ನವದೆಹಲಿ: ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ(Priyanka Chopra) ಜೊನಾಸ್ ಸದ್ಯ ಹಾಲಿವುಡ್ ಸಿನಿಮಾ, ವೆಬ್ ಸರಣಿಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಹಾಲಿವುಡ್ ಸಿನಿಮಾಗಳ ಶೂಟಿಂಗ್ ವೇಳೆ ನಟ-ನಟಿಯರು ಸೇರಿದಂತೆ ಸಿನಿಮಾ ಕಲಾವಿದರ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ ನಟಿ ಪ್ರಿಯಾಂಕಾ ಚೋಪ್ರಾರಿಗೆ ಚಿತ್ರೀಕರಣದ ವೇಳೆ ಗಾಯಗಳಾಗಿವೆ. ಸ್ವತಃ ಈ ವಿಷಯವನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಅವರೇ ಹಂಚಿಕೊಂಡಿದ್ದಾರೆ.
ಹೌದು, ಪ್ರಿಯಾಂಕಾ ಚೋಪ್ರಾ(Priyanka Chopra) ಸದ್ಯ ಹಾಲಿವುಡ್ನ ಬಿಗ್ ಬಜೆಟ್ನ ವೆಬ್ ಸರಣಿ ‘ಸಿಟಾಡೆಲ್’(Citadel)ನಲ್ಲಿ ನಟಿಸುತ್ತಿದ್ದಾರೆ. ಈ ವೆಬ್ ಸರಣಿಯಲ್ಲಿ ಪ್ರಿಯಾಂಕಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಚಿತ್ರೀಕರಣದ ವೇಳೆ ಪ್ರಿಯಾಂಕಾರಿಗೆ ಗಾಯಗಳಾಗಿವೆ. ಪ್ರಿಯಾಂಕಾರ ಎಡಹುಬ್ಬು ಕಟ್ ಆಗಿ ತೀವ್ರ ರಕ್ತಸ್ರಾವವಾಗಿರುವುದನ್ನು ನಾವು ಕಾಣಬಹುದು. ತಮಗೆ ಗಾಯವಾಗಿರುವ ಫೋಟೋಗಳನ್ನು ಹಂಚಿಕೊಂಡಿರುವ ನಟಿ ಮುಖದ ಮೇಲೆ ಆಗಿರುವ ಗಾಯಗಳ ಬಗ್ಗೆ ಅಭಿಮಾನಿಗಳಿಗೆ ಪ್ರಶ್ನೆ ಕೇಳಿದ್ದಾರೆ.
ಇದನ್ನೂ ಓದಿ: Viral Video: ಸೋದರಸಂಬಂಧಿ ಮದುವೆಯಲ್ಲಿ ಪತಿ ಜೊತೆ ಸಖತ್ ಡ್ಯಾನ್ಸ್ ಮಾಡಿದ ಐಶ್ವರ್ಯ ರೈ..!
ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡಿರುವ ನಟಿ ಪ್ರಿಯಾಂಕಾ, ‘ನನ್ನ ಮುಖದ ಮೇಲೆ ಆಗಿರುವ ಗಾಯಗಳಲ್ಲಿ ಯಾವುದು ನಿಜ ಯಾವುದು ಸುಳ್ಳು ಹುಡುಕಿ’ ಅಂತಾ ಅಭಿಮಾನಿಗಳಿಗೆ ಸವಾಲ್ ಹಾಕಿದ್ದಾರೆ. ನಂತರ ಮುಂದಿನ ಇನ್ಸ್ಟಾ ಸ್ಟೋರಿಯಲ್ಲಿ ಅವರೇ ಉತ್ತರ ತಿಳಿಸಿದ್ದು, ‘ಹುಬ್ಬಿನ ಮೇಲೆ ಆಗಿರುವುದು ನಿಜವಾದ ಗಾಯ, ಕೆನ್ನೆಯ ಮೇಲೆ ಆಗಿರುವುದು ಫೇಕ್ ಗಾಯ’ ಎಂದು ಹೇಳಿದ್ದಾರೆ.
ಪ್ರಿಯಾಂಕಾ ನಟನೆಯ ಸ್ಪೈ ವೆಬ್ ಸರಣಿ(Web Series) ‘ಸಿಟಾಡೆಲ್’ ಸದ್ಯಕ್ಕೆ ಲಂಡನ್ನಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ‘ಸಿಟಾಡೆಲ್’ ಅಮೆಜಾನ್ ಬೆಂಬಲಿತ ಯೋಜನೆಯನ್ನು ರುಸ್ಸೋ ಬ್ರದರ್ಸ್ ನಿರ್ವಹಿಸುತ್ತಿದ್ದಾರೆ. ‘ಗೇಮ್ ಆಫ್ ಥ್ರೋನ್ಸ್’ ಸ್ಟಾರ್ ನಟ ರಿಚರ್ಡ್ ಮ್ಯಾಡೆನ್ ಕೂಡ ಇದರಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Indian Idol 12 Winner: ಪವನ್ ದೀಪ್ ರಾಜನ್ ಮುಡಿಗೆ ಇಂಡಿಯನ್ ಐಡಲ್ 12 ಪ್ರಶಸ್ತಿ
ಪ್ರಿಯಾಂಕಾ ‘ಟೆಕ್ಸ್ಟ್ ಫಾರ್ ಯು’ ಚಿತ್ರದಲ್ಲಿ ಸೆಲೀನ್ ಡಿಯೋನ್ ಮತ್ತು ಸ್ಯಾಮ್ ಹ್ಯೂಘನ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಹೊರತಾಗಿ ಪ್ರಿಯಾಂಕಾ ಅವರು ‘ಮ್ಯಾಟ್ರಿಕ್ಸ್ 4’ ಮತ್ತು ಇತ್ತೀಚೆಗೆ ಘೋಷಿಸಿದ ಬಾಲಿವುಡ್(Bollywood) ಚಿತ್ರ ‘ಜೀ ಲೇ ಜರಾ’ದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ನಟ-ನಿರ್ಮಾಪಕ ಫರ್ಹಾನ್ ಅಖ್ತರ್ ‘ಜೀ ಲೇ ಜರಾ’ ಮೂಲಕ ಮತ್ತೆ ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ