು 2014 ರ ಹಂಪಿ ಶರ್ಮಾ ಕಿ ದುಲ್ಹಾನಿಯಾ ಚಿತ್ರದಲ್ಲಿ ಕಾಣಿಸಿಕೊಂಡರು. ಅದೇ ವರ್ಷದಲ್ಲಿ, ಬ್ರೋಕನ್ ಬಟ್ ಬ್ಯೂಟಿಫುಲ್ ಎಂಬ ಅವರ ವೆಬ್ ಸರಣಿಯು ಸಾಕಷ್ಟು ಸದ್ದು ಮಾಡಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ